twitter
    For Quick Alerts
    ALLOW NOTIFICATIONS  
    For Daily Alerts

    2020 ಏಪ್ರಿಲ್ 10ಕ್ಕೆ ಮತ್ತೆ ಶುರುವಾಗಲಿದೆ ವಿಶ್ವಕಪ್

    |

    ವಿಶ್ವಕಪ್ ಅಂದಾಕ್ಷಣ ಥಟ್ ಅಂತ ನೆನಪಾಗುವುದು 1983ರಲ್ಲಿ ಭಾರತೀಯ ಕ್ರಿಕೇಟ್ ಟೀಂ ವಿಶ್ವಕಪ್ ಗೆದ್ದು ಬೀಗಿದ್ದ ಐತಿಹಾಸಿಕ ಕ್ಷಣ. 1983 ಜೂನ್ 25 ಈ ದಿನವನ್ನು ಭಾರತೀಯ ಕ್ರಿಕೆಟ್ ಪ್ರಿಯರು ಎಂದು ಮರೆಯದ ದಿನ. ಈ ವರ್ಷ ಮತ್ತೆ ವಿಶ್ವ ಕಪ್ ಬಂದಿದೆ ಈಗಾಗಲೆ ಕ್ರಿಕೆಟ್ ಪ್ರಿಯರಲ್ಲಿ ವಿಶ್ವಕಪ್ ಜ್ವರ ಶುರುವಾಗಿದೆ. ಭಾರತ ಕ್ರಿಕೆಟ್ ತಂಡ ಕೂಡ ವಿಶ್ವಕಪ್ ಗೆ ಸಜ್ಜಾಗುತ್ತಿದೆ.

    ಆದ್ರೆ ಇದರ ನಡುವೆ ಮುಂದಿನ ವರ್ಷ 2020ಕ್ಕೂ ಸಹ ಮತ್ತೆ ವಿಶ್ವ ಕಪ್ ನಡೆಯುತ್ತಿದೆ. ಏನಿದು ಅಂತ ಅಚ್ಚರಿ ಪಡಬೇಡಿ. ಇದು 1983ರ ವಿಶ್ವಕಪ್ ಗೆದ್ದ ಅದ್ಭುತ ಕ್ಷಣ 2020ರಲ್ಲಿ ಸಿನಿಮಾ ಮೂಲಕ ಸಿನಿ ಮತ್ತು ಕ್ರಿಕೇಟ್ ಅಭಿಮಾನಿಗಳ ಮುಂದೆ ಬರುತ್ತಿದೆ. ಈಗಾಗಲೇ ಚಿತ್ರದ ಮೇಕಿಂಗ್ ರಿಲೀಸ್ ಆಗಿದ್ದು ಕ್ರಿಕೆಟ್ ಪ್ರಿಯರ ಹಾರ್ಟ್ ಬೀಟ್ ಹೆಚ್ಚಿಸಿದೆ.

    1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದು ಬೀಗಿದ್ದ ಭಾರತೀಯ ಕ್ರಿಕೇಟ್ ತಂಡದ ಸಾಧನೆ ಈಗ ಸಿನಿಮಾ ರೂಪ ಪಡೆಯುತ್ತಿದೆ. ಆ ಕ್ಷಣವನ್ನು ಮತ್ತೆ ಕಣ್ತುಂಬಿಕೊಳ್ಳಲು ಭಾರತೀಯರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾದಲ್ಲಿ ಯಾರೆಲ್ಲ ಅಭಿನಯಿಸುತ್ತಿದ್ದಾರೆ? ಮುಂದೆ ಓದಿ..

    83 ಸಿನಿಮಾದ ಮೇಕಿಂಗ್ ರಿಲೀಸ್

    ಭಾರಿ ನಿರೀಕ್ಷೆ ಮೂಡಿಸಿರುವ 1983ರ ವಿಶ್ವಪಕ್ ಸಿನಿಮಾ '83' ಹೆಸರಿನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಪ್ರತಿಯೊಬ್ಬ ಕಲಾವಿದರು ಕ್ರಿಕೆಟ್ ತಯಾರಿಯಲ್ಲಿ ತೊಡಗಿ ಕೊಂಡಿದ್ದಾರೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು '83' ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರೆಲ್ಲ ಮೈದಾನಕ್ಕಿಳಿದು ಬೆವರಿಳಿಸುತ್ತಿದ್ದಾರೆ. ಈ ಮೇಕಿಂಗ್ ವೀಡಿಯೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್

    ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್

    83 ಸಿನಿಮಾದಲ್ಲಿ ಕಪಿಲ್ ದೇವ ಪಾತ್ರದಲ್ಲಿ ನಟ ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ತಯಾರಿ ಪ್ರಾರಂಭಿಸಿರುವ ರಣ್ವೀರ್ ಸಿಂಗ್ ಗೆ ಖುದ್ದು ಕಪೀಲ್ ದೇವ್ ಟ್ರೈನಿಂಗ್ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ರೀಲ್ ಆಟಗಾರರಿಗೆ ರಿಯಲ್ ಆಟಗಾಗರು ಟ್ರೈನಿಂಗ್ ನೀಡುತ್ತಿದ್ದಾರೆ. ಸುನೀಲ್ ಗವಾಸ್ಕರ್ ಪಾತ್ರದಲ್ಲಿ ತಹೀರ್ ರಾಜ್ ಭಾಸಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಸರಾಂತ ವಿಕೆಟ್‌ ಕೀಪರ್ ಕರ್ನಾಟಕದ ಸಯ್ಯದ್ ಕಿರ್ಮಾನಿ ಪಾತ್ರವನ್ನು ಸಾಹಿಲ್ ಖಟ್ಟರ್, ಕೃಷ್ಣಮಾಚಾರಿ ಶ್ರೀಕಾಂತ್‌ ಪಾತ್ರವನ್ನು ಜೀವಾ, ದಿಲೀಪ್‌ ವೆಂಗಸರ್ಕರ್ ಪಾತ್ರವನ್ನು ಮರಾಠಿಯ ನಟ ಆದಿನಾಥ್ ಕೊಠಾರೊ ನಿಭಾಯಿಸುತ್ತಿದ್ದಾರೆ. ಈ ಎಲ್ಲಾ ಕಲಾವಿದರಿಗೆ ಆಯಾಯ ದಿಗ್ಗಜ ಆಟಗಾರರೆ ಟ್ರೈನಿಂಗ್​ ನೀಡುತ್ತಿದ್ದಾರೆ. ಧರ್ಮಶಾಲೆಯಲ್ಲಿ ಕಲಾವಿದರಿಗೆ ಮೊದಲ ಟ್ರೈನಿಂಗ್ ಕೊಡಲಾಗುತ್ತಿದೆ.

    1983ರ ಜೂನ್ 25ರ ಐತಿಹಾಸಿಕ ಕ್ಷಣ ಮರುಸೃಷ್ಠಿ

    1983ರ ಜೂನ್ 25ರ ಐತಿಹಾಸಿಕ ಕ್ಷಣ ಮರುಸೃಷ್ಠಿ

    ಜೂನ್ 25, 1983 ಭಾರತೀಯ ಕ್ರಿಕೆಟ್‌ಗೆ ಹೊಸ ಅಧ್ಯಾಯ ಬರೆದ ದಿನ. ಕ್ರಿಕೆಟ್ ಕಾಶಿ ಲಂಡನ್ ನ ಲಾರ್ಡ್ಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೇಟ್ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಈ ಅವಿಸ್ಮರಣೀಯ ಗೆಲುವು ಸಾಧಿಸಿ ಬರೋಬ್ಬರಿ 36 ವರ್ಷಗಾಗಿದೆ. ಈ ಸಮಯದಲ್ಲಿ ಮತ್ತದೆ ಅದ್ಭುತ ಕ್ಷಣವನ್ನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಕಟ್ಟಿಕೊಡಲಾಗುತ್ತಿದೆ. ಆ ಕ್ಷಣಕ್ಕಾಗಿ ಇಡೀ ಭಾರತೀಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

    ಕಬೀರ್ ಖಾನ್ ನಿರ್ದೇಶನ

    ಕಬೀರ್ ಖಾನ್ ನಿರ್ದೇಶನ

    ಬಾಲಿವುಡ್ ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ಏಕ್ತಾ ಟೈಗರ್', 'ಭಜರಂಗಿ ಭಾಯ್ ಜಾನ್' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಬೀರ್ ಖಾನ್ ಈಗ 1983ರ ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣವನ್ನು ಮರುಸೃಷ್ಟಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸದ್ಯ ಟ್ರೈನಿಂಗ್ ನಲ್ಲಿರುವ '83' ಚಿತ್ರತಂಡ ಮೇಕಿಂಗ್ ವೀಡಿಯೊನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    2020 ಏಪ್ರಿಲ್ 10ಕ್ಕೆ ರಿಲೀಸ್

    2020 ಏಪ್ರಿಲ್ 10ಕ್ಕೆ ರಿಲೀಸ್

    ಭಾರತೀಯ ಕ್ರಿಕೇಟ್ ಮತ್ತು ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಆ ಕ್ಷಣ ಮುಂದಿನ ವರ್ಷ ಏಪ್ರಿಲ್ 10ಕ್ಕೆ ಬರಲಿದೆ. ಅಂದ್ರೆ ಇನ್ನೂ ಒಂದು ವರ್ಷಗಳು ಕಾಯಲೇ ಬೇಕು. ಈ ವರ್ಷ ರಿಯಲ್ ವಿಶ್ವ ಕಪ್ ಕಣ್ತುಂಬಿಕೊಂಡರೇ ಮುಂದಿನ ವರ್ಷ ತೆರೆಮೇಲೆ ಬರುವ 1983ರ ವಿಶ್ವಕಪ್ ನ ಸಂತಸದ ಕ್ಷಣವನ್ನು ಸಂಭ್ರಮಿಸಬಹುದು, ವಿಶೇಷ ಅಂದ್ರೆ ಈಗಿನ ಯುವಕರು 1983ರ ವಿಶ್ವಕಪ್ ಗೆದ್ದ ಕ್ಷಣವನ್ನು ಆನಂದಿಸಬಹುದು.

    English summary
    Bollywood actor Ranveer Singh has working hard theas days for his upcomming film 83, which is based on Kapil Dev's 1983 World Cup win.
    Saturday, April 20, 2019, 18:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X