ದೀಪಿಕಾ ಪಡುಕೋಣೆಗೆ ಒಲಿದ 'ಭಾರಿ ಅದೃಷ್ಟ'
ಮುಂಬರುವ ರಜನಿಕಾಂತ್ ಅನಿಮೇಶನ್ ಚಿತ್ರ 'ಕೋಚಡಯ್ಯಾನ್' ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ. ಈ ಮೊದಲು ರಜನಿಯವರ 'ರಾಣಾ' ಚಿತ್ರಕ್ಕೂ ದೀಪಿಕಾ ಆಯ್ಕೆಯಾಗಿದ್ದರು. ಆದರೆ ಅನಾರೋಗ್ಯದ ಕಾರಣ ಆ ಚಿತ್ರ ಮುಂದುವರಿಯಲಿಲ್ಲ. ಇದೀಗ ರಜನಿಕಾಂತ್ ಜೊತೆ ನಟಿಸುವ ಭಾಗ್ಯಕ್ಕೆ ದೀಪಿಕಾ ಕುಣಿದಾಡುತ್ತಿದ್ದಾರಂತೆ.
ಈ ವಿಷಯವಾಗಿ ಮಾಧ್ಯಮದೊಂದಿಗೆ ಮಾತನಾಡಿದ ದೀಪಿಕಾ, "ನಾನು ರಜನಿ ಸರ್ ಜೊತೆ ಕೆಲಸ ಮಾಡುವ ಈ ಅವಕಾಶದಿಂದ ಎಕ್ಸೈಟ್ ಆಗಿದ್ದೇನೆ. ಅವರ ಆರೋಗ್ಯ ಚೆನ್ನಾಗಿರಲಿ ಎಂದು ಆಶಿಸುತ್ತೇನೆ" ಎಂದಿದ್ದಾರೆ. ಕೊಚಡಯ್ಯಾನ್ ಚಿತ್ರದಲ್ಲಿ ದೀಪಿಕಾ ಅಲ್ಲದೇ ಸ್ನೇಹಾ, ಶರತ್ ಕುಮಾರ್, ಶೋಬನಾ, ಆದಿ ಮತ್ತು ಜಾಕಿ ಶ್ರಾಫ್ ಕೂಡ ಇದ್ದಾರೆ.
ಕೊಚಡಯ್ಯಾನ್ ಚಿತ್ರವನ್ನು ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ನಿರ್ದೇಶಿಸಲಿದ್ದಾರೆ. ರಜನಿ ಅಳಿಯ ಧನುಷ್ ಕೊಲವೆರಿ ಡಿ ಹಾಡಿನಿಂದ ದೇಶದಲ್ಲೆಡೆ ಖ್ಯಾತಿಯಾಗಿ ಇದೀಗ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ರಜನಿಯ ಕೊಚಡಯ್ಯಾನ್ ಗೆ ಎ ಆರ್ ರೆಹಮಾನ್ ಸಂಗೀತ ಹಾಗೂ ರಾಜೀವ್ ಮೆನನ್ ಛಾಯಾಗ್ರಹಣವಿದೆ. (ಏಜೆನ್ಸೀಸ್)


Click it and Unblock the Notifications











