For Quick Alerts
  ALLOW NOTIFICATIONS  
  For Daily Alerts

  ಗಲ್ಲಿ ಬಾಯ್ ಚಿತ್ರದ ಆಲಿಯಾ-ರಣ್ವೀರ್ ಫಿಲಂಫೇರ್ ಗೆ ನಾಮಿನೇಟೆಡ್

  By ಜೇಮ್ಸ್ ಮಾರ್ಟಿನ್
  |

  65ನೇ ಫಿಲಂ ಫೇರ್ ಪ್ರಶಸ್ತಿ 2020 ಸಮಾರಂಭದ ದಿನಾಂಕವನ್ನು ಪ್ರಕಟಿಸಲಾಗಿದೆ. ಗಲ್ಲಿ ಬಾಯ್ ಚಿತ್ರಕ್ಕಾಗಿ ಆಲಿಯಾ ಭಟ್ ಹಾಗೂ ರಣ್ವೀವ್ ಸಿಂಗ್ ಉತ್ತಮ ನಟಿ, ನಟ ಪ್ರಶಸ್ತಿ ರೇಸಿನಲ್ಲಿರುವುದು ವಿಶೇಷ. ಉಳಿದಂತೆ ಯಾವೆಲ್ಲ ಸ್ಟಾರ್ ಗಳು ನಾಮಾಂಕಿತಗೊಂಡಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ..

  ಫಿಲಂ ಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ, ಹಿಂದಿ ಮಾಸ್ ಎಂಟರ್ ಟೈನ್ ಮೆಂಟ್ ಹಾಗೂ ಕಿಡ್ಸ್ ಟಿವಿ ನೆಟ್ವರ್ಕ್ ನ ಮುಖ್ಯಸ್ಥೆ ನಿನಾ ಎಲಾವಿಯಾ ಜೈಪುರಿಯಾ ಅವರು ಫಿಲಂಫೇರ್ ಪ್ರಶಸ್ತಿ ಸಮಾರಂಭ ದಿನಾಂಕವನ್ನು ಪ್ರಕಟಿಸಿದರು.

  ಅಸ್ಸಾಂನಲ್ಲಿ ಫೆಬ್ರವರಿ 15ರಂದು 19ಕ್ಕೂ ಹೆಚ್ಚು ವಿಭಾಗಗಳಲ್ಲಿ ಗೆದ್ದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ, ಫಿಲಂ ಫೇರ್ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಮಲ್ ಅವರ ಮೊದಲ ಸಹಭಾಗಿತ್ವದಲ್ಲಿ, ಈ ಬಾರಿ ತನ್ನ 65 ನೇ ವರ್ಷದ ಪ್ರಶಸ್ತಿಗೆ ಹಲವಾರು ವರ್ಗಗಳ ಅಡಿಯಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಲು ನಿರ್ಧರಿಸಿದೆ.

  ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಚಲನಚಿತ್ರಗಳು ಮತ್ತು ನಟ/ನಟಿಯರು, ತಾಂತ್ರಿಕ ವರ್ಗವಲ್ಲದೆ, ಫಿಲಂ ಫೇರ್ ಶಾರ್ಟ್ ಫಿಲ್ಮ್ ಪ್ರಶಸ್ತಿ ಕೂಡಾ ನೀಡಲಾಗುತ್ತದೆ.

  ಉತ್ತಮ ನಟ

  ಉತ್ತಮ ನಟ

  ಅಕ್ಷಯ್ ಕುಮಾರ್-ಕೇಸರಿ
  ಆಯುಷ್ಮಾನ್ ಖುರಾನಾ-ಬಲಾ
  ಹೃತಿಕ್ ರೋಷನ್-ಸೂಪರ್ 30
  ಶಹೀದ್ ಕಪೂರ್-ಕಬೀರ್ ಸಿಂಗ್
  ರಣವೀರ್ ಸಿಂಗ್-ಗಲ್ಲಿ ಬಾಯ್
  ವಿಕ್ಕಿ ಕೌಶಲ್-ಉರಿ

  ಉತ್ತಮ ನಟಿ

  ಉತ್ತಮ ನಟಿ

  ಆಲಿಯಾ ಭಟ್-ಗಲ್ಲಿ ಬಾಯ್
  ಕಂಗನಾ ರನೌತ್-ಜಡ್ಜ್ಮೆಂಟಲ್ ಹೇ ಕ್ಯಾ
  ಕರೀನಾ ಕಪೂರ್ ಖಾನ್- ಗುಡ್ ನ್ಯೂಜ್
  ಪ್ರಿಯಾಂಕಾ ಛೋಪ್ರಾ-ದಿ ಸ್ಕೈ ಇಸ್ ಪಿಂಕ್
  ರಾಣಿ ಮುಖರ್ಜಿ-ಮರ್ದಾನಿ 2
  ವಿದ್ಯಾ ಬಾಲನ್- ಮಿಷನ್ ಮಂಗಲ್

  ಉತ್ತಮ ನಿರ್ದೇಶಕ

  ಉತ್ತಮ ನಿರ್ದೇಶಕ

  ಆದಿತ್ಯ ಧರ್- ಉರಿ
  ಜಗನ್ ಶಕ್ತಿ-ಮಿಷನ್ ಮಂಗಲ್
  ನಿತೇಶ್ ತಿವಾರಿ-ಚಿಚೋರೆ
  ಸಿದ್ಧಾರ್ಥ್ ಆನಂದ್-ವಾರ್
  ಜೋಯಾ ಅಖ್ತರ್- ಗಲ್ಲಿ ಬಾಯ್

  ಉತ್ತಮ ಚಿತ್ರ

  ಉತ್ತಮ ಚಿತ್ರ

  ಚಿಂಚೋರೆ
  ಗಲ್ಲಿ ಬಾಯ್
  ಮಿಷನ್ ಮಂಗಲ್
  ಉರಿ: ದಿ ಸರ್ಜಿಕಲ್ ಸ್ಟ್ರೈಕ್
  ವಾರ್

  English summary
  65th Amazon Filmfare Awards 2020 is all set to take place on 15th February 2020 will be held at Assam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X