ಮಾಜಿ ಪತ್ನಿಯೊಂದಿಗೆ ಮತ್ತೆ ಪ್ರೀತಿಯಲ್ಲಿ ಬಿದ್ದ ನಟ, ವಿಚ್ಛೇದನದ 5 ವರ್ಷಗಳ ನಂತರ ಮರುಮದುವೆಗೆ ರೆಡಿ ..!

ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ. ಆದರೆ ಈಗ ಕಾಲ ಬದಲಾಗಿದೆ.

ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಐದಾರು ವರ್ಷಗಳಲ್ಲಿ ಅನೇಕ ತಾರೆಯರು ವಿಚ್ಛೇದನ ಪಡೆದಿದ್ದಾರೆ. ಈ ಸಾಲಿನಲ್ಲಿ ಬೆಂಗಳೂರು ಮೂಲದ ಬಾಲಿವುಡ್‌ ನಟ ಗುಲ್ಶನ್ ದೇವಯ್ಯ ಕೂಡ ಇದ್ದಾರೆ.

8 Years Together 3 Years Apart Will Gulshan Devaiah Remarry Ex-Wife Kallirroi Tziafeta

ವಿಶೇಷ ಅಂದರೆ ಗುಲ್ಶನ್ ದೇವಯ್ಯಗೆ ಈಗ ತಾವು ತಮ್ಮ ಪತ್ನಿಗೆ ವಿಚ್ಚೇದನವನ್ನು ನೀಡಿ ತಪ್ಪು ಮಾಡಿದೆ ಎನ್ನುವ ಭಾವನೆ ಕಾಡಲು ಶುರುವಾಗಿದೆ. ಹೀಗಾಗಿಯೇ ಡಿವೋರ್ಸ್ ಪಡೆದು ಐದು ವರ್ಷಗಳ ನಂತರ ಗುಲ್ಶನ್ ದೇವಯ್ಯ ಈಗ ಮತ್ತೊಮ್ಮೆ ತಮ್ಮ ಮೊದಲ ಪತ್ನಿ ಕಲ್ಲಿರಾಯ್ ಜೊತೆ ಮದುವೆಯಾಗಲು ಮುಂದಾಗಿದ್ದಾರೆ.

ಹೌದು, ಗುಲ್ಶನ್ ದೇವಯ್ಯ .. ಹಂಟರ್.. ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್.. ಕಮಾಂಡೋ 3.. ಶೈತಾನ್.. ಹೇಟ್ ಸ್ಟೋರಿ.. ಬಧಾಯಿ ದೋ.. ಹೀಗೆ ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದ ಕಲಾವಿದ. ಬಾಲಿವುಡ್‌ನಲ್ಲಿ ಇವತ್ತು ಇವರಿಗೆ ಇವ್ರದ್ದೇ ಆದ ಸ್ಥಾನ ಮಾನ ಇದೆ.

ಇಂಥಾ ಗುಲ್ಶನ್ ದೇವಯ್ಯ 2012ರಲ್ಲಿ ಗ್ರೀಸ್ ಮೂಲದ ಕಲ್ಲಿರಾಯ್ ಅವರ ಜೊತೆ ಮದುವೆಯಾದರು. 8 ವರ್ಷ ಸಂಸಾರವನ್ನು ಕೂಡ ನಡೆಸಿದರು. ಆದರೆ.. ಕಲ್ಲಿರಾಯ್ ವಿದೇಶಿಯಾಗಿದ್ದರಿಂದ ಇಬ್ಬರ ಆಚಾರ-ವಿಚಾರ-ಸಂಪ್ರದಾಯಗಳಲ್ಲಿದ್ದ ವ್ಯತ್ಯಾಸದಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಶುರುವಾಯ್ತು.

