ಅಯ್ಯೋ,ಆದಿತ್ಯ ಧರ್ ಆಫೀಸ್ ಇಷ್ಟೊಂದು ಚಿಕ್ಕದಾ?₹1,987 ಕೋಟಿ ದೋಚಿದ ಬಾಲಿವುಡ್ 'ಧುರಂಧರ್' ಬಳಿ ಕೆಲಸಕ್ಕಿರೋದು ಕೇವಲ 7 ಜನ ಮಾತ್ರ

ಸಿನಿಮಾ ನಿರ್ದೇಶಕನ ಮಾಧ್ಯಮ. ಆದರೆ ಈ ಮಾಧ್ಯಮ ಇಂದು ಉದ್ಯಮವಾಗಿ ಬದಲಾಗಿದೆ. ಇಂದು ಕಥೆ ಹೇಳುವ ಕಲೆ ಮುಖ್ಯ ಅಲ್ಲ. ಬದಲಿಗೆ ಕಥೆ ಹೆಣೆಯುವ ಜಾಗ ಮುಖ್ಯ. ಬದಲಾದ ಈ ಕಾಲದಲ್ಲಿ ಯಾರನ್ನೇ ಕೇಳಿದರೂ ಕೂಡ ಮೊದಲು ಅವರು ಹೇಳುವುದೇ ನಮಗೊಂದು ಭವ್ಯವಾದ ಆಫೀಸ್ ಬೇಕೆನ್ನುವ ಮಾತು.

ಆ ನಂತರ ಆಫೀಸ್‌ನ ಚದರ ಅಡಿಗೆ ಅನುಗುಣವಾಗಿ ತಂಡಕ್ಕೆ ಬೇಡಿಕೆ ಇಡುತ್ತಾರೆ. ಹೆಚ್ಚೆಚ್ಚು ಜನ ಇದ್ದರೆ ಕ್ರಿಯಾತ್ಮಕ ಆಲೋಚನೆಯ ಕಿಡಿ ಹೆಚ್ಚೆಚ್ಚು ಹೊತ್ತಿಕೊಳ್ಳುತ್ತೆ ಎನ್ನುವುದು ಇವರ ವಾದ. ನಿರ್ದೇಶಕರಾಡುವ ಈ ಬಣ್ಣದ ಮಾತುಗಳಿಗೆ ಮರುಳಾಗಿ ಹಲವರು ಭವ್ಯವಾದ ಗಾಜಿನ ಅರಮನೆಯನ್ನೇ ನಿರ್ಮಾಪಕರು ಧಾರೆ ಎರೆಯುತ್ತಾರೆ. ಕಾರ್ಪೋರೇಟ್ ಶೈಲಿಯಲ್ಲಿ ಆಫೀಸ್ ವ್ಯವಸ್ಥೆ ಮಾಡಿಕೊಡುತ್ತಾರೆ.

700 Sq Ft amp amp A 7-Member Team Inside Aditya Dhar s Skeletal Hit-Machine Behind Dhurandhar

ನಿರ್ದೇಶಕನ ಭಾರ ಹೊರುವುದಲ್ಲದೇ ಆ ನಿರ್ದೇಶಕನ ಹಿಂದೆ ಬರುವ 10-20 ಜನರ ಭಾರವನ್ನು ಕೂಡ ಹೊರುತ್ತಾರೆ. ಈ ಮೂಲಕ ಚಿತ್ರ ಶುರುವಾಗುವ ಮುನ್ನವೇ ನಿರ್ಮಾಪಕರು ತಮ್ಮ ಮೇಲೆ ಆರ್ಥಿಕ ಹೊರೆಯನ್ನು ಹೊರುತ್ತಾರೆ. ಉತ್ಸಾಹದಿಂದ ಚಿತ್ರ ನಿರ್ಮಾಣಕ್ಕೆ ಬರುವ ಹಲವರಲ್ಲಿ ಬಹುತೇಕರು ಕಣ್ಮರೆಯಾಗುವುದು ಇಂತಹದ್ದೇ ದುಂದು ವೆಚ್ಚಗಳಿಂದ.

