Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವಾತಂತ್ರ್ಯ ದಿನಾಚರಣೆ ವಿಶೇಷ: ನೀವು ನೋಡಲೇ ಬೇಕಾದ ದೇಶಪ್ರೇಮ ಮೆರೆವ ಟಾಪ್-10 ಸಿನಿಮಾಗಳಿವು
ಸ್ವಾತಂತ್ರ್ಯ ದಿನಾಚರಣೆಯನ್ನು ಚಿತ್ರರಂಗದ ಗಣ್ಯರು ಸಹ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅನೇಕ ಮಂದಿ ಕಲಾವಿದರು ದೇಶಪ್ರೇಮ ಮೆರೆಯುವ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ ಮತ್ತು ರಂಜಿಸುತ್ತಿದ್ದಾರೆ. ಈಗಾಗಲೇ ಅನೇಕ ದೇಶ ಭಕ್ತಿ ಸಾರುವ ಸಿನಿಮಾಗಳು ತೆರೆದುಕೊಂಡು ಉತ್ತಮ ಪ್ರದರ್ಶನ ಕಂಡಿವೆ.
ಈ ವಿಚಾರದಲ್ಲಿ ಬಾಲಿವುಡ್ ಹಿಂದೆ ಬಿದ್ದಿಲ್ಲ. ಹಿಂದಿಯಲ್ಲಿ ದೇಶ ಭಕ್ತಿಯ ಅನೇಕ ಸಿನಿಮಾಗಳು ನಿರ್ಮಾಣವಾಗಿವೆ. ಸ್ವಾತಂತ್ರ್ಯ ಸಂಗ್ರಾಮದ ಕುರಿತ ಐತಿಹಾಸಿಕ ಸಿನಿಮಾಗಳು, ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯದ ನಂತರದ ಕಥೆ ಸೇರಿದ್ದಂತೆ ದೇಶ ಭಕ್ತಿ ಮೆರೆಯುವ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ದೇಶ ಪ್ರೇಮದ ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿಯೂ ದರ್ಶನ್ ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ.
ಇನ್ನೂ ಹಿಂದಿಯಲ್ಲಿ ಇತ್ತೀಚಿಗೆ ಬಂದ ಉರಿ, ರಾಜಿ, ಪರಮಾಣು, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾಗಳು ಸೇರಿದ್ದಂತೆ ಎವರ್ ಗ್ರೀನ್ ಸಿನಿಮಾಗಳಾದ ಲಗಾನ್, ಬಾರ್ಡರ್ ಕಾರ್ಗಿಲ್, ರಂಗ್ ದೇ ಬಸಂತಿ, ರೋಜಾ ಚಿತ್ರಗಳು ಹೆಮ್ಮೆಯ ಭಾರತೀಯರನ್ನಾಗಿಸುತ್ತೆ. ಆಮೀರ್ ಖಾನ್. ಅಕ್ಷಯ್ ಕುಮಾರ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಹೃತಿಕ್ ರೋಷನ್ ಮುಂತಾದವರು ದೇಶಪ್ರೇಮದ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಹೆಮ್ಮೆಯ ಭಾರತೀಯರನ್ನಾಗಿ ಮಾಡುವ ದೇಶಪ್ರೇಮದ ಟಾಪ್ 10 ಸಿನಿಮಾಗಳು ಇಲ್ಲಿವೆ. ಮುಂದೆ ಓದಿ...
ಆಮೀರ್ ಖಾನ್ 'ಲಗಾನ್'
ಬ್ರಿಟಿಷರು ಆಡುತ್ತಿದ್ದ ಕ್ರಿಕೆಟ್ ಆಟದ ಮೂಲಕವೇ ಅವರನ್ನು ಸೋಲಿಸಿ ಸುಂಕ ತಪ್ಪಿಸಲು ಹಳ್ಳಿ ಹೈದ ಭುವನ್ ಹಾಗೂ ಅವನ ತಂಡ ಪಂದ್ಯ ಕಟ್ಟುವ ಕಥೆ ಇಲ್ಲಿದೆ. ಅಂತಿಮವಾಗಿ ಆಟದಲ್ಲಿ ಭಾರತ ತಂಡಕ್ಕೆ ಜಯ ಸಿಗುತ್ತದೆ. ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಹೃತಿಕ್ ರೋಷನ್ 'ಲಕ್ಷ್ಯ'
ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಅಭಿನಯದ ಈ ಚಿತ್ರ 2004ರಲ್ಲಿ ಬಿಡುಗಡೆಯಾಗಿದೆ. ಕಾರ್ಗಿಲ್ ಬಳಿಯ ದೊಡ್ಡ ಪರ್ವತ ಹತ್ತುವ ನಾಯಕ ಜೀವನದಲ್ಲಿ ತನ್ನ ಗುರಿಯನ್ನು ಕಂಡುಕೊಳ್ಳುವ ಜೊತೆಗೆ ದೇಶಕ್ಕಾಗಿ ಹೋರಾಟಕ್ಕೆ ಮುಂದಾಗುವ ಕಥೆ ಹೊಂದಿದೆ.
