For Quick Alerts
  ALLOW NOTIFICATIONS  
  For Daily Alerts

  52ನೇ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

  |

  52ನೇ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನವೆಂಬರ್ 20ರಂದು ಚಾಲನೆ ನೀಡಲಾಗಿದೆ. ಗೋವಾದ ಪಣಜಿಯಲ್ಲಿ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಗೋವಾ ವಿಶ್ವವಿದ್ಯಾನಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿದ್ದು, ಹಲವು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ. ವಿಶೇಷ ಎಂದರೇ ಉದ್ಘಾಟನಾ ಸಮಾರಂಭದಲ್ಲಿ ನಿಧನರಾಗಿರುವ ನಟ ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್, ಹಿರಿಯ ನಟ ದಿಲೀಪ್ ಕುಮಾರ್ ಸೇರಿದಂತೆ ಹಲವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

  ಇದೇ ಸಂದರ್ಭದಲ್ಲಿ ನಟಿ ಹೇಮಮಾಲಿನಿ ಅವರಿಗೆ 'ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್‌ ದಿ ಇಯರ್. ಪ್ರಶಸ್ತಿಯನ್ನು ನೀಡಲಾಯ್ತು. ಹಾಗೇ ಹಾಲಿವುಡ್‌ನ ಚಿತ್ರ ನಿರ್ದೇಶಕ ಮಾರ್ಟಿನ್ಸ್ ಕೋರ್ಸೇಫಿ ಹಾಗೂ ಹಂಗೇರಿ ದೇಶದ ಚಿತ್ರ ನಿರ್ದೇಶಕ ಇಸ್ತಾಬಾನ್ ಜಾಬೊ ಅವರಿಗೆ ಸತ್ಯಜಿತ್ ರೈ ಜೀವಮಾನ ಸಾಧಕ ಪ್ರಶಸ್ತಿಯನ್ನು ನೀಡಲಾಯಿತು.

  ಈ ಸಂದರ್ಭದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ, ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್, ಖ್ಯಾತ ನಟ ಸಲ್ಮಾನ್ ಖಾನ್ ಸೇರಿದಂತೆ ಹಲವು ದೇಶಗಳ ಚಲನಚಿತ್ರ ಕ್ಷೇತ್ರದ ನಟ ನಟಿಯರು ಭಾಗಿಯಾಗಿದ್ದರು.

  ಉದ್ಘಾಟನಾ ಸಮಾರಂಭದ ನಂತರ ಕರ್ಸಲೋಸ್ ಸೌರಾ ನಿರ್ದೇಶನದ ಸ್ಪ್ಯಾನಿಷ್ ಚಿತ್ರ 'ದಿ ಕಿಂಗ್ ಆಫ್ ಆಲ್‌ ದ ವರ್ಲ್ಡ್' ಪ್ರದರ್ಶನಗೊಂಡಿದೆ.

  ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ " ಗೋವಾದ ಮಾಜಿ ಮುಖ್ಯಮಂತ್ರಿ ದಿ ಮನೋಹರ್ ಪರೀಕರ್ 2004ರಲ್ಲಿ ಗೋವಾಕ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸ್ವಾಗತಿಸಿದರು. ಅವತ್ತಿನಿಂದ ವರ್ಷದಿಂದ ವರ್ಷಕ್ಕೆ ಇಲ್ಲಿ ಅತ್ಯುತ್ತಮವಾಗಿ ಚಲನಚಿತ್ರ ಮಹೋತ್ಸವ ಆಯೋಜಿಸಲಾಗುತ್ತಿದೆ.

  52nd International film festival of india started in Goa

  ಗೋವಾ ರಾಜ್ಯ ಒಂದು ಸುಂದರ ಪ್ರವಾಸಿ ತಾಣ ಹಾಗೂ ಫಿಲ್ಮ್ ಶೂಟಿಂಗ್ ಡೆಸ್ಟಿನೇಷನ್ ಕೂಡ ಹೌದು. ಇಲ್ಲಿ ಫಿಲ್ಮ್ ಶೂಟಿಂಗ್‌ಗಾಗಿ ಹೆಚ್ಚು ಒತ್ತು ನೀಡಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಗೋವಾದಲ್ಲಿ ಶೇ 100ರಷ್ಟು ವ್ಯಾಕ್ಸಿನೇಶನ್ ಮುಗಿಯಲಿದ್ದು, ನಂತರ ಗೋವಾದಲ್ಲಿ ಹೆಚ್ಚು ಸಿನಿಮಾಗಳ ಶೂಟಿಂಗ್ ಆರಂಭವಾಗಲಿದೆ. ಹಾಗೇ ಇಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಸಹಕಾರ ನೀಡಲಿದೆ ಎಂಬ ವಿಶ್ವಾಸ ಇದೆ" ಎಂದಿದ್ದಾರೆ

  ಅನುರಾಗ್ ಠಾಕೂರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, "ಗೋವಾ ರಾಜ್ಯ ಸ್ವಾತಂತ್ರ್ಯಗೊಂಡು ಪ್ರಸಕ್ತ 60 ವರ್ಷ ಆಗಿದೆ. ಗೋವಾಗೆ ಇದು ಮಹತ್ವದ ವರ್ಷ. ಡ್ರೀಮ್ ಗರ್ಲ್ ಹೇಮಾಮಾಲಿನಿ ಅವರು ಇಂಡಿಯನ್ ಪರ್ಸನಾಲಿಟಿ ಅವಾರ್ಡ್ ಪಡೆದಿರುವುದಕ್ಕೆ ನಾನು ಅಭಿನಂದಿಸುತ್ತೇನೆ" ಎಂದಿದ್ದಾರೆ.

  English summary
  52nd International Film Festival of India started in Goa. For the first time, OTT platforms would also be a part of it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X