ಹಾಗಂಥ ಎಲ್ಲ ನಿರ್ದೇಶಕರು ಇಲ್ಲಿ ಈ ಸಾಲಿಗೆ ಸೇರುವುದಿಲ್ಲ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ಅಳೆಯಲು ಸಾಧ್ಯವೂ ಇಲ್ಲ. ಯಾಕೆಂದರೆ ಇದಕ್ಕೆ ತದ್ವಿರುದ್ದವಾದ ವ್ಯಕ್ತಿತ್ವದ ಕೆಲವರು ಜಾಗ ಚಿಕ್ಕದಾದರೂ ಚಿಂತೆ ಇಲ್ಲ, ಹೇಳುವ ಕಥೆಗೆ ಜಗ ನಿಬ್ಬೇರಗಾಗಬೇಕೆಂದು ಆಲೋಚನೆ ಮಾಡುತ್ತಾರೆ. ಶಿಸ್ತನ್ನು ಮೈಗೂಡಿಸಿಕೊಂಡು ಪೆನ್ನು-ಪೇಪರ್ ಮತ್ತು ಎಡಿಟಿಂಗ್ ಟೇಬಲ್‌ನಲ್ಲಿಯೇ ಎಲ್ಲ ಆಟವನ್ನೂ ಆಡಿ ಮುಗಿಸುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ. ಉದಾಹರಣೆಗೆ ಆದಿತ್ಯ ಧರ್.

ಹೌದು, ಆದಿತ್ಯ ಧರ್.. ಬಾಲಿವುಡ್‌ನ ''ಧುರಂಧರ್''. ಕೇವಲ ಮೂರೇ ಮೂರು ಚಿತ್ರದ ಮೂಲಕ ಹಿಂದಿ ಚಿತ್ರರಂಗದ ಗಣಿತವನ್ನೇ ಬದಲಿಸಿದ ಆದಿತ್ಯ ಧರ್ ತಮ್ಮ ಈ ಮೂರು ಚಿತ್ರದ ಕುರಿತು ಚರ್ಚೆ ಮಾಡಿದ್ದು ದೊಡ್ಡ ದೊಡ್ಡ ಬಂಗಲೆಯಲ್ಲಿ ಅಲ್ಲ. ಕೈಗೊಬ್ಬರು ಕಾಲಿಗೊಬ್ಬರು ಸೇವಕರು ಇರುವ ಐಶಾರಾಮಿ ಆಫೀಸ್‌ನಲ್ಲಿಯೂ ಅಲ್ಲ. ಬದಲಿಗೆ ಕೇವಲ 700 ಚದರಡಿಯ ಒಂದು ಚಿಕ್ಕ ಕಚೇರಿಯಲ್ಲಿ ಅಂದರೆ ನೀವು ನಂಬ್ತೀರಾ..? ನಂಬಲೇಬೇಕು ಯಾಕೆಂದರೆ ಇದೇ ಸತ್ಯ ಎಂದು ಬಾಲಿವುಡ್‌ನ ಪ್ರಖ್ಯಾತ ಟ್ರೇಡ್ ವಿಶ್ಲೇಷಕ ಮತ್ತು ಪಂಡಿತ ಕೋಮಲ್ ನಹ್ತಾ ಹೇಳಿದ್ದಾರೆ.

ಆ ಪ್ರಕಾರ ಆದಿತ್ಯ ಧರ್ ಅವರ ಈ ಕಚೇರಿಯಲ್ಲಿಯೇ ಇವರ ನಿರ್ಮಾಣದಡಿ ಸಿದ್ದವಾದ ಚಿತ್ರಗಳ ಕೆಲಸ ನಡೆದಿವೆ. ಇಷ್ಟೇ ಅಲ್ಲ ಧುರಂಧರ್ ಅಂತಹ ಬ್ಲಾಕ್ ಬಸ್ಟರ್ ಚಿತ್ರದ ಕುರಿತು ಮಾತುಕಥೆ ಮತ್ತು ಚರ್ಚೆಗೆ ಸಾಕ್ಷಿಯಾಗಿದ್ದು ಕೂಡ ಇದೇ ಆಫೀಸ್. ಮತ್ತೊಂದು ಅಚ್ಚರಿ ಅಂದರೆ ಈ ಆಫೀಸ್‌ನಲ್ಲಿ ಕೆಲಸ ಮಾಡುವುದು ಕೇವಲ 7 ಜನ ಮಾತ್ರ.

