ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆ ನಟಿಸಿದ್ದ ಚೆಲುವೆ ಈಗ ಸನ್ಯಾಸಿನಿ, ಕಣ್ಣೀರಿಡುತ್ತಲೇ ದೀಕ್ಷೆ ಸ್ವೀಕರಿಸಿದ ನಟಿ..!

ಧರ್ಮ ಮತ್ತು ಆಧ್ಯಾತ್ಮದ ಅನುಕೂಲಗಳು ಒಂದೆರಡಲ್ಲ. ಇವು ಈ ಜನ್ಮಕಷ್ಟೇ ಅಲ್ಲ. ಮುಂದಿನ ಜನ್ಮದಲ್ಲಿ ಕೂಡ ವ್ಯಕ್ತಿಯನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ ಎನ್ನುವ ವಾದಗಳಿವೆ. ಮೋಕ್ಷಕ್ಕೆ ಇರುವ ಎರಡು ಅತ್ಯುತ್ತಮ ಮಾರ್ಗಗಳಿವು ಎಂದು ಸಾಧು ಸಂತರು ಹೇಳುತ್ತಾರೆ. ಹೀಗಾಗಿ ಅನೇಕರು ಆಧ್ಯಾತ್ಮ ಮತ್ತು ಧರ್ಮದತ್ತ ವಾಲುತ್ತಿದ್ದಾರೆ. ಲೌಕಿಕ ಜೀವನ ತೊರೆದು ಅಲೌಕಿಕ ಜೀವನದತ್ತ ಮುಖ ಮಾಡುತ್ತಿದ್ದಾರೆ. ಉದಾಹರಣೆಗೆ ಮಮತಾ ಕುಲಕರ್ಣಿ.

ಹೌದು, ಮಮತಾ ಕುಲಕರ್ಣಿ.. ಒಂದ್ಕಾಲದ ಸ್ಟಾರ್ ಹೀರೋಯಿನ್. ಆ ಕಾಲದಲ್ಲಿಯೇ ಮ್ಯಾಗ್‌ಜಿನ್‌ ಕವರ್ ಪೇಜ್‌ಗೆ ಟಾಪ್ ಲೆಸ್ ಆಗಿ ಫೋಸ್ ನೀಡಿದ್ದ ಮಮತಾ ಕುಲಕರ್ಣಿ ಬಾಜಿ, ಕರಣ್ ಅರ್ಜುನ್, ಚೈನಾ ಗೇಟ್, ಆಶಿಕ್ ಆವಾರ, ಕ್ರಾಂತಿವೀರ್, ಸಬ್ಸೆ ಬಡಾ ಕಿಲಾಡಿ, ಆಂದೋಲನ, ಹೀಗೆ ಹಲವಾರು ಚಿತ್ರಗಳನ್ನು ಮಾಡಿದ್ದರು. ಕೇವಲ ಹಿಂದಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡಿದ್ದ ಮಮತಾ ಕುಲಕರ್ಣಿ ಡಾ.ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ವಿಷ್ಣು ವಿಜಯ್ ಚಿತ್ರದಲ್ಲಿ ಕೂಡ ನಟಿಸಿದ್ದರು.

90 s star Mamta Kulkarni quits acting becomes a sadhvi and joins Kinnar Akhara at Maha Kumbh 2025

