For Quick Alerts
  ALLOW NOTIFICATIONS  
  For Daily Alerts

  52ನೇ ಗೋವಾ ಸಿನಿಮೋತ್ಸವ: ಸ್ಪರ್ಧೆಗೆ 15 ಸಿನಿಮಾಗಳು

  |

  ಗೋವಾದಲ್ಲಿ ನಡೆಯಲಿರುವ 52ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದ ಅಂತರಾಷ್ಟ್ರೀಯ ಸಿನಿಮಾ ಸ್ಪರ್ಧೆಗೆ 15 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಪಟ್ಟಿಯಲ್ಲಿ ಮೂರು ಭಾರತೀಯ ಸಿನಿಮಾಗಳಿವೆ.

  ಫಿಕ್ಷನ್ ವಿಭಾಗದಲ್ಲಿ ಅಂತರಾಷ್ಟ್ರೀಯ ಸಿನಿಮಾಗಳ ಜೊತೆಗೆ ಮೂರು ಭಾರತೀಯ ಸಿನಿಮಾಗಳು ಸ್ಪರ್ಧೆ ಮಾಡಲಿವೆ. ಆಯ್ಕೆ ಆಗುವ ಅತ್ಯುತ್ತಮ ಸಿನಿಮಾಕ್ಕೆ 40 ಲಕ್ಷ ಬಹುಮಾನ ನೀಡಲಾಗುತ್ತದೆ.

  'ಎನಿ ಡೇ ನೌ'; ನಿರ್ದೇಶನ: ಹ್ಯಾಮಿ ರಾಮೆಝನ್‌; ಫಿನ್‌ಲ್ಯಾಂಡ್‌, 'ಚಾರ್ಲೆಟ್‌' ಪರುಗ್ವೆ, 'ಇಂಟ್ರೆಗೇಡ್‌' ನಿರ್ದೇಶನ ರಾದು ಮೌಂಟೀನ್‌, ರೋಮಾನಿಯಾ, 'ಲ್ಯಾಂಡ್‌ ಆಫ್‌ ಡ್ರೀಮ್ಸ್‌', ನಿರ್ದೇಶನ, ಶಿರೀನ್‌ ನಿಶಾತ್‌, ಶೋಜಾ ಅಜಾರಿ; ನ್ಯು ಮೆಕ್ಸಿಕೊ, ಅಮೆರಿಕಾ, 'ಲೀಡರ್‌' ನಿರ್ದೇಶನ ಕಟಿಯಾ ಪ್ರಿವೆಜೆಂಕವ್‌; ಪೋಲೆಂಡ್‌, 'ಮಾಸ್ಕೊ ಡಸ್‌ ನಾಟ್‌ ಹ್ಯಾಪ್ಪನ್‌' ನಿರ್ದೇಶನ ದಿಮಿತ್ರಿ ಫೆದ್ರೊ; ರಷ್ಯಾ, 'ನೋ ಗ್ರೌಂಡ್‌ ಬೆನೆತ್‌ ದ ಫೀಟ್‌' ನಿರ್ದೇಶನ ಮೊಹ್ಮದ್‌ ರಾಬ್ಬಿ ಮೃಧಾ; ಬಾಂಗ್ಲಾದೇಶ, 'ಒನ್ಸ್‌ ವಿ ವೇರ್‌ ಗುಡ್‌ ಫಾರ್‌ ಯು' ನಿರ್ದೇಶನ ಬ್ರಾಂಕೊ ಸೆಮಿತ್‌; ಕ್ರೋಷಿಯಾ, ಬೋಸ್ನಿಯಾ, ಹಾರ್ಜೆಗೊವಿನಾ, 'ರಿಂಗ್‌ ವಾಂಡರಿಂಗ್‌' ನಿರ್ದೇಶನ ಮಸಾಕಾಝು ಕನೆಕೊ; ಜಪಾನ್‌, 'ಸೇವಿಂಗ್‌ ಒನ್‌ ಹು ವಾಸ್‌ ಡೆಡ್‌' ನಿರ್ದೇಶನ ವಕ್ಲಾವ್‌ ಕದ್ರಂಕಾ; ಸಿಜೆಕ್‌ ರಿಪಬ್ಲಿಕ್‌. 'ದ ಡಾರ್ಮ್‌' ನಿರ್ದೇಶನ ರೋಮನ್‌ ವಾಸಿನೋವ್‌; ರಷ್ಯಾ. 'ದಿ ಫಸ್ಟ್‌ ಫಾಲನ್‌' ನಿರ್ದೇಶನ ರೋಡ್ರಿಗೊ ಡಿ ಒಲಿವೆರಾ; ಬ್ರಾಝಿಲ್‌.

  ಈ ಅಂತರಾಷ್ಟ್ರೀಯ ಸಿನಿಮಾಗಳ ಜೊತೆಗೆ ಮರಾಠಿಯ 'ಗೋದಾವರಿ' ನಿರ್ದೇಶನ: ನಿಖಿಲ್‌ ಮಹಾಜನ್‌. 'ಮಿ ವಸಂತರಾವ್‌; ನಿ: ನಿಪುಮ್‌ ಅವಿನಾಶ್‌ ಧರ್ಮಾಧಿಕಾರಿ ಹಾಗೂ ಡಿಮಸಾ ಭಾಷೆಯ 'ಸೆಮ್ಖೋರ್‌' ನಿರ್ದೇಶನ ಆಮೀ ಬುರಾ ಸ್ಪರ್ಧಿಸಲಿವೆ. ಭಾರತದಿಂದ ಸ್ಪರ್ಧೆಗೆ ಈ ಮೂರು ಸಿನಿಮಾಗಳಷ್ಟೆ ಆಯ್ಕೆಯಾಗಿವೆ.

