twitter
    For Quick Alerts
    ALLOW NOTIFICATIONS  
    For Daily Alerts

    '83' ಸಿನಿಮಾಗಾಗಿ ರಣ್‌ವೀರ್ ಸಿಂಗ್ ಪಡೆದ ಸಂಭಾವನೆ ಎಷ್ಟು? ಜೊತೆಗೆ ಲಾಭದಲ್ಲೂ ಶೇರ್ ಸಿಗುತ್ತಂತೆ

    |

    1983ಯಲ್ಲಿ ಕಪಿಲ್ ದೇವ್ ಹಾಗೂ ತಂಡ ಮೊದಲ ಬಾರಿಗೆ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಟ್ಟು ಹಂತ ಹಂತವಾಗಿ ಮೇಲೆ ಬಂದಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕ ಈ ಗೆಲುವು ಅನಿರೀಕ್ಷಿತವಾಗಿತ್ತು. ಆದರೆ, ಬಲಿಷ್ಟ ತಂಡಗಳನ್ನು ಎದುರಿಸಿ ವಿಶ್ವಕಪ್ ಗೆದ್ದ ಘಳಿಗೆ ಭಾರತದ ಕ್ರಿಕೆಟ್ ತಂಡದ ಪಾಲಿಗೆ ಹೊಸ ಟರ್ನಿಂಗ್ ಪಾಯಿಂಟ್. ಭಾರತ ತಂಡ ಅಂದು ಕಷ್ಟ ಪಟ್ಟು ಗೆದ್ದ ಕ್ಷಣಗಳನ್ನು ತೆರೆಮೇಲೆ ಕಟ್ಟಿಕೊಡಲಾಗಿದೆ.

    ಹೆಚ್ಚು ಕಡಿಮೆ ಒಂದೂವರೆ ವರ್ಷದಿಂದ ಈ ಸಿನಿಮಾ ಬಿಡುಗಡೆಗಾಗಿ ಇಡೀ ತಂಡ ಕಾದು ಕೂತಿತ್ತು. ಕಬೀರ್ ಖಾನ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಿಸೆಂಬರ್ 24ರಂದು ಅದ್ಧೂರಿಯಾಗಿ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲಾ ಕಡೆ '83' ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಆದರೆ, ಇದರ ಜೊತೆಗೆ ಇನ್ನೂ ಒಂದು ವಿಷಯ ಜೋರಾಗೇ ಸದ್ದು ಮಾಡುತ್ತಿದೆ. ಅದೇನೆಂದರೆ, ಕಪಿಲ್ ದೇವ್ ಪಾತ್ರ ಮಾಡುವುದಕ್ಕೆ ರಣ್‌ವೀರ್ ಸಿಂಗ್ ಪಡೆದ ಸಂಭಾವನೆ.

    ಕಪಿಲ್ ಪಾತ್ರಕ್ಕೆ ರಣ್‌ವೀರ್ ಪಡೆದಿದ್ದು 20 ಕೋಟಿ?

    ಕಪಿಲ್ ಪಾತ್ರಕ್ಕೆ ರಣ್‌ವೀರ್ ಪಡೆದಿದ್ದು 20 ಕೋಟಿ?

    ರಣ್‌ವೀರ್ ಸಿಂಗ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿವೆ. ಬಾಕ್ಸಾಫೀಸ್‌ನಲ್ಲಿ 200 ರಿಂದ 300 ಕೋಟಿಯನ್ನು ಸುಲಭವಾಗಿ ಲೂಟಿ ಮಾಡುತ್ತಿವೆ. ಹೀಗಾಗಿ ಈ ನಟ ತನ್ನ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಆದರೆ, '83' ಅಂತಹ ಸಿನಿಮಾದಲ್ಲಿ ಅದರಲ್ಲೂ ಕಪಿಲ್ ದೇವ್ ಪಾತ್ರದಲ್ಲಿ ನಟಿಸುವುದಕ್ಕೆ ರಣ್‌ವೀರ್ ಸಿಂಗ್ ಪಡೆದ ಸಂಭಾವನೆ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಬಾಲಿವುಡ್ ಮೂಲಗಳ ಪ್ರಕಾರ, '83'ಗೆ ರಣ್‌ವೀರ್ ಸಿಂಗ್ ಬರೋಬ್ಬರಿ 20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