ಇನ್ನು ಖ್ಯಾತಿಯ ತುತ್ತತುದಿಯಲ್ಲಿದ್ದಾಗಲೇ ಮಮತಾ ಕುಲಕರ್ಣಿ ಅವರ ಮೇಲೆ ಅಂಡರ್‌ವರ್ಲ್ಡ್‌ ಡಾನ್ ಛೋಟಾ ರಾಜನ್ ಕಣ್ಣು ಬಿದ್ದಿತ್ತು. ಇದಕ್ಕೆ ಪೂರಕವಾಗಿ ಛೋಟಾ ರಾಜನ್ ಜೊತೆ ಮಮತಾ ಕುಲಕರ್ಣಿ ಹೆಸರು ಥಳಕು ಹಾಕಿಕೊಂಡಿತ್ತು. ಆ ಕಾಲದಲ್ಲಿ ಸಖತ್ ಸದ್ದು ಮಾಡಿತ್ತು. ಸಾಲದಕ್ಕೆ ಡ್ರಗ್ ಮಾಫಿಯಾದ ಕಿಂಗ್ ವಿಕ್ಕಿ ಗೋಸ್ವಾಮಿಯ ಸಾಂಗತ್ಯವನ್ನು ಕೂಡ ಮಮತಾ ಕುಲಕರ್ಣಿ ಬೆಳೆಸಿಕೊಂಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ವಿಕ್ಕಿಯನ್ನು ಬಿಡಿಸಿಕೊಂಡು ಬಂದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆತನನ್ನೇ ಮದುವೆಯಾದರು ಎಂಬ ಸುದ್ದಿಗಳೆಲ್ಲ ಆಗ ಹಬ್ಬಿದ್ದವು. 2000ನೇ ಇಸ್ವಿಯಲ್ಲಿ ಭಾರತವನ್ನು ಮಮತಾ ಕುಲಕರ್ಣಿ ತೊರೆದರು ಕೂಡ ಆ ನಂತರ 2016ರಲ್ಲಿ 2000 ಕೋಟಿ ಡ್ರಗ್ಸ್ ಪ್ರಕರಣದಲ್ಲಿ ಇದೇ ಮಮತಾ ಕುಲಕರ್ಣಿಯ ಹೆಸರು ಕೇಳಿ ಬಂದಿತ್ತು.

ಇಂಥಾ ಮಮತಾ ಕುಲಕರ್ಣಿಈಗ ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಸಾಧ್ವಿಯಾಗಿದ್ದಾರೆ. 2015ರಲ್ಲಿ ಪ್ರಾರಂಭವಾದ ತೃತಿಯ ಲಿಂಗಿಗಳ ಸಂಘ ಕಿನ್ನರ್ ಅಖಾಡದ ಮಹಾಮಂಡಲೇಶ್ವರಿಯನ್ನಾಗಿ ಮಮತಾ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಇದೊಂದು ಧಾರ್ಮಿಕ ಸ್ಥಾನವಾಗಿದ್ದು ನಿನ್ನೆ ಪಿಂಡ ಪ್ರಧಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಮತಾ ಕುಲಕರ್ಣಿ ಅವರಿಂದ ಮಾಡಿಸಲಾಗಿದೆ.

ಕಿನ್ನರ್ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ್ ತ್ರಿಪಾಠಿ, ಕಿನ್ನರ್ ಅಖಾಡವು ಮಮತಾ ಕುಲಕರ್ಣಿಯವರನ್ನು ಮಹಾಮಂಡಲೇಶ್ವರರನ್ನಾಗಿ ಮಾಡಿದೆ. ಅವರನ್ನು 'ಯಾಮೈ ಮಮತಾ ನಂದಗಿರಿ' ಎಂದು ಈಗ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ. ಕಳೆದು ಒಂದೂವರೆ ವರ್ಷದಿಂದ ನನ್ನೊಂದಿಗೆ ಅವರು ಸಂಪರ್ಕದಲ್ಲಿದ್ದರು ಅವರು ಬಯಸಿದರೆ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅವರು ಪಾತ್ರವನ್ನು ನಿರ್ವಹಿಸಬಹುದು ಆ ಅವಕಾಶ ಅವರಿಗಿದೆ ಎಂದು ಹೇಳಿದ್ದಾರೆ. ನಾವು ಈ ಕೆಲಸದಿಂದ ಅವರನ್ನು ತಡೆಯುವುದಿಲ್ಲ ಎಂದು ಹೇಳಿದ್ದಾರೆ.

ಅಂದ್ಹಾಗೇ ಹತ್ತು ವರ್ಷದ ಹಿಂದೆ ಮಂಗಳ ಮುಖಿ ಸಮುದಾಯಕ್ಕೆ ನ್ಯಾಯ ಒದಗಿಸಲು ಶುರುವಾದ ಅಖಾಡ ಈ ಕಿನ್ನರ್ ಅಖಾಡ. ಲಕ್ಷ್ಮಿನಾರಾಯಣ್ ತ್ರಿಪಾಠಿ ಅವರ ಸಾರಥ್ಯದಲ್ಲಿ ಶುರುವಾದ ಈ ಕಿನ್ನರ್ ಅಖಾಡ ಮಂಗಳಮುಖು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಸಮಾಜದಲ್ಲಿ ಮಂಗಳಮುಖಿಯರಿಗೆ ಗೌರವ ಸಿಗುವಂತೆ ಮಾಡುವದೇ ಕಿನ್ನರ್ ಅಖಾಡ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X