ವಿದ್ಯಾ ಬಾಲನ್ ಮದುವೆ ಸದ್ಯಕ್ಕೆ ಗೋವಿಂದಾ..!
ನಟಿ ವಿದ್ಯಾ ಬಾಲನ್ ವೈಯಕ್ತಿಕ ಹಾಗೂ ವೃತ್ತಿಜೀವನ ಎರಡರಲ್ಲೂ ಬಹಳ ಸ್ವರ್ಗಕ್ಕೇ ಪೈಪೋಟಿಗೆ ಬಿದ್ದಿದ್ದಾಳೆ. 'ದಿ ಡರ್ಟಿ ಪಿಕ್ಚರ್ಸ್' ನಂತರ ವಿದ್ಯಾ ಬಾಲಿವುಡ್ ಹಾಟ್ ಫೇವರೇಟ್. ಮುಂಬೈನ ಯಾವುದೇ ದೊಡ್ಡ ಪಾರ್ಟಿಗಳಲ್ಲಿ ವಿದ್ಯಾ ಕಾಣಿಸಿಕೊಳ್ಳದೇ ವಿಧಿಯಿಲ್ಲ ಎನ್ನುವಂತಾಗಿದೆ. ಇಡೀ ಭಾರತದಲ್ಲಿ ವಿದ್ಯಾ ಹವಾ ಜೋರಾಗಿಯೇ ಇದೆ.
ಇದೀಗ ಹೇಳಲಿರುವ ವಿಷಯ ಅದಲ್ಲ, ಇನ್ನೂ ಕುತೂಹಲಕಾರಿಯಾಗಿದೆ. ವಿದ್ಯಾ ವೃತ್ತಿಜೀವನ ಮೇಲೆ ಮೇಲೆ ಹೋಗುತ್ತಿರುವುದರಿಂದ ಆಕೆಯ ಬಾಯ್ ಫ್ರೆಂಡ್ UTV ಮುಖ್ಯಸ್ಥ 'ಸಿದ್ಧಾರ್ಥ್ ರಾಯ್ ಕಪೂರ್' ಕಷ್ಟದಲ್ಲಿ ಸಿಲುಕಿದ್ದಾರೆ. ವಿದ್ಯಾ ಜೊತೆ ಮದುವೆಯಾಗುವ ಆತನ ಕನಸು ನನಸಾಗುವ ಕಾಲ ಮುಂದೆ ಮುಂದೆ ಹೋಗುತ್ತಿದೆ.
ಈಗಂತೂ ವಿದ್ಯಾ "ಇನ್ನು ಎರಡು ವರ್ಷ ನಾನು ಮದುವೆ ಆಗುವುದಿಲ್ಲ" ಎಂಬ ಹೊಸ ಸುದ್ದಿ ಸ್ಫೋಟಿಸಿದ್ದಾರೆ. ಬಾಯ್ ಫ್ರೆಂಡ್ ಸಿದ್ಧಾರ್ಥ್ ಬಗ್ಗೆ ಕೇಳಿದರೆ ಮುಗುಮ್ಮಾಗಿರುತ್ತಾಳೆ. ಆದರೆ ಹಬ್ಬಿರುವ ಸುದ್ದಿಯ ಪ್ರಕಾರ ಆಕೆ ಆತನೊಟ್ಟಿಗೆ 'ಲಿವ್ ಇನ್ ಟುಗೆದರ್' ಶೈಲಿಯ ಜೀವನ ಈಗಾಗಲೇ ನಡೆಸುತ್ತಿದ್ದಾಳೆ. ಒಟ್ಟಿನಲ್ಲಿ ಇನ್ನೆರಡು ವರ್ಷ ವಿದ್ಯಾ ಮದುವೆ ಆಗಲ್ವಂತೆ, ನೆನಪಿಟ್ಟುಕೊಳ್ಳಿ...(ಏಜೆನ್ಸೀಸ್)


Click it and Unblock the Notifications