    20 ಕೋಟಿ ಜೊತೆ ಲಾಭದಲ್ಲೂ ಶೇರ್

    20 ಕೋಟಿ ಜೊತೆ ಲಾಭದಲ್ಲೂ ಶೇರ್

    ಕಪಿಲ್ ದೇವ್ ಪಾತ್ರಕ್ಕೆ ರಣ್‌ವೀರ್ ಸಿಂಗ್‌ಗೆ ಕೇವಲ 20 ಕೋಟಿಯನ್ನಷ್ಟೇ ಪಡೆದಿಲ್ಲ. ಈ ಸಿನಿಮಾದ ಗಳಿಕೆಯಲ್ಲಿ ಶೇರ್ ಕೂಡ ಬೇಕು ಅಂತ ಕೇಳಿದ್ದಾರಂತೆ. ಆದರೆ, ಗಳಿಕೆಯಲ್ಲಿ ಎಷ್ಟು ಪರ್ಸೆಂಟ್ ಲಾಭ ಕೇಳಿದ್ದಾರೆ ಅನ್ನುವುದು ತಿಳಿದು ಬಂದಿಲ್ಲ. ಆದರೆ, ದೊಡ್ಡ ಲಾಭವನ್ನೇ ಕೇಳಿದ್ದಾರೆ ಅಂತ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಕಪಿಲ್ ದೇವ್ ಕೂಡ ಈ ಸಿನಿಮಾಗಾಗಿ ದೊಡ್ಡ ಮೊತ್ತದ ಹಣವನ್ನೇ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಹೀಗಾಗಿ ಕಪಿಲ್ ಎಲ್ಲಾ ಕಡೆ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.

    ದೆಹಲಿಯಲ್ಲಿ 83 ಸಿನಿಮಾ ಟ್ಯಾಕ್ಸ್ ಫ್ರೀ

    ದೆಹಲಿಯಲ್ಲಿ 83 ಸಿನಿಮಾ ಟ್ಯಾಕ್ಸ್ ಫ್ರೀ

    '83' ಸಿನಿಮಾ ಕಳೆದ ವರ್ಷ ಮಾರ್ಚ್‌ನಲ್ಲಿಯೇ ಬಿಡುಗಡೆ ಆಗಬೇಕಿತ್ತು. ಆದರೆ, ಕೊರೊನಾದಿಂದ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ 83 ಬಿಡುಗಡೆಗೂ ಮುನ್ನವೇ ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಬುರ್ಜ್ ಖಲೀಫಾದಲ್ಲೂ ಟ್ರೈಲರ್‌ ಅನ್ನು ರಿಲೀಸ್ ಮಾಡಲಾಗಿದೆ. ಹೀಗಾಗಿ ಭಾರತ ಹೆಮ್ಮೆ ಪಟ್ಟ ಈ ಕ್ಷಣಗಳನ್ನು ತೆರೆಮೇಲೆ ತಂದಿರುವ ಸಿನಿಮಾಗೆ ದೆಹಲಿಯಲ್ಲಿ ಟ್ಯಾಕ್ಸ್ ಫ್ರಿ ಎಂದು ಘೋಷಿಸಲಾಗಿದೆ.

     ತಮ್ಮ ತಂಡದೊಂದಿಗೆ ಸಿನಿಮಾ ವೀಕ್ಷಿಸಲಿರುವ ಕಪಿಲ್

    ತಮ್ಮ ತಂಡದೊಂದಿಗೆ ಸಿನಿಮಾ ವೀಕ್ಷಿಸಲಿರುವ ಕಪಿಲ್

    ಕಳೆದ ಕೆಲವು ದಿನಗಳಿಂದ ಕಪಿಲ್ ದೇವ್‌ಗೆ '83' ಸಿನಿಮಾ ನೋಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ, ಕಪಿಲ್ ದೇವ್ ಒಬ್ಬರೇ ಸಿನಿಮಾ ನೋಡಲು ಇಷ್ಟ ಪಟ್ಟಿರಲಿಲ್ಲ. ಹೀಗಾಗಿ '83' ವಿಶ್ವದ ಕಪ್ ಗೆದ್ದಿದ್ದ ಇಡೀ ತಂಡಕ್ಕಾಗಿ ಇಂದು( ಡಿಸೆಂಬರ್ 22) ವಿಶೇಷ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಪಿಲ್ ದೇವ್ ಸೇರಿದಂತೆ ತಂಡ ಎಲ್ಲಾ ಸದಸ್ಯರು ಕಪಿಲ್ ದೇವ್ ಇಚ್ಛೆಯಂತೆ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ. ಇದೇ ಡಿಸೆಂಬರ್ 24ರಂದು '83' ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    Read more about: ranveer singh
    English summary
    83 actor Ranveer Singh to get a share in profit along with 20 Crores fee. Kapil Dev will watch movie on december 22nd and 83 declered tax free in Delhi.
    Wednesday, December 22, 2021, 17:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X