ಪ್ರಿಯಾಂಕಾ ಚೋಪ್ರಾ ಜೀವನ ಬದಲಿಸಿದ 'ಏಳು' ಘಟನೆಗಳು

By Bharath Kumar

ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ಸ್ನೇಹಿತರ ಜೊತೆ ಈ ವರ್ಷದ ಬರ್ತಡೇ ಆಚರಣೆ ಮಾಡಲಿದ್ದಾರೆ ಕ್ವಾಂಟಿಕೋ ಸುಂದರಿ.

ಕಳೆದ ಕೆಲವು ತಿಂಗಳಿನಿಂದ ಅಮೇರಿಕನ್ ಗಾಯಕ ನಿಕ್ ಜೊನಾಸ್ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಟಾಕ್ ಆಫ್ ದಿ ವರ್ಲ್ಡ್ ಆಗಿರುವ ಪಿಗ್ಗಿಯ ಹುಟ್ಟುಹಬ್ಬದಲ್ಲಿ ಇದೇ ಮೊದಲ ಸಲ ನಿಕ್ ಜೊನಾಸ್ ಕೂಡ ಭಾಗಿಯಾಗುವ ಸಾಧ್ಯತೆ ಇದೆ.

ಈ ವಿಶೇಷ ದಿನದಲ್ಲಿ ಪ್ರಿಯಾಂಕಾ ಅವರ ಬಗ್ಗೆ ಹಾಗೂ ಆಕೆಯ ಜೀವನದ ಬಗ್ಗೆ ಅತ್ಯಂತ ಯಶಸ್ವಿ ಮತ್ತು ಮರೆಯಲಾಗದ ಕೆಲವು ಸಂಗತಿಗಳನ್ನ ನೋಡೋಣ. ಹಾಗಿದ್ರೆ, ಪ್ರಿಯಾಂಕಾ ನಡೆದ ಬಂದ ಹಾದಿಯಲ್ಲಿ ಏನಿದೆ ಅಂತಹ ವಿಶೇಷ ಎಂದು ತಿಳಿಯಲು ಈ ಸ್ಟೋರಿ ಪೂರ್ತಿ ಓದಿ....

ಮಿಸ್ ವರ್ಲ್ಡ್ ಆದ ಕ್ಷಣ

ಮಿಸ್ ವರ್ಲ್ಡ್ ಆದ ಕ್ಷಣ

ಪ್ರಿಯಾಂಕಾ ಚೋಪ್ರಾ 2000ನೇ ವರ್ಷದಲ್ಲಿ ಮಿಸ್ ವರ್ಲ್ಡ್ ಆಗುವ ಮೂಲಕ ಭಾರತದ ಹಿರಿಮೆಯನ್ನ ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದರು. ಇಲ್ಲಿಂದ ಪ್ರಿಯಾಂಕಾ ಅವರ ಲೈಫ್ ಹಾಗೂ ವೃತ್ತಿಯೇ ಬದಲಾಯಿತು.

ಬಾಲಿವುಡ್ ನಲ್ಲಿ ಚೊಚ್ಚಲ ಸಿನಿಮಾ

ಬಾಲಿವುಡ್ ನಲ್ಲಿ ಚೊಚ್ಚಲ ಸಿನಿಮಾ

ಮಾಡಲಿಂಗ್ ಮಾಡ್ತಿದ್ದ ಪ್ರಿಯಾಂಕಾ ಚೋಪ್ರಾಗೆ ಮಿಸ್ ವರ್ಲ್ಡ್ ಆದ ಬಳಿಕ ಬಾಲಿವುಡ್ ನಿಂದ ಆಫರ್ ಗಳು ಹುಡುಕಿಕೊಂಡು ಬಂದ್ವು. 2002 ರಲ್ಲಿ 'ತಮಿಜಾನ್' ಎಂಬ ತಮಿಳು ಸಿನಿಮಾದ ಮೂಲಕ ವೃತ್ತಿ ಆರಂಭಿಸಿದ ಪಿಗ್ಗಿಗೆ 2003 ರಲ್ಲಿ ಮೊದಲ ಬಾಲಿವುಡ್ ಸಿನಿಮಾ ಸಿಕ್ತು. ಸನ್ನಿ ಡಿಯೋಲ್ ಹಾಗೂ ಪ್ರೀತಿ ಜಿಂಟಾ ಅಭಿನಯಿಸಿದ್ದ 'ದಿ ಹಿರೋ: ಲವ್ ಸ್ಟೋರಿ ಆಫ್ ಸ್ಪೈ' ಪ್ರಿಯಾಂಕಾ ಕಾಣಿಸಿಕೊಂಡರು.

