ಮಾಲ್ಡೀವ್ಸ್‌ನಲ್ಲಿ ಮಲೈಕಾ ಅರೋರಾ, ಸೌಂದರ್ಯ ಸಮರ ಸೋತವನೇ ಅಮರ ಎಂದ ಫ್ಯಾನ್ಸ್..!
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿಮಣಿಯರ ಪೈಕಿ ಬಾಲಿವುಡ್ ನ ಮಲೈಕಾ ಅರೋರಾ ಪ್ರಮುಖರು. ವಯಸ್ಸು ಐವತ್ತಾದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿಯನ್ನ ಹೊಂದಿರುವ ಮಲೈಕಾ ಅವರ ಕೆಲ ಫೋಟೋಗಳು ಈಗ ವೈರಲ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಚಿತ್ತವನ್ನೂ ಕದಿಯುವುದಲ್ಲದೇ ಪಡ್ಡೆಗಳ ಚಡಪಡಿಕೆಯನ್ನೂ ಹೆಚ್ಚಿಸಿವೆ.
ಮಲೈಕಾ ಅವರ ಈ ಮಾದಕ ನೋಟಕ್ಕೆ ಮನ ಸೋತ ಅನೇಕರು ತಮ್ಮ ತಮ್ಮ ಮನದ ಮಾತುಗಳನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಮಲೈಕಾಗೆ ನಿಜವಾಗಿಯೂ ಐವತ್ತು ವಯಸ್ಸಾಗಿದೆಯಾ ಎನ್ನುವ ಅನುಮಾನ ವ್ಯಕ್ತಪಡಿಸಿದರೆ ಇನ್ನೂ ಹಲವರು ಅರ್ಜುನ್ ಕಪೂರ್ ಅವರಿಂದ ದೂರವಾದ ನಂತರ ಮಲೈಕಾ ಅರೋರಾ ತುಂಬಾನೇ ಬದಲಾಗಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕಪಡಿಸುತ್ತಿದ್ದಾರೆ.

ಅಂದ್ಹಾಗೇ ಮಲೈಕಾ ಅರೋರಾ ಈ ಹಿಂದೆ ಅರ್ಬಾನ್ ಖಾನ್ ಜೊತೆ ಮದುವೆಯಾಗಿದ್ದರು. ಆ ನಂತರ ವಯಸ್ಸಿನಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವರಾದ ಅರ್ಜುನ್ ಕಪೂರ್ ಅವರ ಜೊತೆ ಪ್ರೀತಿ ಪ್ರೇಮ ಎಂದು ಓಡಾಡಿದರು. ಪ್ರಣಯ ಪಕ್ಷಿಗಳಂತೆ ಹಾರಾಡಿದರು. ಇನ್ನೇನು ಇಬ್ಬರು ಮದುವೆಯಾಗಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಾದ ದೂರವಾಗಿ ಎಲ್ಲರಿಗೆ ಶಾಕ್ ಕೊಟ್ಟಿದ್ದರು ಮಲೈಕಾ.
ಇಂಥಾ ಮಲೈಕಾ ಕಳೆದ ಕೆಲ ತಿಂಗಳಿನಿಂದ ಬೇರೆಯವರ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಆ ಕಡೆ ಅಂಬಾನಿ ಮಗನ ಮದುವೆಯಲ್ಲಿ ಇಡೀ ಬಾಲಿವುಡ್ ಕುಣಿದು ಕುಪ್ಪಳಿಸುತ್ತಿದ್ದರೆ ಈ ಕಡೆ ಮಲೈಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ನಾಲ್ಕು ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದರು. ಮಂಜು ಮಂಜಾದ ವ್ಯಕ್ತಿಯ ಫೋಟೋ ತೆಗೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.
ಹೀಗಾಗಿಯೇ ಅವತ್ತು ಎದೆಯೊಡೆದುಕೊಂಡ ಅನೇಕರು ಮಲೈಕಾ ಜೊತೆ ಇರುವ ವ್ಯಕ್ತಿಯ ಕುಲ, ಗೋತ್ರ , ಹುಡುಕಾಡಲು ಶುರು ಮಾಡಿದ್ದರು. ಆರು ವರ್ಷಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದ ಅರ್ಜುನ್ ಕಪೂರ್ ಪ್ರೀತಿಗೆ ಬೆಲೆನೇ ಇಲ್ವಾ ಎಂಬ ಪ್ರಶ್ನೆಯನ್ನು ಕೇಳಲು ಶುರು ಮಾಡಿದ್ದರು. ಅರ್ಜುನ್ ಕಪೂರ್ ಬದಲು ಮಲೈಕಾ ಹೃದಯ ಪಾಲಾಗಿದ್ದಾದರೂ ಯಾರಿಗೆ ಎಂದು ತನಿಖೆ ಆರಂಭ ಮಾಡಿದ್ದರು.
ಹೀಗಿರುವಾಗ ಈಗ ಮಲೈಕಾ ಅರೋರಾ ಅವರ ಈ ಹೊಸ ವಿಡಿಯೋ ಮತ್ತು ಆ ವಿಡಿಯೋದಿಂದ ತೆಗೆಯಲಾದ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮಲೈಕಾ ಅರೋರಾ ಜೋತೆ ಅರ್ಜುನ್ ಕಪೂರ್ ಅವರ ಹೆಸರು ಕೂಡ ಈ ಮೂಲಕ ಇನ್ನೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದೆ. ಉಳಿದಂತೆ ಕೆಲ ದಿನಗಳ ಹಿಂದೆ ಕೆಲವು ವಿಷಯಗಳು ಮತ್ತು ಟ್ರೋಲ್‌ಗಳು ನನ್ನ ಮೇಲೆ ಕೂಡ ಪರಿಣಾಮ ಬೀರುತ್ತಿದ್ದವು ಎಂದು ಮಲೈಕಾ ಹೇಳಿದ್ದರು. ಇದೆಲ್ಲದರಿಂದ ನನಗೆ ನಿದ್ದೆಯೇ ಬರುತ್ತಿರಲಿಲ್ಲ ಎಂದಿದ್ದರು. ಹಲವಾರು ಬಾರಿ ನೊಂದು ಬೆಂದು ಕಣ್ಣೀರು ಹಾಕಿರುವುದಾಗಿಯೂ ಕೂಡ ಮಲೈಕಾ ಹೇಳಿದ್ದರು.


Click it and Unblock the Notifications











