ಜವಾನ್ ಬಿಡುಗಡೆ: ಒಂದೇ ಕಡೆ ಸೇರುತ್ತಿದ್ದಾರೆ 85,000 ಶಾರುಖ್ ಖಾನ್ ಅಭಿಮಾನಿಗಳು!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸೌತ್ ಬ್ಯೂಟಿ ನಯನತಾರಾ ಅಭಿನಯದ ಜವಾನ್ ಬಿಡುಗಡೆಗೆ ದಿನ ನಿಗದಿಯಾಗಿದ್ದು, ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಸಿತ್ರ ಬಿಡುಗಡೆಯ ದಿನವಾದ ಸೆಪ್ಟೆಂಬರ್ 7 ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್‌ನೊಂದಿಗೆ 2023 ರ ಆರಂಭದಲ್ಲಿಯೇ ಭರ್ಜರಿ ಹಿಟ್ ಸಿನಿಮಾ ನೀಡಿರುವ ಶಾರುಖ್ ಖಾನ್, ಈಗ ತಮಿಳು ನಿರ್ದೇಶಕ ಅಟ್ಲಿ ಅವರ ಜವಾನ್ ಸಿನಿಮಾದೊಂದಿಗೆ ಮತ್ತೆ ಸೆಪ್ಟೆಂಬರ್ 7 ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದಾರೆ.

85,000 SRKS fans to come together to celebrate Jawan release

ಪಠಾಣ್ ಸಿನಿಮಾ ಯಶಸ್ಸಿನ ಕಾರಣದಿಂದಾಗಿ ಮತ್ತು ಅದ್ಭುತ ತಾರಾ ಬಳಗದಿಂದಾಗಿ ಜವಾನ್ ಮೇಲಿನ ನಿರೀಕ್ಷೆಯು ಹೆಚ್ಚಾಗಿದೆ. ಸಿನಿಮಾದ ಟ್ರೇಲರ್‌ಗೆ ಅಭಿಮಾನಿಗಳು, ಪ್ರೇಕ್ಷಕರು, ಸಿನಿಮಾ ರಂಗದವರು ಕೂಡ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಬಿಡುಗಡೆಯಾಗಲು ಕೇವಲ ನಾಲ್ಕು ದಿನಗಳು ಬಾಕಿಯಿರುವಾಗ ಮತ್ತೊಂದು ಖುಷಿಯ ಸಂಗತಿ ಹೊರಬಂದಿದೆ.

85,000 ಶಾರುಖ್ ಖಾನ್ ಅಭಿಮಾನಿಗಳು ಒಟ್ಟಿಗೆ!

ನೆಚ್ಚಿನ ನಟನ ಜವಾನ್ ಬಿಡುಗಡೆಯನ್ನು ಆಚರಿಸಲು 85,000 ಮಂದಿ ಶಾರುಖ್ ಖಾನ್ ಅಭಿಮಾನಿಗಳು ಒಟ್ಟಿಗೆ ಸೇರುತ್ತಿದ್ದಾರೆ ಎಂದು 'ಪಿಂಕ್ವಿಲ್ಲಾ' ವರದಿ ಮಾಡಿದೆ. ಸೆಪ್ಟೆಂಬರ್ 7 ರಂದು ಶಾರುಖ್ ಖಾನ್ ಅವರ ಸಿನಿಮಾಗಾಗಿ 300 ಕ್ಕೂ ಹೆಚ್ಚು ನಗರಗಳಲ್ಲಿ ಫ್ಯಾನ್ ಶೋಗಳು ನಡೆಯಲಿವೆ.

ಶಾರುಖ್ ಖಾನ್ ಅವರ ಫ್ಯಾನ್ ಕ್ಲಬ್, ಎಸ್‌ಆರ್‌ಕೆ ಯೂನಿವರ್ಸ್ ಈ ಆಕ್ಷನ್ ಎಂಟರ್‌ಟೈನರ್‌ಗಾಗಿ ಭಾರತದ 300 ಕ್ಕೂ ಹೆಚ್ಚು ನಗರಗಳಲ್ಲಿ ಫ್ಯಾನ್ ಶೋಗಳನ್ನು ಆಯೋಜಿಸಿದೆ. ಇದು ಹಿಂದಿ ಚಲನಚಿತ್ರರಂಗದಲ್ಲಿ ಹೊಸ ದಾಖಲೆಯಾಗಲಿದೆ.