ರಂಗ್ ದೇ ಬಸಂತಿ
ಇಂದಿನ ಯುವ ಪೀಳಿಗೆ ಭಾರತದ ಹಿಂದಿನ ಇತಿಹಾಸದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅದರ ವಿರುದ್ಧ ಹೋರಾಟ ಮಾಡಲು ಹೇಗೆ ಸಿದ್ಧರಾಗುತ್ತಾರೆ ಎನ್ನುವುದು ಸಿನಿಮಾ. ಆಮೀರ್ ಖಾನ್, ಸಿದ್ದಾರ್ಥ್, ಶರ್ಮಾನ್ ಜೋಶಿ, ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದರು.
ಸ್ವದೇಶ್
ಇತರ ಸಿನಿಮಾಗಳಂತೆ ಇದು ಯುದ್ಧದ ಸಿನಿಮಾವಲ್ಲ. ಸಾಮಾನ್ಯ ಜನರು ಭಾರತದ ಪ್ರಜೆಗಳಾಗಿ ತಮ್ಮ ಕೆಲಸವನ್ನು ಹೇಗೆ ಮಾಡಬಹುದು ಮತ್ತು ದೇಶದಲ್ಲಿ ಹೇಗೆ ಬದಲಾವಣೆ ತರಬಹುದು ಎಂಬುದರ ಕುರಿತು ಇರುವ ಸಿನಿಮಾ. ಈ ಚಿತ್ರದಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ನಟಿಸಿದ್ದಾರೆ. ಶಾರುಖ್ ಅದ್ಭುತವಾದ ನಟನೆ ಮಾಡಿದ್ದಾರೆ. ಆಶುತೋಷ್ ಗೌರಿಕರ್ ನಿರ್ದೇಶನದ ಅವರ ಅದ್ಭುತ ಸಿನಿಮಾಗಳಲ್ಲಿ ಸ್ವದೇಶ್ ಕೂಡ ಒಂದಾಗಿದೆ.
ರಾಝಿ
ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ವಿಕ್ಕಿ ಕೌಸಲ್ ಅಭಿನಯದ ರಾಜಿ ಸಿನಿಮಾ ಸ್ಪೈ ಥ್ರಿಲ್ಲರ್ ಸಿನಿಮಾವಾಗಿದೆ. ಹರಿಂದರ್ ಸಿಕ್ ಎನ್ನುವವರು ಬರೆದ ಸೆಹ್ಮತ್ ಕಾದಂಬರಿ ಆಧಾರಿತ ಸಿನಿಮಾವಿದು. 1971ರ ಇಂಡೋ-ಪಾಕಿಸ್ತಾನ್ ಯುದ್ಧಕ್ಕೆ ಮುಂಚಿತವಾಗಿ, ಭಾರತಕ್ಕೆ ಮಾಹಿತಿ ಪ್ರಸಾರ ಮಾಡಲು ತಂದೆಯ ಕೋರಿಕೆಯ ಮೇರೆಗೆ ಪಾಕಿಸ್ತಾನದ ಮಿಲಿಟರಿ ಅಧಿಕಾರಿಯನ್ನು ಮದುವೆಯಾಗಿ ಭಾರತಕ್ಕೆ ಮಾಹಿತಿಯನ್ನು ಪ್ರಸಾರ ಮಾಡುವ ಕಥೆ ಈ ಸಿನಿಮಾದಲ್ಲಿದೆ. ರಾಜಿ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ.
