ಒಂದು ಸೆಮಿಸ್ಟರ್‌ಗೆ ₹95ಲಕ್ಷ ;ಮಗಳ ಫೀಸ್ ಕಟ್ಟಿಲ್ಲ ಎಂದ ಕರಿಷ್ಮಾ ಕಪೂರ್‌-ಸಾಕ್ಷಿ ಸಮೇತ ತಿರುಗೇಟು ನೀಡಿದ 3ನೇ ಪತ್ನಿ

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಇಂದು ಶಿಕ್ಷಣ ದುಬಾರಿಯಾಗಿದೆ. ಕೇವಲ ಬೆಂಗಳೂರಿನಲ್ಲಿಯೇ ಬಹುತೇಕ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಕನಿಷ್ಠ 60 ಸಾವಿರ ಶಾಲಾ ಶುಲ್ಕ ಇದೆ. ಒಂದನೇ ತರಗತಿಗೆ ಮಗುವನ್ನು ಸೇರಿಸಬೇಕಂದರೆ ಒಂದು ಲಕ್ಷ ಹಣ ಬೇಕೆ ಬೇಕು ಎಂಬಂತಹ ವಾತಾವರಣ ಇದೆ. ''ಎಜುಫಂಡ್‌'' ಸಂಸ್ಥೆ ಪ್ರಕಾರ, 2012-20ರ ಅವಧಿಯಲ್ಲಿ ಶಿಕ್ಷಣ ವೆಚ್ಚದಲ್ಲಿ ಶೇ. 10-12ರಷ್ಟು ಏರಿಕೆಯಾಗಿದೆ.

ಇನ್ನು ಒಂದು ವರದಿಯ ಪ್ರಕಾರ 17ವರ್ಷದ ಕಲಿಕೆಗೆ 30 ಲಕ್ಷ ಬೇಕಾಗುತ್ತೆ. ಹೀಗಾಗಿ ಸದ್ಯ ಶಿಕ್ಷಣ ಎನ್ನುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಬಿಸಿ ತುಪ್ಪವಾದಂತಾಗಿದೆ. ಆದರೆ.. ಶ್ರೀಮಂತರಿಗೆ ಈ ತಲೆ ನೋವು ಇಲ್ಲ. ಶಿಕ್ಷಣ ದುಬಾರಿಯಾದರೂ ಕೂಡ ಚಿಂತೆ ಇಲ್ಲ. ಲಕ್ಷಾಂತರ ಹಣವನ್ನು ಖರ್ಚು ಮಾಡಿ ತಮ್ಮ ಮಕ್ಕಳಿಗೆ ಇವರು ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ. ಉದಾಹರಣೆಗೆ ಕರಿಷ್ಮಾ ಕಪೂರ್ ಮತ್ತು ಅವರ ಮಗಳನ್ನೇ ತೆಗೆದುಕೊಳ್ಳಿ.

95-lakh-paid-priya-kapur-reveals-receipt-karismas-daughters-us-tuition-slams-unpaid-fees-court

ಹೌದು, ನಿಮಗೆ ಗೊತ್ತಿರಲಿ.. ಕರಿಷ್ಮಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ (ಸಚ್‌ದೇವ್‌ ) ನಡುವೆ 30,000 ಕೋಟಿ ಆಸ್ತಿಗಾಗಿ ಕಲಹ ನಡೆಯುತ್ತಿದೆ. ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆ ಮೊನ್ನೆ..ಮೊನ್ನೆಯಷ್ಟೇ.. ಕರಿಷ್ಮಾ ಕಪೂರ್ ನನ್ನ ಮಗಳು ಸಮೈರಾ ಕಪೂರ್ ವಿದ್ಯಾಭ್ಯಾಸದ ಶುಲ್ಕವನ್ನೆಲ್ಲಾ ತಮ್ಮ ಮಾಜಿ ಸಂಜಯ್ ಕಪೂರ್ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದರು. ಸಂಜಯ್ ಕಪೂರ್ ಅಗಲಿಕೆಯ ನಂತರ ಮಗಳ ಕಾಲೇಜ್ ಫೀಸ್‌ ಕಟ್ಟದೇ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಸತಾಯಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಕಪೂರ್ ಮತ್ತು ಕಿಯಾನ್ ರಾಜ್ ಕಪೂರ್ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದ್ದರು. ಕರಿಷ್ಮಾ ಕಪೂರ್ ಅವರ ಮಗಳು ಸಮೈರಾ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಅವರ ಶುಲ್ಕ ಪಾವತಿ ಮಾಡಿಲ್ಲ ಎಂದು ಹೇಳಿದ್ದರು.

ಮಹೇಶ್ ಜೇಠ್ಮಲಾನಿ ಅವರ ಈ ವಾದಕ್ಕೆ ಪ್ರತಿಯಾಗಿ ಪ್ರಿಯಾ ಕಪೂರ್ ( ಸಂಜಯ್ ಕಪೂರ್ ಮೂರನೇ ಪತ್ನಿ ) ಪರ ರಾಜೀವ್ ನಾಯರ್ ಪ್ರತಿವಾದ ಮಾಡಿದ್ದಾರೆ. ಆರೋಪ ತಳ್ಳಿ ಹಾಕಿದ್ದರು. ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಖರ್ಚು ವೆಚ್ಚಗಳೆಲ್ಲವನ್ನು ಪ್ರಿಯಾ ಕಪೂರ್ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದ ರಾಜೀವ್ ನಾಯರ್ ಮಾಧ್ಯಮಗಳಲ್ಲಿ ವರದಿಯಾಗಲಿ.. ಪತ್ರಿಕೆಗಳಲ್ಲಿ ಈ ವಿಷಯ ಬರಲಿ.. ಎಂಬ ಉದ್ದೇಶದಿಂದ ಈ ಆರೋಪ ಮಾಡಲಾಗುತ್ತಿದೆ ಎಂದು ಪ್ರತಿವಾದ ಮಂಡಿಸಿದ್ದರು.