ಹೀಗಾಗಿ 2020ರಲ್ಲಿ ಗುಲ್ಶನ್ ದೇವಯ್ಯ ಮತ್ತು ಕಲ್ಲಿರಾಯ್ ವಿಚ್ಛೇದನವನ್ನು ಪಡೆದರು. ತಮ್ಮ ತಮ್ಮ ದಾರಿಯನ್ನು ಹುಡುಕಿಕೊಂಡು ಮುನ್ನಡೆಯಲು ಶುರು ಮಾಡಿದರು.

ಆದರೆ ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ. ಗುಲ್ಶನ್ ದೇವಯ್ಯ ವಿಚಾರದಲ್ಲಿ ಕೂಡ ಇದೇ ಆಯ್ತು.

ಹೀಗಾಗಿಯೇ ಮತ್ತೆ ತಮ್ಮ ಮೊದಲ ಪತ್ನಿಯ ಸಾಂಗತ್ಯವನ್ನು ಬಯಸಿದ ಗುಲ್ಶನ್ ದೇವಯ್ಯ 2023ರಲ್ಲಿ ಅಂದರೆ ವಿಚ್ಛೇದನ ಪಡೆದು ಮೂರು ವರ್ಷಗಳ ನಂತರ ಮತ್ತೆ ಕಲ್ಲಿರಾಯ್ ಅವರ ಬಳಿ ತೆರಳಿದರು. ತಮ್ಮ ಮಾಜಿ ಪತ್ನಿಯನ್ನು ಡೇಟಿಂಗ್ ಮಾಡಲು ಶುರು ಮಾಡಿದರು. ಮಾಜಿ ಪತ್ನಿ ಜೊತೆ ಸಂಬಂಧ ಹೊಂದಿರುವುದಾಗಿ ಕೂಡ 2023ರಲ್ಲಿ ಅಧಿಕೃತವಾಗಿ ಘೋಷಿಸಿದರು. ಈ ಸಂಬಂಧವನ್ನು ನಾವು ಇಬ್ಬರು ಬೇರೆ ದೃಷ್ಟಿಕೋನದಿಂದ ನೋಡುತ್ತಿರುವುದಾಗಿಯೂ ಕೂಡ ಹೇಳೀದರು.

ಹೀಗೆ ದೂರವಾಗಿ ಮತ್ತೆ ಮಾಜಿ ಪತ್ನಿಯ ಜೊತೆ ಮತ್ತೆ ಪ್ರೀತಿಯಲ್ಲಿ ಬಿದ್ದ ಗುಲ್ಶನ್ ದೇವಯ್ಯ ಸದ್ಯ ತಮ್ಮ ಮಾಜಿ ಪತ್ನಿ ಕಲ್ಲಿರಾಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. 'ನನ್ನ ಪ್ರೀತಿ ಮತ್ತು ನನ್ನ ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಲ್ಲಿಂದ ಮುಂದೆ ನಮ್ಮ ಪ್ರಯಾಣ ಹೇಗಿರುತ್ತದೆ ಎಂಬುದರ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ' ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗುಲ್ಶನ್ ದೇವಯ್ಯ ಅವರ ಈ ಬರಹ ಮತ್ತು ಫೋಸ್ಟ್‌ ಈಗ ಇವರಿಬ್ಬರ ಮರು ಮದುವೆಯ ಚರ್ಚೆಗೆ ನಾಂದಿಯನ್ನು ಹಾಡಿದೆ. ಇಬ್ಬರು ಈ ಬಾರಿ ಮತ್ತೆ ಮದುವೆಯಾಗ್ತಾರಾ ಅಥವಾ ಲಿವ್ ಇನ್ ಸಂಬಂಧದಲ್ಲಿರುತ್ತಾರಾ ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ.

More from Filmibeat

English summary
Actor Gulshan Devaiah, who shared eight years of marriage with Kallirroi Tziafeta before separating three years ago, recently wished her on her birthday. The warm gesture has sparked speculation about whether the former couple might rekindle their relationship and possibly remarry.
Read more about: divorce love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X