ಮೊದಲ ಫಿಲ್ಮ್ ಫೇರ್ ಪ್ರಶಸ್ತಿ

ಮೊದಲ ಫಿಲ್ಮ್ ಫೇರ್ ಪ್ರಶಸ್ತಿ

2003 ರಲ್ಲಿ ಬಾಲಿವುಡ್ ಗೆ ಲಗ್ಗೆಯಿಟ್ಟ ಪ್ರಿಯಾಂಕಾ ವೃತ್ತಿ ಜೀವನ ಅದೇ ವರ್ಷ ಸ್ಟಾರ್ ಪಟ್ಟಕ್ಕೆ ಕೂರಿಸಿತು. ಯಾಕಂದ್ರೆ, ಪ್ರಿಯಾಂಕಾ ಅಭಿನಯಿಸಿದ್ದ ಅಂದಾಜ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತು. ಇದು ಪ್ರಿಯಾಂಕಾ ಚೋಪ್ರಾ ಪಡೆದ ಮೊದಲ ಸಿನಿಮಾ ಅವಾರ್ಡ್.

ಪಿಗ್ಗಿಯನ್ನ ಬದಲಿಸಿದ 'ಫ್ಯಾಶನ್'

ಪಿಗ್ಗಿಯನ್ನ ಬದಲಿಸಿದ 'ಫ್ಯಾಶನ್'

ಮಧುರ್ ಭಂಡಾರ್ಕರ್ ನಿರ್ದೇಶನದ 'ಫ್ಯಾಶನ್' ಸಿನಿಮಾ ಪ್ರಿಯಾಂಕಾ ಜೀವನದ ಟರ್ನಿಂಗ್ ಪಾಯಿಂಟ್. ಅಲ್ಲಿಯವರೆಗೂ ಕಮರ್ಷಿಯಲ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದ ಪ್ರಿಯಾಂಕಾ ಫ್ಯಾಶನ್ ನಂತರ ತಮ್ಮ ಸ್ಟಾರ್ ವ್ಯಾಲ್ಯೂ ಬದಲಾಯಿತು. ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಆಕ್ಟ್ ಮಾಡೋಕೆ ಶುರು ಮಾಡಿದರು.

ಕ್ರಿಶ್ ಚಿತ್ರದಿಂದ ಮತ್ತಷ್ಟು ಖ್ಯಾತಿ

ಕ್ರಿಶ್ ಚಿತ್ರದಿಂದ ಮತ್ತಷ್ಟು ಖ್ಯಾತಿ

ಹೃತಿಕ್ ರೋಷನ್ ಅಭಿನಯಿಸಿದ್ದ ಕ್ರಿಶ್ ಚಿತ್ರದಲ್ಲಿ ಪ್ರಿಯಾಂಕಾ ಬಣ್ಣ ಹಚ್ಚಿದ್ದರು. ಈ ಚಿತ್ರದ ಬಾಲಿವುಡ್ ಇಂಡಸ್ಟ್ರಿಯನ್ನ ಬೆರಗುಗೊಳಿಸಿತ್ತು. ಇಲ್ಲಿಂದ ಪ್ರಿಯಾಂಕಾ ಅವರ ಖ್ಯಾತಿ ಮತ್ತು ಬೇಡಿಕೆ ಮತ್ತಷ್ಟು ಹೆಚ್ಚಾಯಿತು.

ಕೈಹಿಡಿದ 'ಕ್ವಾಂಟಿಕೋ'

ಕೈಹಿಡಿದ 'ಕ್ವಾಂಟಿಕೋ'

ಬಾಲಿವುಡ್ ಲೋಕದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದ ಪ್ರಿಯಾಂಕಾ ಚೋಪ್ರಾಗೆ, ಅಮೇರಿಕದ ಕ್ವಾಂಟಿಕೋ ಎಂಬ ಟಿವಿ ಶೋ ಆಫರ್ ಬಂತು. ಇದರಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಹಾಲಿವುಡ್ ಯುಎಸ್ ನಲ್ಲಿ ಯಶಸ್ಸು ಕಂಡರು.

ಹಾಲಿವುಡ್ ಸಿನಿಮಾ

ಹಾಲಿವುಡ್ ಸಿನಿಮಾ

ಭಾರತೀಯ ಸಿನಿಮಾಗಳ ಜೊತೆಯಲ್ಲಿ ಅಮೇರಿಕಾದ ಟಿವಿ ಶೋನಲ್ಲೂ ಯಶಸ್ಸು ಕಂಡ ಪ್ರಿಯಾಂಕಾ ಹಾಲಿವುಡ್ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟರು. 2017ರಲ್ಲಿ ಬೇವಾಚ್ ಚಿತ್ರದ ಮೂಲಕ ಇಂಗ್ಲೀಷ್ ಸಿನಿಮಾ ಮಾಡಿದರು. ಇದೀಗ, ಬಾಲಿವುಡ್ ನಿಂದ ದೂರವಿರುವ ಪ್ರಿಯಾಂಕಾ ಹಾಲಿವುಡ್ ನಲ್ಲಿ ಮತ್ತಷ್ಟು ಸಿನಿಮಾ ಮಾಡ್ತಿದ್ದಾರೆ.

More from Filmibeat

English summary
Priyanka Chopra celebrates her 36th birthday today on July 18, 2018, and the actress is all set to throw a bash in New York to her colleagues and friends in Hollywood. Here Are 7 Most Defining Moments That Changed Her Life Forever .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X