'30'ರ ಹರೆಯದ 'ಯುವಕ'ನನ್ನು ಮನಸಾರೆ ಪ್ರೀತಿಸುತ್ತಿರುವ '49' ವರ್ಷದ ಖ್ಯಾತ 'ನಾಯಕಿ'...!
ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ. ಇದಕ್ಕೆ ಬಾಲಿವುಡ್‌ನ ಬೆಡಗಿ ಅಮೀಶಾ ಪಟೇಲ್ ಅವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ.
ಹೌದು, ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಅಮೀಶಾ ಪಟೇಲ್ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಸಮಯದಲ್ಲಿ ಬಾಲಿವುಡ್‌ನ ಹಿರಿಯ ನಿರ್ದೇಶಕ ವಿಕ್ರಂ ಭಟ್ ಜೊತೆ ಪ್ರೀತಿಯಲ್ಲಿ ಬಿದ್ದರು. ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ ಎಂದು ತೇಲಿದರು. ತಮ್ಮ ಚಿತ್ರ ಜೀವನದ ಕಡೆ ಗಮನ ಕೊಡದೇ ಪ್ರೇಮದ ಅಮಲೇರಿಸಿಕೊಂಡರು.

ಆದರೆ ಈ ಅಮಲು ಆ ನಂತರ ಇಳಿಯಿತು. ಸಂಬಂಧವೂ ಮುರಿದು ಬಿತ್ತು. ಈ ಕಡೆ ಅವಕಾಶಗಳ ಕೊರತೆ ಕೂಡ ಎದುರಾಯಿತು. ಈ ಕಾರಣಕ್ಕೆ ಬಾಲಿವುಡ್‌ನಿಂದ ದೂರವಾದ ಅಮೀಶಾ ಆ ನಂತರ ಸಭೆ-ಸಮಾರಂಭ-ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ರಿಬ್ಬನ್ ಕತ್ತರಿಸಲು ದುಡ್ಡು ಕೇಳಲು ಶುರು ಮಾಡಿದರು. ಫ್ಯಾಶನ್ ಶೋಗಳಲ್ಲಿ ತಮ್ಮ ಅಂದ ಚೆಂದದಿಂದ ಕಣ್ಮನ ಸೆಳೆಯುವ ಪ್ರಯತ್ನ ಮಾಡಿದರು. ಇದರ ನಡುವೆ ಲಂಡನ್ ಮೂಲದ ವ್ಯಾಪಾರಿ ಕನವ್ ಪುರಿ ಜೊತೆ ಮತ್ತೊಮ್ಮೆ ಪ್ರೀತಿಯ ಬಲೆಯಲಿ ಸಿಲುಕಿದ ಅಮೀಶಾ ಹೆಸರು ಆ ನಂತರ ರಣ್ಭೀರ್ ಕಪೂರ್ ಮತ್ತು ಪ್ರೀತಿ ಜಿಂಟಾ ಅವರ ಮಾಜಿ ಪ್ರಿಯಕರ ನೆಸ್ ವಾಡಿಯಾ ಜೊತೆ ಕೂಡ ತಳುಕು ಹಾಕಿಕೊಂಡಿತ್ತು.
