For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್-ಕತ್ರಿನಾ ಕೈಫ್ ಹೆಸರಿನಲ್ಲಿ 638 ಕೋಟಿ.!

  |

  ಇದುವರೆಗೂ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಅಮೀರ್ ಖಾನ್ ಅಭಿನಯದ ದಂಗಾಲ್ ಮೊದಲ ಸ್ಥಾನದಲ್ಲಿದೆ. ದಾಖಲೆಗಳ ಪ್ರಕಾರ 2,024 ಕೋಟಿ ಈ ಚಿತ್ರದ ಖಾತೆಯಲ್ಲಿದೆ. ಅದಾದ ಬಳಿಕ ರಾಜಮೌಳಿ ನಿರ್ದೇಶನದ ಬಾಹುಬಲಿ ಇದೆ. 1,810 ಕೋಟಿ ಗಳಿಸಿರುವ ಬಾಹುಬಲಿ-2 ಎರಡನೇ ಸ್ಥಾನದಲ್ಲಿದೆ.

  969 ಕೋಟಿ ಗಳಿಸುವ ಮೂಲಕ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಟಾಪ್ ಚಿತ್ರಗಳ ಪೈಕಿ ಸಲ್ಲು ಭಾಯ್ ಸಿನಿಮಾ ಕೂಡ ಇದೆ. ಸಲ್ಲು ಅಭಿನಯದ ಸುಲ್ತಾನ್, ಟೈಗರ್ ಜಿಂದಾ ಹೈ ಸಿನಿಮಾಗಳು ಕೂಡ ಹೆಚ್ಚು ಗಳಿಕೆ ಕಂಡಿದೆ.

  ಬಿಡುಗಡೆಯ ಹೊಸ್ತಿಲಲ್ಲಿ 'ಭಾರತ್' ಚಿತ್ರಕ್ಕೆ ಎದುರಾಯ್ತು ಸಂಕಷ್ಟ

  ಆದರೆ ಈ 638 ಕೋಟಿ ಯಾವ ಸಿನಿಮಾ ಎಂದು ಯೋಚಿಸಬೇಡಿ. ಇದು ಕೇವಲ ಒಂದು ಸಿನಿಮಾ ಕಥೆಯಲ್ಲ. ಒಂದು ಜೋಡಿಯ ಕಥೆ. ಹೌದು, ಇದುವರೆಗೂ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಚಿತ್ರಗಳ ಒಟ್ಟಾರೆ ಗಳಿಸಿದ ಮೊತ್ತ. ಹಾಗಿದ್ರೆ, ಸಲ್ಲು ಮತ್ತು ಕ್ಯಾಟ್ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವುದು ಆ ಸಿನಿಮಾಗಳು? ಮುಂದೆ ಓದಿ.....

  ಟೈಗರ್ ಮಾಡಿದ ಮೋಡಿ

  ಟೈಗರ್ ಮಾಡಿದ ಮೋಡಿ

  2017ರ ಸೂಪರ್ ಹಿಟ್ ಸಿನಿಮಾ ಟೈಗರ್ ಜಿಂದಾ ಹೈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ವರ್ಲ್ಟ್ ವೈಡ್ 500 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಈ ಚಿತ್ರ 339 ಕೋಟಿ ನೆಟ್ ಕಲೆಕ್ಷನ್ ಹೊಂದಿದೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿ ಈ ಸಿನಿಮಾದಲ್ಲಿ ಕಮಾಲ್ ಮಾಡಿತ್ತು.

  ಏಕ್ತಾ ಟೈಗರ್

  ಏಕ್ತಾ ಟೈಗರ್

  ಅದಕ್ಕೂ ಮುಂಚೆ ತೆರೆಗೆ ಬಂದಿದ್ದ ಏಕ್ತಾ ಟೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 198 ಕೋಟಿ ಗಳಿಕೆ ಕಂಡಿರುವ ದಾಖಲೆ ಹೊಂದಿದೆ. ಈ ಎರಡು ಚಿತ್ರಗಳ ಒಟ್ಟು ಕಲೆಕ್ಷನ್ 537 ಕೋಟಿ. ಈ ಎರಡು ಸಿನಿಮಾಗಳಲ್ಲಿ ವರ್ಕೌಟ್ ಆಗಿದ್ದು ಸಲ್ಮಾನ್ ಮತ್ತು ಕತ್ರಿನಾ ಜೋಡಿ.

  ಸಲ್ಮಾನ್ ಖಾನ್ ವಿರುದ್ಧ MeToo ಬಾಂಬ್: ರೂಪದರ್ಶಿಯಿಂದ ಅತ್ಯಾಚಾರ ಆರೋಪ.!

  2008ರಲ್ಲಿ ಯುವರಾಜ

  2008ರಲ್ಲಿ ಯುವರಾಜ

  2008ರಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿಕಾ ಕೈಫ್ ಜೋಡಿಯಲ್ಲಿ ಬಂದ ಸಿನಿಮಾ ಯುವರಾಜ. ಹಾಲಿವುಡ್ ಚಿತ್ರದಿಂದ ಸ್ಫೂರ್ತಿಯಾಗಿ ತಯಾರಾಗಿದ್ದು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು. ಕೇವಲ 16.89 ಕೋಟಿ ಗಳಿಸಿ ಹೀನಾಯವಾಗಿತ್ತು.

  ಸಾಧಾರಣ ಯಶಸ್ಸು ಕಂಡಿದ್ದ ಪಾಟ್ನರ್

  ಸಾಧಾರಣ ಯಶಸ್ಸು ಕಂಡಿದ್ದ ಪಾಟ್ನರ್

  ಸಲ್ಮಾನ್ ಖಾನ್ ಮತ್ತು ಗೋವಿಂದ ಜೋಡಿಯಾಗಿ ನಟಿಸಿದ್ದ ಪಾಟ್ನರ್ ಸಿನಿಮಾ 60.05 ಕೋಟಿ ಗಳಿಕೆ ಕಂಡಿತ್ತು. ಈ ಚಿತ್ರದಲ್ಲಿ ಗೋವಿಂದು ಅವರಿಗೆ ಕತ್ರಿನಾ ಕೈಫ್ ಜೋಡಿಯಾಗಿದ್ದರು. ಸಲ್ಮಾನ್ ಗೆ ನಾಯಕಿಯಾಗಿ ಲಾರಾ ದತ್ ನಟಿಸಿದ್ದರು. ಸಲ್ಲು ಮತ್ತು ಕತ್ರಿನಾ ನಟನೆ ಈ ಚಿತ್ರದಲ್ಲಿತ್ತು ಎನ್ನುವುದು ಮರೆಯುವಂತಿಲ್ಲ.

  ಮೈನೆ ಪ್ಯಾರ್ ಕ್ಯೂ ಕಿಯಾ

  ಮೈನೆ ಪ್ಯಾರ್ ಕ್ಯೂ ಕಿಯಾ

  ಸಲ್ಮಾನ್ ಖಾನ್ ಮತ್ತು ಕತ್ರಿನಾ ಜೋಡಿ ಮೊದಲ ಸಲ ಒಂದಾಗಿದ್ದು 'ಮೈನೆ ಪ್ಯಾರ್ ಕ್ಯೂ ಕಿಯಾ' ಚಿತ್ರದಲ್ಲಿ. ಟ್ರಯಾಂಗಲ್ ಲವ್ ಸ್ಟೋರಿಯಾಗಿದ್ದ ಈ ಚಿತ್ರದಲ್ಲಿ ಸುಶ್ಮಿತಾ ಸೇನ್, ಕತ್ರಿನಾ ಇಬ್ಬರು ನಾಯಕಿಯರಿದ್ದರು. ಈ ಸಿನಿಮಾ 25.69 ಕೋಟಿ ಬಾಚಿಕೊಂಡಿತ್ತು.

  ಭಾರತ್ ಎಷ್ಟು ಗಳಿಸುತ್ತೆ?

  ಭಾರತ್ ಎಷ್ಟು ಗಳಿಸುತ್ತೆ?

  ಇಂತಹ ಅದ್ಭುತ ಸಕ್ಸಸ್ ಕೊಟ್ಟಿರುವ ಈ ಜೋಡಿ ಈಗ ಭಾರತ್ ಸಿನಿಮಾದಲ್ಲಿ ಮತ್ತೆ ಬರ್ತಿದೆ. ಜೂನ್ 5 ರಂದು ಭಾರತ್ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿದೆ. ಕ್ಯಾಟ್ ಮತ್ತು ಸಲ್ಲು ಜೋಡಿ ಎನ್ನುವುದು ಕೂಡ ಈ ಸಿನಿಮಾದ ವಿಶೇಷ.

  English summary
  Salman khan and katrina kaif pair is one of the most beautiful and successful pair in b town. now, this pair coming again to on screen with bharat. excitement is so high. will see what happen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X