ಮದುವಣಗಿತ್ತಿಯಂತೆ ಅನುಷ್ಕಾ ಶರ್ಮಾ ಮಿಂಚಿರುವ ಟಾಪ್ 8 ಫೋಟೋಗಳು
ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮದುವೆ ಸುದ್ದಿ ಈಗ ಎಲ್ಲೆಡೆ ಹರಿದಾಡಿದೆ. ಡಿಸೆಂಬರ್ 9 ರಿಂದ 12ರೊಳಗೆ ಇವರಿಬ್ಬರು ಸಪ್ತಪದಿ ತುಳಿಯಲಿದ್ದು, ಅದಕ್ಕಾಗಿ ಇಟಲಿಯಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎನ್ನಲಾಗಿದೆ.
ಈಗಾಗಲೇ ವಿರಾಟ್ ಕೊಹ್ಲಿ ಇಟಲಿ ಸೇರಿದ್ದಾರೆ. ಅದರ ಹಿಂದೆಯೇ ನಟಿ ಅನುಷ್ಕಾ ಶರ್ಮಾ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಇಟಲಿಗೆ ಪ್ರಯಾಣ ಬೆಳಸಿದ್ದಾರೆ. ಅನುಷ್ಕಾ ಶರ್ಮಾ ಜೊತೆಯಲ್ಲಿ ತಂದೆ ಅಜಯ್ ಕುಮಾರ್, ತಾಯಿ ಆಶೀಮಾ, ಹಾಗೂ ಸಹೋದರ ಕರ್ನೇಶ್ ಕೂಡ ಇದ್ದರು.
ಅಂದಹಾಗೆ, ವಿರಾಟ್ ಮತ್ತು ಅನುಷ್ಕಾ ಮದುವೆ ಸುದ್ದಿ ನಿಜವೋ.. ಸುಳ್ಳೊ.. ಗೊತ್ತಿಲ್ಲ. ಅದರೇ ಮದುವೆ ಉಡುಗೆಯಲ್ಲಿ ನಟಿ ಅನುಷ್ಕಾ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ಕೆಲವು ಫೋಟೋಗಳು ಸಾಕ್ಷಿಯಾಗಿವೆ. ಮುಂದೆ ನೋಡಿ...

'ಹೇ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ
ನಟಿ ಅನುಷ್ಕ ಶರ್ಮ ತಮ್ಮ 'ಹೇ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಮದುವೆ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಂಪು ಬಣ್ಣ ಡ್ರೆಸ್
ಕೆಂಪು ಬಣ್ಣ ಗಾಗ್ರ ಚೋಲಿಯಲ್ಲಿ ಮದುಮಗಳಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

ವಿರಾಟ್ ಜೊತೆ ವಿವಾಹ
ಸದ್ಯದ ಸುದ್ದಿಯ ಪ್ರಕಾರ ಡಿಸೆಂಬರ್ 9 ರಿಂದ 12ರೊಳಗೆ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ವಿವಾಹ ನಡೆಯಲಿದೆಯಂತೆ.

ಇಟಲಿಯಲ್ಲಿ ಮದುವೆ
ಇಟಲಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ನಡೆಯಲಿದೆ ಎಂದು ಮಾತುಗಳು ಕೇಳಿ ಬಂದಿದೆ.

ಮುಂಬೈನಲ್ಲಿ ಆರತಕ್ಷತೆ
ಇಟಲಿಯಲ್ಲಿ ಸಪ್ತಪದಿ ತುಳಿದ ಬಳಿಕ ಭಾರತಕ್ಕೆ ವಾಪಸ್ ಆಗಿ ಮುಂಬೈನಲ್ಲಿ ಆರತಕ್ಷತೆ ಆಯೋಜಿಸುವ ಯೋಜನೆ ವಿರಾಟ್ ಮತ್ತು ಅನುಷ್ಕ ಹಾಕಿಕೊಂಡಿದ್ದಾರಂತೆ.

ಪ್ರತಿಕ್ರಿಯೆ ನೀಡಿಲ್ಲ
ನಿನ್ನೆಯೇ ವಿರಾಟ್ ಇಟಲಿಗೆ ಹೊರಟಿದ್ದರು. ಇತ್ತ ಈಗ ಅನುಷ್ಕಾ ಕೂಡ ಇಟಲಿಗೆ ಪ್ರಯಾಣ ಬೆಳಸಿದ್ದಾರೆ. ಈ ವೇಳೆ ಮಾಧ್ಯಮಗಳ ಕಣ್ಣಿಗೆ ಬಿದ್ದ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು
ಈ ಹಿಂದೆಯೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಧ್ಯೆ ಪ್ರೀತಿ ಇರುವುದು ಎಲ್ಲರಿಗೂ ತಿಳಿದಿತ್ತು. ಅನೇಕ ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ನಿಜವೋ.. ಸುಳ್ಳೋ..
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ. ಆದರೆ ಈ ಬಗ್ಗೆ ಇದುವರೆಗೂ ವಿರಾಟ್ ಅಥವಾ ಅನುಷ್ಕಾ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











