ಕಿರುತೆರೆಯ ಈ 6 ಕಾರ್ಯಕ್ರಮಗಳು ಕೊನೆಗೊಳ್ಳಲಿದೆ.!

By Bharath Kumar

ಇತ್ತೀಚಿಗೆ ಸಿನಿಮಾಗಳಿಗಿಂತ ಟಿವಿ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚಿದೆ. ಧಾರಾವಾಹಿಗಳು, ರಿಯಾಲಿಟಿ ಶೋಗಳು, ಸಿಂಗಿಂಗ್, ಗೇಮ್ ಶೋ, ಹೀಗೆ ಕಿರುತೆರೆಗೆ ಪ್ರೇಕ್ಷಕರು ಹೊಂದಿಕೊಂಡಿದ್ದಾರೆ.

ಆ ಪ್ರೇಕ್ಷಕರನ್ನ ಹಿಡಿದಿಡಲು ವಾರದಿಂದ ವಾರಕ್ಕೆ ನೂತನ ಕಾರ್ಯಕ್ರಮಗಳು, ನೂತನ ಧಾರಾವಾಹಿಗಳು ಆರಂಭವಾಗುತ್ತಿದ್ದು, ಟಿವಿ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ. ಇನ್ನು ಟಿವಿ ನಿರ್ಮಾಣ ಸಂಸ್ಥೆಗಳಿಗೂ ಇದರಿಂದ ಹೆಚ್ಚಿನ ಆದಾಯ ಸಿಗುತ್ತಿರುವುದು ಇದಕ್ಕೆ ಕಾರಣ.

ಹೀಗಿರುವಾಗ, ಹಿಂದಿಯ ಕೆಲವು ಖ್ಯಾತ ಕಾರ್ಯಕ್ರಮಗಳು ಅಂತ್ಯಗೊಳ್ಳಲಿದೆ. ಸಾಕಷ್ಟು ವರ್ಷಗಳಿಂದ ಟಿವಿ ವೀಕ್ಷಕರನ್ನ ರಂಜಿಸಿದ ಶೋಗಳು ಅಂತ್ಯವಾಗುವ ಸೂಚನೆ ನೀಡಿದೆ. ಹಾಗಿದ್ರೆ ಯಾವೆಲ್ಲ ಟಿವಿ ಕಾರ್ಯಕ್ರಮಗಳು ಅಂತ್ಯವಾಗುತ್ತಿದೆ ಎಂಬುದನ್ನ ನೋಡಲು ಮುಂದೆ ಓದಿ.....

ನಾಮಕರಣ್

ನಾಮಕರಣ್

ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಮಕರಣ್' ಧಾರಾವಾಹಿ ಇದೇ ತಿಂಗಳಿನಲ್ಲಿ ಅಂತ್ಯವಾಗಲಿದೆ. ಮೇ 18 ರಂದು ಕೊನೆಯ ಶೋ ಮೂಡಿ ಬರಲಿದೆ ಎಂದು ಧಾರಾವಾಹಿ ತಂಡ ತಿಳಿಸಿದೆ. ಈ ಧಾರಾವಾಹಿಗೆ ಕಡಿಮೆ ಟಿ.ಆರ್.ಪಿ ಬರುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ದಿಲ್ ಸೇ ದಿಲ್ ತಕ್

ದಿಲ್ ಸೇ ದಿಲ್ ತಕ್

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದಿಲ್ ಸೇ ದಿಲ್ ತಕ್' ಧಾರಾವಾಹಿಯೂ ಇದೇ ತಿಂಗಳಲ್ಲಿ ಕೊನೆಗೊಳ್ಳಲಿದೆಯಂತೆ. ಆರಂಭದ ದಿನದಿಂದ ಈ ಧಾರಾವಹಿ ಹೆಚ್ಚು ಸದ್ದು ಮಾಡುತ್ತಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಟಿ.ಆರ್.ಪಿ ಕೊರತೆ ಎದುರಿಸುತ್ತಿರುವ ಈ ಧಾರಾವಾಹಿ ಮೇ 28 ರಿಂದ ಅಂತ್ಯವಾಗಲಿದೆ.

