For Quick Alerts
  ALLOW NOTIFICATIONS  
  For Daily Alerts

  ರಣ್‌ವೀರ್ ಬೆತ್ತಲೆ ಫೋಟೊಶೂಟ್, FIR; ಶಾರುಖ್ ನಾಲಿಗೆ ಮೇಲೆ ಮಚ್ಚೆ ಇದ್ಯಾ?

  |

  ಬಾಲಿವುಡ್ ನಟ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ವಿವಾದ ಸೃಷ್ಟಿಸಿ ನಟನ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ. ಆದರೆ ಈ ರೀತಿ ಆಗುತ್ತೆ ಅಂತ 5 ವರ್ಷಗಳ ಹಿಂದೆ ಕಿಂಗ್ ಖಾನ್ ಶಾರುಖ್ ಭವಿಷ್ಯ ನುಡಿದಿದ್ದರು ಅಂದರೆ ನಿಮಗೂ ಅಚ್ಚರಿ ಆಗುತ್ತದೆ.

  ಪೇಪರ್ ಮ್ಯಾಗಜೀನ್‌ಗಾಗಿ ನಟ ರಣ್‌ವೀರ್ ಸಿಂಗ್ ಬೆತ್ತಲಾಗಿ ಕ್ಯಾಮರಾ ಮುಂದಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 'ಗುಂಡೇ' ನಟನ ವರ್ತನೆಯ ಬಗ್ಗೆ ಪರ ವಿರೋಧ ಚರ್ಚೆ ಇನ್ನು ನಿಂತಿಲ್ಲ. ಬೆತ್ತಲೆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ರಣ್‌ವೀರ್ ವಿರುದ್ಧ ಐಪಿಸಿ ಸೆಕ್ಷನ್ 292, 293, 509 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67A ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಣವೀರ್ ಬೆತ್ತಲಾಗುವ ಮೂಲಕ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಮುಂಬೈನ ಎನ್‌ಜಿಓ ಒಂದರ ಅಧಿಕಾರಿಯೊಬ್ಬರು ರಣ್ವೀರ್ ಸಿಂಗ್ ವಿರುದ್ಧ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದು, ರಣ್‌ವೀರ್ ಸಿಂಗ್ ಕಾನೂನು ಹೋರಾಟಕ್ಕೆ ಎದುರಿಸುವಂತಾಗಿದೆ.

  ಕ್ಯಾಮರಾ ಮುಂದೆ ಬೆತ್ತಲೆ ಪೋಸ್ ಕೊಡಲು ರಣ್‌ವೀರ್ ಸಿಂಗ್ ಪಡೆದ ಸಂಭಾವನೆ ಬಲು ದೊಡ್ಡದು!ಕ್ಯಾಮರಾ ಮುಂದೆ ಬೆತ್ತಲೆ ಪೋಸ್ ಕೊಡಲು ರಣ್‌ವೀರ್ ಸಿಂಗ್ ಪಡೆದ ಸಂಭಾವನೆ ಬಲು ದೊಡ್ಡದು!

  ಕೆಲ ವರ್ಷಗಳ ಹಿಂದೆ ಶಾರುಖ್ ಖಾನ್ ಹಾಗೂ ಆಲಿಯಾ ಭಟ್ 'ಡಿಯರ್ ಜಿಂದಗಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಶಾರುಖ್ ಖಾನ್‌ಗೆ ವಿಚಿತ್ರ ಪ್ರಶ್ನೆ ಎದುರಾಗಿತ್ತು. ಒಂದು ವೇಳೆ 'ರಣವೀರ್ ಸಿಂಗ್ ಅರೆಸ್ಟ್ ಆಗುವುದಾದರೆ ಅಥವಾ ಆತನ ವಿರುದ್ಧ ಕೇಸ್ ಬೀಳುವುದಾದರೆ ಯಾವಾ ಕಾರಣಕ್ಕೆ?' ಕರಣ್ ಜೋಹರ್ ಕೇಳಿದ್ದರು. ಅದಕ್ಕೆ ಉತ್ತರಿಸಿದ ಕಿಂಗ್ ಖಾನ್, 'ಬಟ್ಟೆ ಧರಿಸಿದ್ದಕ್ಕೆ ಅಥವಾ ಬಟ್ಟೆ ಧರಿಸದೇ ಇದ್ದ ಕಾರಣಕ್ಕೆ' ಎಂದು ನಗೆ ಚಟಾಕಿ ಹಾರಿಸಿದ್ದರು. ವಿಪರ್ಯಾಸ ಅಂದರೆ ಹೆಚ್ಚು ಕಡಿಮೆ ಶಾರುಖ್ ಭವಿಷ್ಯ ಈಗ ನಿಜವಾದಂತೆ ಕಾಣುತ್ತಿದೆ.

   ಹೀಗಾಗುತ್ತೆ ಎಂದು ಯಾರು ಅಂದುಕೊಂಡಿರಲಿಲ್ಲ!

  ಹೀಗಾಗುತ್ತೆ ಎಂದು ಯಾರು ಅಂದುಕೊಂಡಿರಲಿಲ್ಲ!

  ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ವಿಚಾರ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಕೆಲ ಅಭಿಮಾನಿಗಳು ರಣ್‌ವೀರ್ ಧೈರ್ಯವನ್ನು ಮೆಚ್ಚಿಕೊಂಡಿದ್ದರೆ ಮತ್ತೆ ಕೆಲವರು ಇದೆಲ್ಲಾ ಬೇಕಿತ್ತಾ? ಇದರಿಂದ ಯುವಜನತೆ ದಾರಿ ತಪ್ಪುತ್ತದೆ ಎಂದು ಹೇಳುತ್ತಿದ್ದಾರೆ. ಈ ಬೆತ್ತಲೆ ಫೋಟೊಶೂಟ್ ಇಷ್ಟೆಲ್ಲಾ ರಾದ್ದಾಂತ ಸೃಷ್ಟಿಸುತ್ತದೆ ಎಂದು ಯಾರು ಅಂದುಕೊಂಡಿರಲಿಲ್ಲ.

  ಪುರುಷರ ಬೆತ್ತಲೆ ಫೋಟೊವನ್ನು ಮಹಿಳೆಯರು ನೋಡಲು ಇಷ್ಟ ಪಡುತ್ತಾರಾ? ಸಮೀಕ್ಷೆಗೆ ಇಳಿದ RGV!ಪುರುಷರ ಬೆತ್ತಲೆ ಫೋಟೊವನ್ನು ಮಹಿಳೆಯರು ನೋಡಲು ಇಷ್ಟ ಪಡುತ್ತಾರಾ? ಸಮೀಕ್ಷೆಗೆ ಇಳಿದ RGV!

   ಬರ್ಟ್ ರೆನಾಲ್ಡ್ಸ್ ಪ್ರೇರಣೆ

  ಬರ್ಟ್ ರೆನಾಲ್ಡ್ಸ್ ಪ್ರೇರಣೆ

  ಹಾಲಿವುಡ್‌ನಲ್ಲಿ ನಟ, ನಟಿಯರು ಬೆತ್ತಲೆ ಫೋಟೊಶೂಟ್ ಮಾಡಿಸೋದು ಕಾಮನ್. ದಶಕಗಳ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಅಮೆರಿಕದ ನಟ ಬರ್ಟ್ ರೆನಾಲ್ಡ್ಸ್‌ ಇಂತದ್ದೆ ಫೋಟೂಶೂಟ್‌ನಿಂದ ಸುದ್ದಿಯಾಗಿದ್ದರು. ಆತನ ಗೌರವ ಸೂಚಕವಾಗಿ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಂಡಿದ್ದರು.

   ರಣ್‌ವೀರ್ ಬೆತ್ತಲೆ ಫೋಟೊಶೂಟ್ ಟ್ರೆಂಡ್

  ರಣ್‌ವೀರ್ ಬೆತ್ತಲೆ ಫೋಟೊಶೂಟ್ ಟ್ರೆಂಡ್

  5 ದಿನಗಳ ಹಿಂದೆ ರಣ್‌ವೀರ್ ಬೆತ್ತಲೆ ಫೋಟೊಗಳು ವೈರಲ್ ಆಗುತ್ತಿದ್ದಂತೆ ಇಂತಹ ಸಾಕಷ್ಟು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಲು ಶುರುವಾಯಿತು. ರಣ್‌ವೀರ್ ಭಾರೀ ಟ್ರೋಲ್‌ಗೂ ಗುರಿಯಾದರು. ಇನ್ನು ಕೆಲ ನಟರ ಇಂತದ್ದೇ ಫೋಟೊಗಳನ್ನು ನೆಟ್ಟಿಗರು ಪೋಸ್ಟ್ ಮಾಡಿದ್ದರು. ಕಾಲಿವುಡ್ ನಟ ವಿಷ್ಣು ವಿಶಾಲ್ ಪತ್ನಿಯಿಂದಲೇ ಅರೆ ಬೆತ್ತಲೆ ಫೋಟೊ ಕ್ಲಿಕ್ಕಿಸಿ, ಟ್ರೆಂಡ್‌ನಲ್ಲಿ ಭಾಗಿಯಾಗುತ್ತಿರುವುದಾಗಿ ಪೋಸ್ಟ್ ಮಾಡಿದ್ದರು.

   ದೀಪಿಕಾಳಿಗೆ ಫ್ಯಾನ್ಸ್ ಕ್ಲಾಸ್

  ದೀಪಿಕಾಳಿಗೆ ಫ್ಯಾನ್ಸ್ ಕ್ಲಾಸ್

  ರಣ್‌ವೀರ್‌ ಫೋಟೊಶೂಟ್ ವಿವಾದ ಸೃಷ್ಟಿಸುತ್ತಿದ್ದಂತೆ ಅಭಿಮಾನಿಗಳು ದೀಪಿಕಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ದೀಪಿಕಾ ಕೊಂಚ ಈ ಕಡೆ ನೋಡಿ, ನಿಮ್ಮ ಪತಿಗೆ ತಿಳಿ ಹೇಳಿ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ ಮಾಡಿದ್ದರು. ಆದರೆ ಈ ಫೋಟೊಶೂಟ್‌ ಬಗ್ಗೆ ದೀಪಿಕಾ ಈವರೆಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ.

  English summary
  5 Years Back Sharuk khan Said Ranveer Singh Will Get Grrested For Not Wearing Clothes. Know More.
  Friday, July 29, 2022, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X