ಅಕ್ಷಯ್ ಕುಮಾರ್ 'ಕೇಸರಿ'
ಅಕ್ಷಯ್ ಕುಮಾರ್ ನಟನೆಯ ಕೇಸರಿ ಸಿನಿಮಾ ಕೂಡ ದೇಶಭಕ್ತಿ ಸಾರುವ ಸಿನಿಮಾಗಳಲ್ಲಿ ಒಂದಾಗಿದೆ. ಅನುರಾಗ್ ಸಿಂಗ್ ನಿರ್ದೇಶನದ ಕೇಸರಿ ಚಿತ್ರದಲ್ಲಿ ಹವಿಲ್ದಾರ್ ಇಶನ್ ಸಿಂಗ್ ಮತ್ತು ಬ್ರಿಟಿಷ್ ಭಾರತೀಯ ಸೇನೆಯ 20 ಇತರ ಸೈನಿಕರ ಕಥೆಯಾಗಿದೆ. ಇಶನ್ ಸಿಂಗ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅದ್ಭುತವಾಗಿ ನಟಿಸಿದ್ದರು.
ಉರಿ: ದಿ ಸರ್ಜಿಕಲ್ ಸ್ಟ್ರೈಕ್
ವಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್ ಮತ್ತು ಮೋಹಿತ್ ರೈನಾ ಅಭಿನಯಿಸಿರುವ ಸಿನಿಮಾ. ಜಮ್ಮು-ಕಾಶ್ಮೀರದ ಭಾರತೀಯ ಸೇನಾ ಬ್ರಿಗೇಡ್ ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯ ಪ್ರತಿಕಾರವಾಗಿ ಶಂಕಿತ ಪಾಕಿಸ್ತಾನಿ ಉಗ್ರರ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸುತ್ತ ಈ ಚಿತ್ರ ಸುತ್ತುತ್ತೆ.
ಬಾರ್ಡರ್ ಸಿನಿಮಾ
ಜೆ ಪಿ ದತ್ತಾ ಅವರ ಅಪ್ರತಿಮ ಸೃಷ್ಟಿ ಬಾರ್ಡರ್. ನೋಡಲೆ ಬೇಕಾದ ಸಿನಿಮಾಗಳಲ್ಲಿ ಒಂದು. ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ, ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ. 1971ರ ಭಾರತ-ಪಾಕಿಸ್ತಾನ ಯುದ್ಧದ ಸುತ್ತ ಹೆಣೆಯಲಾದ ಕಥೆ. ಬಾರ್ಡರ್ ಸಿನಿಮಾ ಸಂಗೀತ ಭರಿತವಾಗಿಯೂ ಯಶಸ್ವಿಯಾಗಿದೆ.
ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್
ಪರಮಾಣು ದಿ ಸ್ಟೋರಿ ಆಫ್ ಪೋಖ್ರಾನ್ ಸಿನಿಮಾ 1998ರ ಪೋಖ್ರಾನ್ ಪರಮಾಣು ಪರೀಕ್ಷೆಯ ನೈಜ ಕಥೆಯನ್ನು ಆಧರಿಸಿದೆ. ಪೂರ್ಣ ಪ್ರಮಾಣದ ಪರಮಾಣು ರಾಷ್ಟ್ರವೆಂದು ಭಾರತ ಮಾನ್ಯತೆಗೆ ಕಾರಣವಾಯಿತು. ನಾಟಕ ಚಿತ್ರದಲ್ಲಿ ಜಾನ್ ಅಬ್ರಹಾಂ, ಡಯಾನಾ ಪೆಂಟಿ, ಬೊಮನ್ ಇರಾನಿ, ಅನುಜಾ ಸಾಥೆ ಸಿದ್ದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಭುಜ್: ದಿ ಪ್ರೈಡ್ ಆಫ್ ಇಂಡಿಯಾ
ಭಾರತೀಯ ಏಕತೆಯ ವೈಭವವನ್ನು ಪ್ರದರ್ಶಿಸುವ ಇನ್ನೊಂದು ಸಿನಿಮಾ ಭುಜ್. ಅಜಯ್ ದೇವನ್ ಅಭಿನಯದ ಈ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧ ಸನ್ನಿವೇಶದ ಕೆಲವು ಘಟನೆಗಳನ್ನು ಮರುಸೃಷ್ಟಿ ಮಾಡಲಾಗಿದೆ. ಸಮಯದಲ್ಲಿ ಭುಜ್ ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿದ್ದ ವಿಂಗ್ ಕಮಾಂಡರ್ ವಿಜಯ್ ಕಾರ್ಣಿಕ್ ಪಾತ್ರದಲ್ಲಿ ನಟ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ.