»   » ಯುವ ಹೃದಯಗಳನ್ನು ಒಂದುಗೂಡಿಸಿದ 9Apps

ಯುವ ಹೃದಯಗಳನ್ನು ಒಂದುಗೂಡಿಸಿದ 9Apps

Posted By:
Subscribe to Filmibeat Kannada

ನಿಮಗೊಂದು ವಿಷಯ ಗೊತ್ತಾ? ನಾನೊಂದು ಹುಡುಗನ ನೋಡಿದೆ. ಆತನ ಒಂದು ಸಣ್ಣ ಮುಗುಳ್ನಗೆ ನನ್ನ ಹೃದಯದ ಬಡಿತವನ್ನು ಒಂದು ಸೆಕೆಂಡ್ ನಿಲ್ಲಿಸಿಬಿಡ್ತು. ಅಷ್ಟು ಚೆಂದದ ಕೆನ್ನೆಗುಳಿ ನಾನು ನೋಡೇ ಇಲ್ಲ. ಕ್ಷಣ ಕೂಡ ತಡಮಾಡದೆ ಆತ ಫೋಟೋ ಕ್ಲಿಕ್ಕಿಸಿದೆ. ಆತನ ನೋಟದಲ್ಲಿ ಕಳೆದುಹೋಗಬೇಕೆನ್ನಿಸುವಷ್ಟರಲ್ಲಿ ಆತ ಹೊರಟುಹೋಗಿದ್ದ. ನನಗರಿವಿಲ್ಲದಂತೆ ಆ ಒಂದೇ ಘಳಿಗೆಯಲ್ಲಿ ನಾನು ಲವ್ವಲ್ಲಿ ಬಿದ್ದಿದ್ದೆ!

ಮೊಬೈಲಿಗೆ ಮನಸೋತಿರುವ ಈ ಯುಗದಲ್ಲಿ ಬೇರೆಲ್ಲ ಏನು ಮಾಡುತ್ತಿದ್ದರೋ ಅದನ್ನೇ ನಾನು ಕೂಡ ಮಾಡಿದ್ದೆ. ಲಗುಬಗನೆ ಆ ಯುವಕನ ಸುಂದರ ಚಿತ್ರವನ್ನು #cuteguyalert ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದೆ. ಆ ಸುಂದರನನ್ನು ಮತ್ತೆ ಭೇಟಿಯಾಗುತ್ತೇನಾ ಎಂಬ ಕನವರಿಕೆಯಲ್ಲಿ ಮುಳುಗಿದೆ. ಆದರೆ, ಆತನನ್ನು ಇನ್ನೆಂದೂ ಭೇಟಿಯಾಗಿಲು ಸಾಧ್ಯವೇ ಇಲ್ಲ ಎಂದು ಮನಸ್ಸು ಹೇಳುತ್ತಿತ್ತು.

ಮೊದಲ ನೋಟದಲ್ಲೇ ಯುವಕನ ಚೆಲುವಿಗೆ ಪರವಶಳಾದ ಯುವತಿಯ ಮಾತುಗಳಿವು. ಈಗ, ಹೇಳಿ ಹುಡುಗರು ಮಾತ್ರ ಹುಡುಗಿಯರನ್ನು ಬೆನ್ನತ್ತುತ್ತಾರಾ? ಕಥೆ ಇಲ್ಲಿಗೇ ಮುಗಿಯುವುದಿಲ್ಲ. 9Apps, ಭಾರತದ ಅತಿ ಜನಪ್ರಿಯ ಥರ್ಡ್ ಪಾರ್ಟಿ ಆಪ್, ಎರಡು ಯುವಮನಸ್ಸುಗಳನ್ನು, ಯುವಹೃದಯಗಳನ್ನು ಒಂದುಗೂಡಿಸುವಲ್ಲಿ ಸಫಲವಾಗಿದೆ. ಮತ್ತು ಪ್ರೀತಿಗೆ ಯಾವುದೇ ಎಲ್ಲೆ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.

#cuteguyalert

ಆ ಚೆಲುವಾಂತ ಚೆನ್ನಿಗನ ಫೋಟೋ ಕ್ಲಿಕ್ಲಿಸಿದ್ದು ಮುಂಬೈನ ಯುವತಿ ಪ್ರಿಯಾಂಕಾ. ಗುರ್ಗಾಂವ್ನಲ್ಲಿ ನಡೆದ 9Apps ರೋಡ್ ಶೋನಲ್ಲಿ ಆತನನ್ನು ಕಂಡು, ಆತನನ್ನು ಮತ್ತೆ ಸೇರುವ ಬಯಕೆಯಿಂದ ಆತನ ಚಿತ್ರವನ್ನು #cuteguyalertನೊಂದಿಗೆ ಟ್ವೀಟ್ ಮಾಡಿದ್ದಳು.

ಆ ಚೆಲುವನ ಹೆಸರು ವಿನಯ್

ಚೆಲುವನ ಚಿತ್ರ ಮತ್ತು ಟ್ವೀಟ್ ಕಾಣಿಸುತ್ತಿದ್ದಂತೆ ಕೂಡಲೆ ಕಾರ್ಯತತ್ಪರವಾದ 9Apps ತಂಡ ಕೆಲವೇ ನಿಮಿಷಗಳಲ್ಲಿ ಗುಳಿಕೆನ್ನೆಯ ಯುವಕನನ್ನು ಪತ್ತೆ ಹಚ್ಚಿತು. ಆತನ ಹೆಸರು ವಿನಯ್.

ಟ್ವಿಟ್ಟರಲ್ಲಿ ಟ್ರೆಂಡ್ ಆದ #cuteguyalert

9Apps ತಂಡ ಆ ಯುವಕನನ್ನು ಪತ್ತೆ ಹಚ್ಚಿದ್ದು ಮಾತ್ರವಲ್ಲ, ಮುಂಬೈನ ಯುವತಿ ಪ್ರಿಯಾಂಕಾ ದೆಹಲಿಗೆ ವಿಮಾನದಲ್ಲಿ ಹಾರಿ ವಿನಯ್ ಜೊತೆ ಕೆಲ ಅಮೂಲ್ಯ ಕ್ಷಣಗಳನ್ನು ಕಳೆಯಲು, ಆತನನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡಿತು.

ಆತನ ಕಂಡೊಡನೆ ಆಕೆ ನೆಲದ ಮೇಲಿರಲಿಲ್ಲ

ಒಂದೇ ಕ್ಷಣ ಕಂಡಿದ್ದ ಯುವಕ ವಿನಯ್ ನನ್ನು ಮತ್ತೆ ನೋಡುತ್ತಿದ್ದಂತೆ ಪ್ರಿಯಾಂಕಾಳ ಖುಷಿ ಮುಗಿಲು ಮುಟ್ಟಿತ್ತು. ಆಕೆಯ ಹೃದಯ ತಾಳತಪ್ಪಿತ್ತು.

ವಿನಯ್ ಕೂಡ ಅಚ್ಚರಿಗೊಂಡಿದ್ದ

ತನ್ನ ಮೇಲೆ ಯುವತಿಯೊಬ್ಬಳಿಗೆ ಕ್ರಷ್ ಇದೆ ಎಂದು ತಿಳಿಯುತ್ತಿದ್ದಂತೆ ವಿನಯ್ ಕೂಡ ಆಶ್ಚರ್ಯಚಕಿತಗೊಂಡಿದ್ದ. ತನ್ನನ್ನು ಭೇಟಿಯಾಗಲು ಮುಂಬೈನಿಂದ ದೆಹಲಿಗೆ ಆಕೆ ವಿಮಾನದಲ್ಲಿ ಬಂದಿದ್ದು ಕೇಳಿ ಆತನನ್ನು ವಿಸ್ಮಯಗೊಳಿಸಿತ್ತು.