85,000 SRKS fans to come together to celebrate Jawan release

'ಪಿಂಕ್ವಿಲ್ಲಾ' ಎಸ್‌ಆರ್‌ಕೆ ಯೂನಿವರ್ಸ್‌ನ ಸಹ ಸಂಸ್ಥಾಪಕರಾದ ಯಶ್ ಪರ್ಯಾನಿ ಅವರನ್ನು ಉಲ್ಲೇಖಿಸಿ ಈ ವಿಷಯವನ್ನು ಖಚಿತಪಡಿಸಿದೆ. "ಎಸ್‌ಆರ್‌ಕೆ ಯೂನಿವರ್ಸ್ ಭಾರತದ 300 ಕ್ಕೂ ಹೆಚ್ಚು ನಗರಗಳಲ್ಲಿ ಜವಾನ್‌ನ ಹಲವು ಪ್ರದರ್ಶನಗಳನ್ನು ಆಯೋಜಿಸುತ್ತಿದೆ. ನಾವು ಮೊದಲ ದಿನ 85,000 ಎಸ್‌ಆರ್‌ಕೆ ಅಭಿಮಾನಿಗಳು ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಜವಾನ್ ಸಿನಿಮಾವನ್ನು ಸ್ವಾಗತಿಸಲು ನಾವು ಪ್ಲ್ಯಾನ್ ಮಾಡಿದ್ದೇವೆ" ಎಂದು ಹೇಳಿದ್ದಾರೆ.

ಸೂಪರ್ ಹಿಟ್ ಪಠಾಣ್ ಬಿಡುಗಡೆಯ ಸಂದರ್ಭದಲ್ಲಿ 200 ನಗರಗಳಲ್ಲಿ ಫ್ಯಾನ್ ಶೋಗಳನ್ನು ಆಯೋಜಿಸಲಾಗಿತ್ತು. ಈ ವೇಳೆ 50,000 ಅಭಿಮಾನಿಗಳು ಭಾಗವಹಿಸಿದ್ದರು. ಈ ಬಾರಿ ಜವಾನ್ 300 ನಗರಗಳಲ್ಲಿ ಫ್ಯಾನ್ ಶೋಗಳು ನಡೆಯಲಿದ್ದು, 85,000 ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಯಶ್ ಪರ್ಯಾನಿ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಫ್ಯಾನ್ ಶೋಗಳನ್ನು ಆಯೋಜಿಸುತ್ತಿದ್ದೇವೆ. 60 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನ ನಡೆಯಲಿವೆ. ಸೌತ್ ಸಿನಿಮಾ ಮಾರ್ಕೆಟ್‌ನಲ್ಲಿ ಕೂಡ ಸೆಲೆಬ್ರೇಷನ್ ಕಡಿಮೆಯೇನಿಲ್ಲ. ಮುಂಗಡ ಬುಕಿಂಗ್‌ನಲ್ಲಿಯೂ ನಾವು ಕೆಲವು ವಿಶೇಷ ಕಾರ್ಯಕ್ರಮಗಳನ್ನು ಯೋಜಿಸುತ್ತೇವೆ ಎಂದಿದ್ದಾರೆ.

ಮುಂಬೈನ ಐಕಾನಿಕ್ ಥಿಯೇಟರ್‌ನಲ್ಲಿ ಬೆಳಗ್ಗೆ 6 ಗಂಟೆಗೆ ಜವಾನ್ ಶೋ!

ಇದೇ ಮೊದಲ ಬಾರಿಗೆ ಮುಂಬೈನ ಐತಿಹಾಸಿಕ ಚಿತ್ರಮಂದಿರವಾದ ಗೈಟಿ ಗ್ಯಾಲಕ್ಸಿಯಲ್ಲಿ ಜವಾನ್ ಬೆಳಗ್ಗೆ 6 ಗಂಟೆಗೆ ಪ್ರದರ್ಶನವಾಗಲಿದೆ. ಹಿಂದಿ ಚಿತ್ರರಂಗದಲ್ಲಿ ಇದು ದಾಖಲೆಯಾಗಲಿದ್ದು, ಶಾರುಖ್ ಖಾನ್ ಅಭಿಮಾನಿಗಳು ಥಿಯೇಟರ್ ಬಳಿ ಟೌಟ್‌ಗಳನ್ನು ನಿಲ್ಲಿಸಲಿದ್ದಾರೆ. ಸಿನಿಮಾ ಬಿಡುಗಡೆ ವೇಳೆ ಡೋಲು ಬಾರಿಸಿ ಹಬ್ಬ ಆಚರಿಸಲಿದ್ದಾರೆ.

ಜವಾನ್ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅವರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಮಣಿ, ಸಾನ್ಯಾ ಮಲೋತ್ರಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

More from Filmibeat

English summary
85,000 SRK'S fans to come together to celebrate Jawan release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X