ಹೀಗೆ ಕಾಲ ಕಾಲಕ್ಕೆ ಪ್ರೀತಿಸಿ ಆ ನಂತರ ಆ ಪ್ರೀತಿಯನ್ನು ಕಳೆದುಕೊಂಡ ಅಮೀಶಾ ಪಟೇಲ್ ಈಗ ತಮ್ಮ 49ನೇ ವಯಸ್ಸಿನಲ್ಲಿ ತಮಗಿಂತ 19 ವರ್ಷ ಚಿಕ್ಕವನಾಗಿರುವ ಹುಡುಗನ ಜೊತೆ ಇನ್ನೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೀಗೊಂದು ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಅಮೀಶಾ ಪಟೇಲ್ ಮತ್ತು ನಿರ್ವಾನ್ ಬಿರ್ಲಾ ಅವರ ಆಪ್ತವಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದುಬೈನಲ್ಲಿ ಇಬ್ಬರು ಈ ಫೋಟೊ ಕ್ಲಿಕಿಸಿಕೊಂಡಿದ್ದಾರೆ. ನಿರ್ವಾನ್ ಬಿರ್ಲಾ ಅವರ ತೊಡೆಯ ಮೇಲೆ ಅಮೀಶಾ ಪಟೇಲ್ ಕುಳಿತುಕೊಂಡಿದ್ದಾರೆ. ಇನ್ನೂ ನಿರ್ವಾನ್ ಬಿರ್ಲಾ ಅವರನ್ನು ಅಮೀಶಾ ಪಟೇಲ್ ಡಾರ್ಲಿಂಗ್ ಎಂದು ಕರೆದರೆ ನಿರ್ವಾನ್ ಬಿರ್ಲಾ ಲವ್ ಯೂ ಎಂಬ ಉತ್ತರವನ್ನು ನೀಡಿದ್ದಾರೆ. ಹೀಗಾಗಿಯೇ ಹುಬ್ಬೇರಿಸಿರುವ ಅನೇಕರು ಅಮೀಶಾ ಪಟೇಲ್ ಮತ್ತು ನಿರ್ವಾನ್ ಬಿರ್ಲಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ವಯಸ್ಸಿನಲ್ಲಿ ಇದೆಲ್ಲ ಬೇಕಾ ಎಂಬ ಪ್ರಶ್ನೆಯನ್ನು ಕೂಡ ಅಮೀಶಾ ಪಟೇಲ್‌ಗೆ ಕೇಳಿದ್ದಾರೆ.
ಇದರ ನಡುವೆ ಅಮೀಶಾ ಪಟೇಲ್ ಕೇವಲ ಶ್ರೀಮಂತ ಹುಡುಗರ ಹಿಂದೆ ಅಲೆಯುತ್ತಿರುತ್ತಾರೆ ಎನ್ನುವ ಕಾಮೆಂಟ್‌ನ ಒಬ್ಬರು ಮಾಡಿದ್ದರೆ, ಮತ್ತೊಬ್ಬರು ನೀವು ಆ ಹುಡುಗನ ತಾಯಿಯಂತೆ ಕಾಣುತ್ತಿದ್ದೀರಾ ಎಂದಿದ್ದಾರೆ. ನಿಮಗಿಂತ ಹತ್ತೊಂಬತ್ತು ವರ್ಷ ಚಿಕ್ಕವನ ಜೊತೆ ಈ ತರಹದ ನವರಂಗಿ ಆಟ ಆಡಲು ನಿಮಗೆ ನಾಚಿಕೆಯಾಗಲ್ವಾ ಎಂದು ಕೂಡ ಮತ್ತೊಬ್ಬರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಅಂದ್ಹಾಗೇ ನಿರ್ವಾನ್ ಬಿರ್ಲಾ ಉದ್ಯಮಿಯೂ ಹೌದು. ಗಾಯಕ ಕೂಡ ಹೌದು. ಬಿರ್ಲಾ ಬ್ರೈನಿಯಾಕ್ಸ್ ಮತ್ತು ಬಿರ್ಲಾ ಓಪನ್ ಮೈಂಡ್ಸ್ ಸಂಸ್ಥಾಪಕ ಕೂಡ ಆಗಿರುವ ನಿರ್ವಾಣ್ ಬಿರ್ಲಾ, ಯಶೋವರ್ಧನ್ ಬಿರ್ಲಾ ಮತ್ತು ಅವಂತಿ ಬಿರ್ಲಾ ಅವರ ಮುದ್ದಿನ ಮಗ. ಸದ್ಯಕ್ಕೆ ಅಮೀಶಾ ಪಟೇಲ್ ಮತ್ತು ನಿರ್ವಾನ್ ಬಿರ್ಲಾ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಚರ್ಚೆ ಆಗುತ್ತಿದೆ. ತಮ್ಮ ಪ್ರೇಮ ಸಂಬಂಧವನ್ನು ಇಬ್ಬರು ಅಧಿಕೃತಗೊಳಿಸುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