  ಉತ್ತಮ ಚಲನಚಿತ್ರ ಸುವರ್ಣ ಮಯೂರ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು ₹40,00,000/ ನಗದು ಬಹುಮಾನವನ್ನು ಒಳಗೊಂಡಿದೆ. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಮನಾಗಿ ಹಂಚಲಾಗುತ್ತದೆ. ನಿರ್ದೇಶಕರಿಗೆ ಸುವರ್ಣ ಮಯೂರ ನೀಡಲಾಗತ್ತದೆ. ಜೊತೆಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ನಿರ್ಮಾಪಕರಿಗೆ ನಗದು ಪ್ರಶಸ್ತಿಯೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

  ಉತ್ತಮ ನಿರ್ದೇಶಕ ಪ್ರಶಸ್ತಿಯು ರಜತ ಮಯೂರ, ಪ್ರಮಾಣ ಪತ್ರ ಹಾಗೂ ₹15,00,000 ನಗದು ಬಹುಮಾನ ಒಳಗೊಂಡಿರುತ್ತದೆ. ಉತ್ತಮ ನಟ ಪ್ರಶಸ್ತಿಯು ರಜತಮಯೂರ ಪ್ರಮಾಣಪತ್ರ ಹಾಗೂ ₹ 10,00,000 ನಗದು ಬಹುಮಾನ ಒಳಗೊಂಡಿರುತ್ತದೆ. ಉತ್ತಮ ನಟಿ ಪ್ರಶಸ್ತಿಯು ರಜತಮಯೂರ ಪ್ರಮಾಣಪತ್ರ ಹಾಗೂ ₹ 10,00,000 ನಗದು ಬಹುಮಾನ ಒಳಗೊಂಡಿರುತ್ತದೆ.

  52nd Goa International Film Festival 15 Movies In International Competition

  ತೀರ್ಪುಗಾರರ ಆಯ್ಕೆ ವಿಶೇಷ ಬಹುಮಾನವು ರಜತಮಯೂರ ಪ್ರಮಾಣಪತ್ರ ಹಾಗೂ ₹ 15,00,000 ನಗದು ಬಹುಮಾನ. (ಒಂದು ಸಿನಿಮಾದ ಯಾವುದೇ ಅಂಶಗಳು ತೀರ್ಪುಗಾರರಿಗೆ ಇಷ್ಟವಾದಲ್ಲಿ ಅದು ಮೆಚ್ಚುಗೆಯ ಬಹುಮಾನಕ್ಕೆ ಭಾಜನವಾಗುತ್ತದೆ. ಸಿನಿಮಾದ ಯಾವುದೇ ಕ್ಷೇತ್ರವಾಗಿರಲಿ, ನಟ, ನಟಿ, ಸ್ಕ್ರೀನ್‌ಪ್ಲೇ ಹೀಗೆ ಯಾವುದೇ ಅಂಶವಾದರೂ ಸರಿ) ವೈಯಕ್ತಿಕ ಸಾಧನೆಗೆ ಮೆಚ್ಚುಗೆ ವ್ಯಕ್ತವಾದರೆ ವ್ಯಕ್ತಿಗೆ ಪ್ರಶಸ್ತಿ ನೀಡಲಾಗುವುದು. ಸಿನಿಮಾ ಇಷ್ಟವಾದಲ್ಲಿ ಸಿನಿಮಾದ ನಿರ್ದೇಶಕರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

  ಐದು ದೇಶಗಳ ಐದು ಮಂದಿ ಸಿನಿಮಾ ತಜ್ಞರು ಸಿನಿಮಾಗಳನ್ನು ವೀಕ್ಷಿಸಿ ಪ್ರಶಸ್ತಿ ಘೋಷಿಸುತ್ತಾರೆ. ಭಾರತದ ನಿಲಾ ಮದ್‌ಹಬ್ ಪಾಂಡ ಅವರು ಜಡ್ಜ್ ಪ್ಯಾನೆಲ್‌ನಲ್ಲಿದ್ದಾರೆ. ಇವರ ಜೊತೆಗೆ ಬ್ರಿಟನ್, ಇರಾನ್, ಶ್ರೀಲಂಕಾ ಹಾಗೂ ಕೊಲಂಬಿಯಾದ ಸಿನಿಮಾ ತಜ್ಞರು ಸಹ ಇದ್ದಾರೆ.

  52ನೇ ಗೋವಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವವು ನವೆಂಬರ್ 20 ರಂದು ಆರಂಭಗೊಳ್ಳಲಿದ್ದು 28 ಕ್ಕೆ ಅಂತ್ಯವಾಗಲಿದೆ.

  English summary
  52nd Goa International film festival Three Indian movies competing in International movie competition. Film fest will start from November 20.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X