700-sq-ft-a-7-member-team-inside-aditya-dhar-s-skeletal-hit-machine-behind-dhurandhar

ಆ ಪೈಕಿ ಒಬ್ಬರು ಆದಿತ್ಯ ಧರ್ ಆದರೆ ಮತ್ತೊಬ್ಬರು ಇವರ ಸಹೋದರ ಮತ್ತು ನಿರ್ಮಾಪಕ ಲೋಕೇಶ್ ಧರ್. ಇನ್ನೊಬ್ಬರು ಕಾನೂನು ಸವಾಲುಗಳನ್ನೆದುರಿಸಲು ಇದ್ದರೆ ಮತ್ತೊಬ್ಬರು ಮಾರ್ಕೆಟಿಂಗ್ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಕಂಪನಿಯ (ಬಿ62 ಸ್ಟುಡಿಯೋಸ್‌) ಖರ್ಚು ವೆಚ್ಚ ನೋಡಿಕೊಳ್ಳಲು ಅಕೌಂಟೆಂಟ್ ಒಬ್ಬರನ್ನು ಆದಿತ್ಯ ಧರ್ ನೇಮಿಸಿಕೊಂಡಿದ್ದು ಮತ್ತೊಬ್ಬರು ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಈ ಆಫೀಸ್‌ನಲ್ಲಿ ಕೆಲಸ ಮಾಡುತ್ತಾರೆ.

ಹೀಗೆ 700 ಚದರ ಅಡಿಯ ಆಫೀಸ್‌ನಲ್ಲಿ 7 ಜನರನ್ನು ಗುಡ್ಡೆ ಹಾಕಿಕೊಂಡು ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುವುದಲ್ಲದೇ ಒಂದಕ್ಕಿಂತ ಒಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುವ ಮೂಲಕ ಸದ್ಯ ಆದಿತ್ಯ ಧರ್ ಕಾರ್ಪೊರೇಟ್ ಕಚೇರಿಗಳಲ್ಲಿ ವಾರಗಟ್ಟಲೆ ಇಮೇಲ್ ಮೂಲಕ ನಡೆಯುವ ಸಂಭಾಷಣೆ ಮತ್ತು ಬೋರ್ಡ್ ಮೀಟಿಂಗ್‌ಗಳಿಗೆ ಬ್ರೇಕ್ ಹಾಕಿದ್ಧಾರೆ. ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಮಾಡಲು ದೊಡ್ಡ ದೊಡ್ಡ ಕಚೇರಿಗಳೇ ಬೇಕು ಎನ್ನುವ ಬಾಲಿವುಡ್‌ನ ಕಲ್ಪನೆಯನ್ನು ಭ್ರಮೆ ಎನ್ನುವುದನ್ನು ರುಜುವಾತು ಮಾಡಿದ್ದಾರೆ.

ಒಟ್ನಲ್ಲಿ ಒಂದು ಕಡೆ ಹೆಚ್ಚುತ್ತಿರುವ ನಿರ್ಮಾಣ ವೆಚ್ಚ, ಮತ್ತೊಂದು ಕಡೆ ಚಿತ್ರಮಂದಿರದ ಸಮಸ್ಯೆಗಳಿಂದ ಕಂಗಾಲಾಗಿರುವ ಚಿತ್ರರಂಗದಲ್ಲಿ ಒಂದು ಚಿತ್ರದ ಗೆಲುವು ನಿಮ್ಮ ಕಚೇರಿಯ ಗಾತ್ರ ನಿರ್ಧಾರ ಮಾಡುವುದಿಲ್ಲ, ಬದಲಿಗೆ ನಿಮ್ಮ ಯೋಚನೆ, ನಿಮ್ಮ ಕಲ್ಪನೆ, ಶ್ರದ್ದೆ ಮತ್ತು ತಾಳ್ಮೆ ನಿರ್ಧಾರ ಮಾಡುತ್ತೆ ಎನ್ನುವುದನ್ನು ''ಧುರಂಧರ್'' ಮೂಲಕ ಆದಿತ್ಯ ಧರ್ ಸಾಬೀತು ಮಾಡಿದ್ದಾರೆ.

English summary
No massive budgets wasted here! Aditya Dhar is rewriting the rules of filmmaking. See how a tiny 7-member team in a 700 sq. ft. room is building the massive 'Dhurandhar' franchise.
Read more about: Dhurandhar 2 ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X