'ಬದೋ ಬಾಹು'

'ಬದೋ ಬಾಹು'

ಪ್ರಿನ್ಸ್ ನರುಲಾ ಮತ್ತು ರೈತಾಶ್ ರಾಥೋರ್ ಅಭಿನಯಿಸಿರುವ 'ಬದೋ ಬಾಹು' ಧಾರಾವಾಹಿ ಮುಂದಿನ ತಿಂಗಳು ಕೊನೆ ಕಾಣಲಿದೆ. & ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಕಲಾವಿದರ ಸಮಸ್ಯೆಯಿಂದ ಇದನ್ನ ಅಂತ್ಯಗೊಳಿಸಿ ಬೇರೆ ಧಾರಾವಾಹಿ ಆರಂಭಿಸಲು ತಂಡ ನಿರ್ಧರಿಸಿದೆಯಂತೆ. ಆದ್ರೆ, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಲಡೋ 2

ಲಡೋ 2

'ಲಡೋ 2' ಧಾರಾವಾಹಿ ಈ ತಿಂಗಳ ಅಂತ್ಯಕ್ಕೆ ಕೊನೆಯಾಗಲಿದೆಯಂತೆ. ಈ ಧಾರಾವಾಹಿಗೂ ಟಿ.ಆರ್.ಪಿ ಸಮ್ಯಸ್ಯೆಯಾಗಿರುವುದರಿಂದ ಧಾರಾವಾಹಿ ನಿಲ್ಲಿಸಲು ನಿರ್ಧಾರ ಮಾಡಲಾಗಿದೆಯಂತೆ.

ಚಂದ್ರಕಾಂತ

ಚಂದ್ರಕಾಂತ

ಏಕ್ತಾ ಕಪೂರ್ ಅವರ ಫ್ಯಾಂಟಸಿ ಶೋ 'ಚಂದ್ರಕಾಂತ-ಏಕ್ ಮಾಯಾವಿ ಪ್ರೇಮ್ ಗಾಥ' ಸೀರಿಯಲ್ ಜೂನ್ ತಿಂಗಳಲ್ಲಿ ಅಂತ್ಯವಾಗಲಿದೆಯಂತೆ. ವೀಕ್ಷಕರ ಕೊರತೆಯಿಂದ ಚಂದ್ರಕಾಂತಗೆ ಬ್ರೇಕ್ ಹಾಕಲಿದ್ದಾರೆ ಧಾರಾವಾಹಿ ತಂಡ.

ಏಕ್ ದಿವಾನ

ಏಕ್ ದಿವಾನ

ಸೋನಿ ಟಿವಿಯಲ್ಲಿ ಪ್ರಸಾರವಾಗುವ 'ಏಕ್ ದಿವಾನ' ಆರಂಭದಲ್ಲಿ ಅತಿ ನಿರೀಕ್ಷೆ ಹುಟ್ಟಿಸಿತ್ತು. ಆದ್ರೆ, ನಿರೀಕ್ಷೆಯನ್ನ ಹುಸಿಗೊಳಿಸಿದ ಕಾರಣ ಈ ಧಾರಾವಾಹಿಗೆ ಬ್ರೇಕ್ ಹಾಕಲಾಗುತ್ತಿದೆ. ಬಹುಶಃ ಈ ಧಾರಾವಾಹಿಯೂ ಇದೇ ತಿಂಗಳಲ್ಲಿ ಅಂತ್ಯ ಕಾಣಬಹುದು.

English summary
Recently, many shows were launched in various channels. While a few shows have managed to get good ratings, some of them failed to grab the viewers' attention. It is being said that the channels might axe a few shows that have failed to get good ratings, paving way for new shows. Here's the list of shows that might go off air soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X