For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗೆ ಚಾರ್ಲಿ ಚಾಪ್ಲಿನ್ ಮೊಮ್ಮಗಳು ಕೈರಾ

  |

  ನಿರ್ದೇಶಕಿ ರಾಜಶ್ರೀ ಓಜಾ (Rajshree Ojha) ಅವರ ಸ್ವತಂತ್ರ ನಿರ್ದೇಶನದ ಪ್ರಪ್ರಥಮ ಚಿತ್ರ 'ಚೌರಾಹೆನ್' (Crossroads) ಬಿಡುಗಡೆ ದಿನಾಂಕ ಕೊನೆಗೂ ನಿಗದಿಯಾಗಿದೆ. ಮುಂದಿನ ತಿಂಗಳು ಅಂದರೆ ಮಾರ್ಚ್ 16, 2012ಕ್ಕೆ ಬಿಡುಗಡೆ ಆಗಲಿದೆ. ಇದಕ್ಕೂ ಮೊದಲು ಓಝಾ, 2010ರಲ್ಲಿ 'ಐಷಾ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಈ ಚಿತ್ರ ದೆಹಲಿ, ಕೊಲ್ಕತಾ, ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

  ಬಿಡುಗಡೆ ನಿರ್ಧಾರದಿಂದ ನಿರಾಳವಾಗಿರುವ ಓಝಾ, "ಈ ಚಿತ್ರ ಬಿಡುಗಡೆಗೆ ದೊಡ್ಡ ಸಮಸ್ಯೆಯಾಗಿದ್ದು ಭಾಷೆ. ಏನೇ ಆಗಲಿ, ಪಿವಿಆರ್ ಗಳಂತಹ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರದ ಬಿಡುಗಡೆ ಬಗ್ಗೆ ಆಸಕ್ತಿವಹಿಸಿವೆ. ಅದೇ ನಮ್ಮ ಭಾಗ್ಯ. ಹಾಗಾಗಿ ಚಿತ್ರ ಬಿಡುಗಡೆಗೆ ಮುಂದಾಗಿದ್ದೇವೆ" ಎಂದಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಅಭಯ್ ಡಿಯೋಲ್ ಹಾಗೂ ಸೋನಮ್ ಕಪೂರ್ ತಾರಾಗಣದ 'ಐಷಾ', ಬಾಕ್ಸ್ ಆಫೀಸಿನಲ್ಲಿ ಚೆನ್ನಾಗಿ ಗಳಿಸಿತ್ತು.

  ಆಶ್ಚರ್ಯಕರ ಸಂಗತಿ ಎಂದರೆ, ಈ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಮೊಮ್ಮಗಳು 'ಕೈರಾ (Kiera)' ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕೊಲ್ಕಾತಾದಲ್ಲಿ ವಿವಾಹೇತರ ಸಂಬಂಧ ಹೊಂದಿದ ಲಿಯಾ ಎಂಬ ಹೆಸರಿನ ಪಾತ್ರದಲ್ಲಿ ಕೈರಾ ನಟಿಸಿದ್ದಾರೆ. ಈ ವಿಷಯವನ್ನು ನಿರ್ದೇಶಕಿ ರಾಜಶ್ರೀ ಓಝಾ ಸ್ಪಷ್ಟಪಡಿಸಿದ್ದಾರೆ.

  ಕೈರಾ ಅವರನ್ನು ಹೇಗೆ ಬಾಲಿವುಡ್ ಚಿತ್ರಕ್ಕೆ ಕರೆತಂದಿದ್ದು ಎಂಬ ಬಗ್ಗೆ ಓಝಾ, "ನಾನು 1999ರಲ್ಲಿ ಅಮೆರಿಕಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮಾಡಿದ್ದ 'ಮಮೆಂಟ್' ಚಿತ್ರವನ್ನು ಆಕೆ ನೋಡಿ ಮೆಚ್ಚಿಕೊಂಡಿದ್ದರು. ನಂತರ, ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ಹೊಂದಿರುವುದಾಗಿ ಆಕೆ ಹೇಳಿಕೊಂಡಿದ್ದರು. ನಾನು ಭಾರತದಲ್ಲಿ ಇದನ್ನು ಚಿತ್ರೀಕರಿಸುತ್ತೇನೆ ಎಂದಾಗಲೂ ಆಕೆ ಒಪ್ಪಿದ್ದರಿಂದ ಸ್ಕ್ರಿಪ್ಟ್ ಕಳಿಸಿದೆ, ಮೆಚ್ಚಿ ನಟಿಸಿದ್ದಾರೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Charlie Chaplin’s granddaughter Kiera has an important role in the film, Director Rajshree Ojha’s first independent film, Chaurahen (Crossroads). She is playing Lea, who has an extramarital affair in Kolkata.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X