ಈ ಸಮಯದಲ್ಲಿ ದೆಹಲಿ ಹೈಕೋರ್ಟ್ ಜಡ್ಜ್ ಜ್ಯೋತಿ ಸಿಂಗ್ ಇದೇ ಕೊನೆ ನಾನು ಈ ವಿಚಾರದ ಮೇಲೆ 30 ಸೆಕೆಂಡ್ ಕೂಡ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದರು. ಈ ಪ್ರಶ್ನೆ ಮತ್ತೆ ನನ್ನ ನ್ಯಾಯಾಲಯಕ್ಕೆ ಬರಬಾರದು. ಈ ವಿಚಾರಣೆಯನ್ನು ನಾಟಕೀಯವಾಗುವುದನ್ನು ನಾನು ಬಯಸುವುದಿಲ್ಲ ಎಂದು ಕರಿಷ್ಮಾ ಕಪೂರ್ ಮತ್ತು ಪ್ರಿಯಾಗೆ ಎಚ್ಚರಿಕೆ ನೀಡಿದ್ದರು.

95-lakh-paid-priya-kapur-reveals-receipt-karismas-daughters-us-tuition-slams-unpaid-fees-court

ಇದೀಗ ಈ ವಿಚಾರಣೆಯ ಮುಂದುವರೆದ ಭಾಗವೆನ್ನುವಂತೆ ಕರಿಷ್ಮಾ ಕಪೂರ್ ಮಾಡಿದ್ದ ಆರೋಪಗಳಿಗೆ ಪ್ರಿಯಾ ಸಚ್‌ದೇವ್ ತಮ್ಮ ವಕೀಲ ಶೈಲ್ ಟ್ರೆಹಾನ್ ಮೂಲಕ ಉತ್ತರ ನೀಡಿದ್ದಾರೆ. ಪ್ರತಿ ಸೆಮಿಸ್ಟರ್‌ಗೆ 95ಲಕ್ಷ ಹಣವನ್ನು ಕಾಲೇಜ್‌ಗೆ ಪಾವತಿ ಮಾಡಿರುವ ಶುಲ್ಕವನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಮುಂದಿನ ಕಂತು ಮುಂಬರುವ ಡಿಸೆಂಬರ್‌ನಲ್ಲಿದೆ ಎಂದು ಹೇಳಿದ್ದಾರೆ, ಈ ಮೂಲಕ ನ್ಯಾಯಾಲಯದಲ್ಲಿ ಕರಿಷ್ಮಾ ಕಪೂರ್ ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಪ್ರಿಯಾ ಸಾಬೀತು ಮಾಡಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್‌'' ವರದಿ ಮಾಡಿದೆ.

ಅಂದ್ಹಾಗೇ ಕರಿಷ್ಮಾ ಕಪೂರ್ ಅವರ ಮಗಳು ಸಮೈರಾಗೆ ಈಗ 20-21 ವರ್ಷ. ''ಎಕನಾಮಿಕ್ ಟೈಮ್ಸ್'' ವರದಿಯ ಪ್ರಕಾರ, ಕರಿಷ್ಮಾ ಮತ್ತು ಸಂಜಯ್ ಕಪೂರ್ ಅವರ ಮಗಳು ಸಮೈರಾ ಅಮೆರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಮೆರಿಕದ ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ವಿದ್ಯಾಭ್ಯಾಸ 2027ರಲ್ಲಿ ಕೊನೆಯಾಗಲಿದೆ.

ಇನ್ನುಳಿದಂತೆ ಮಾಧ್ಯಮ ವರದಿಗಳ ಪ್ರಕಾರ ಸಂಜಯ್ ಕಪೂರ್ ಅವರಿಂದ 2016ರಲ್ಲಿ ಡಿವೋರ್ಸ್ ಪಡೆದ ಕರಿಷ್ಮಾ ಕಪೂರ್ ಆ ನಂತರ ಮುಂಬೈನ ಖಾರ್‌ನಲ್ಲಿರುವ ಸಂಜಯ್ ಕಪೂರ್ ಅವರ ಮನೆಯನ್ನು ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಕೂಡ ಖರೀದಿ ಮಾಡಿದರು. ಈ ಬಾಂಡ್‌ಗಳಿಂದ ಪ್ರತಿ ತಿಂಗಳು ಸುಮಾರು ಹತ್ತು ಲಕ್ಷ ಬಡ್ಡಿ ಕರಿಷ್ಮಾ ಕಪೂರ್‌ಗೆ ಬರುತ್ತೆ.

More from Filmibeat

English summary
Where does Karisma Kapoor's daughter study? Priya Kapur provides court evidence of ₹95 lakh tuition payment for Samaira Kapoor's college in the USA amidst a property feud.
Read more about: karishma kapoor money property
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X