ಅಮೂಲ್ಯ ಕ್ಷಣ ಕಳೆದ ಜೋಡಿ

ಇದೊಂದು ಅವಿಸ್ಮರಣೀಯ ಘಳಿಗೆಯಾಗಿದ್ದು ಯುವಜೋಡಿಗಳಿಗೆ. ಇಬ್ಬರೂ ಮಾತುಕತೆ ಆಡುತ್ತ, ಒಬ್ಬರನ್ನೊಬ್ಬರು ನೋಡುತ್ತ ಇಡೀ ಜಗತ್ತನ್ನೇ ಮರೆತಿದ್ದರು. ನಂತರ, ಇದಕ್ಕೆ ಸಹಾಯ ಮಾಡಿದ 9Apps ತಂಡಕ್ಕೆ ಇಬ್ಬರೂ ಥ್ಯಾಂಕ್ಸ್ ಹೇಳಿದ್ದರು.

ಸಂಭಾವ್ಯ ಪ್ರೇಮಿಗಳು ಒಂದಾಗುವರೆ?

ಎರಡು ಯುವಮನಸ್ಸುಗಳನ್ನು ಒಂದುಗೂಡಿಸುವಲ್ಲಿ ಇರುವಂಥ ಸುಖ ಮತ್ತೊಂದರಲ್ಲಿ ಎಲ್ಲಿದೆ? ಪ್ರಿಯಾಂಕಾ ಮತ್ತು ವಿನಯ್ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ. ಮುಂದೆ ಇಬ್ಬರೂ ಪ್ರಣಯಪಕ್ಷಿಗಳಂತೆ ಜೊತೆಯಾಗಿ ಗೂಡುಕಟ್ಟುತ್ತಾರಾ? ಕಾಲವೇ ಉತ್ತರಿಸಲಿದೆ.


ಸ್ಪರ್ಧೆ, ಭರ್ಜರಿ ಬಹುಮಾನ : 9Apps ಫ್ಯಾನ್ ಫೆಸ್ಟ್ ಎಂಬ ಒಂದು ಸ್ಪರ್ಧೆಯನ್ನು (#dancing9) ಏರ್ಪಡಿಸಿದ್ದು, ಹತ್ತು ಲಕ್ಷ ರು. ಬಹುಮಾನ ಗೆಲ್ಲುವ ಅವಕಾಶವನ್ನು ಯುವಕ ಯುವತಿಯರಿಗೆ ಒದಗಿಸಿದೆ. ಈ ಸ್ಪರ್ಧೆ 9 ದಿನ ಇರಲಿದೆ, ಗೆದ್ದವರಿಗೆ ಮ್ಯಾಕ್‌ಬುಕ್ ಇನಾಮು ದೊರೆಯಲಿದೆ.

9Apps ಕುರಿತು : 9Apps ಸಂಸ್ಥೆ ಜಾಗತಿಕವಾಗಿ ಮಾರುಕಟ್ಟೆಯನ್ನು ಪಸರಿಸಿಕೊಂಡಿದ್ದು, ಭಾರತದಲ್ಲಿ ವೈವಿಧ್ಯಮಯ ಆಪ್‌ಗಳನ್ನು ಮೊಬೈಲ್ ಬಳಕೆದಾರರಿಗೆ ಒದಗಿಸುತ್ತಿದೆ. 9Appsನ್ನು 9Apps.com ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಲಕ್ಷಾಧಿಪತಿಯಾಗುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಫ್ಯಾನ್ ಫೆಸ್ಟ್ ನಡೆಸುತ್ತಿರುವ #dancing9 ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ.

English summary
9Apps, India's most popular third party app store helped two prospective lovers unite and proved once again that love has no boundaries. The girl, who saw young handsome guy and fell in love in a second. She posted the photo of guy on twitter with a hashtag #cuteguyalert. And this clicked.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada