58ನೇ ವಯಸ್ಸಿನಲ್ಲಿ ತಂದೆಯಾದ ಅರ್ಬಾಜ್ ಖಾನ್ ; 22 ವರ್ಷ ಚಿಕ್ಕವಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ಹೇಗೆ ಸಲ್ಮಾನ್ ಸಹೋದರ?

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ತಮ್ಮ 58ನೇ ವಯಸ್ಸಿನಲ್ಲಿ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, 2023 ಡಿಸೆಂಬರ್ 24ರಂದು ಅರ್ಬಾಜ್ ಖಾನ್ ತಮ್ಮ ಮಾಜಿ ಪತ್ನಿ ಮಲೈಕಾ ಅರೋರಾ ಅವರನ್ನು ಮರೆತು ತನಗಿಂತ 22 ವರ್ಷ ಚಿಕ್ಕವಳಾದ ಶುರಾ ಖಾನ್ ಜೊತೆ ಅರ್ಬಾಜ್ ಖಾನ್ ಮದುವೆಯ ಬಂಧನಕ್ಕೊಳಗಾಗಿದ್ದರು. ಮುಂಬೈನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ಎರಡು ವರ್ಷಗಳ ನಂತರ ಶುರಾ ಖಾನ್ ಹೆಣ್ಣು ಮಗುಗೆ ಜನ್ಮ ನೀಡಿದ್ದಾರೆ. ಈ ಮೂಲಕ 22 ವರ್ಷಗಳ ನಂತರ ಅರ್ಬಾಜ್ ಖಾನ್ ಮತ್ತೊಮ್ಮೆ ತಂದೆಯಾಗಿದ್ದಾರೆ.

a-baby-girl-arbaaz-khan-sshura-welcome-first-child-salman-khan-joins-family-celebration

ಶುರಾ ಖಾನ್‌ಗೆ ಮನ ಸೋತಿದ್ದು ಎಲ್ಲಿ ಅರ್ಬಾಜ್ ಖಾನ್ ?

ಮಲೈಕಾ ಅರೋರಾ ಅವರಿಂದ ದೂರವಾದ ಅರ್ಬಾಜ್ ಖಾನ್ '' ಪಾಟ್ನಾ ಶುಕ್ಲಾ'' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ಕೆಜಿಎಫ್‌ನ ಚೆಲುವೆ ರವೀನಾ ಟಂಡನ್ ಈ ಚಿತ್ರದ ಪ್ರಮುಖ ಪಾತ್ರಧಾರಿಯಾಗಿದ್ದರು. ಇನ್ನು ಶುರಾ ಇದೇ ರವೀನಾ ಟಂಡನ್ ಅವರ ಪಾಲಿನ ಆಪ್ತೆ. ಮೇಕಪ್ ಆರ್ಟಿಸ್ಟ್ ಆಗಿ ಅದಾಗಲೇ ಬಾಲಿವುಡ್‌ ನಲ್ಲಿ ಗುರುತಿಸಿಕೊಂಡಿದ್ದ ಶುರಾ, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾಗೆ ಖಾಯಂ ಆಗಿ ಮೇಕಪ್ ಮಾಡುತ್ತಿದ್ದರು.

ಇನ್ನೂ ಅರ್ಬಾಜ್ ಈ ಚಿತ್ರದ ನಿರ್ಮಾಪಕ. ಈ ಹಿನ್ನೆಲೆ ತಮ್ಮ ಚಿತ್ರದ ಚಿತ್ರೀಕರಣ ಸ್ಥಳಕ್ಕೆ ದಿನ ಅರ್ಬಾಜ್ ಹೋಗುತ್ತಿದ್ದರು. ಈ ಸಮಯದಲ್ಲಿ ಶುರಾ ಪರಿಚಯವಾಯ್ತು. ಇಲ್ಲಿಂದ ಶುರಾ ಜೊತೆ ಶುರುವಾದ ಸ್ನೇಹ ಸದ್ಯ ಈ ಹಂತದವರೆಗೆ ಕರೆದು ತಂದು ನಿಲ್ಲಿಸಿದೆ.

ಅರ್ಬಾಜ್‌ ಖಾನ್‌ಗೆ ಇದ್ದಾನೆ ಎದೆಯೆತ್ತರಕ್ಕೆ ಬೆಳೆದ ಮಗ

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಹೆಚ್ಚು ಕಡಿಮೆ ಎರಡು ದಶಕ ಜೊತೆಯಾಗಿ ಸಂಸಾರ ಮಾಡಿದ್ದರು. ಒಂದೇ ಸೂರಿನಡಿ ಖುಷಿ ಖುಷಿಯಾಗಿ ಕಾಲ ಕಳೆದಿದ್ದರು. ಇವರ ಇಬ್ಬರ ಪ್ರೇಮದ ಸಂಕೇತವಾಗಿ ಇಬ್ಬರಿಗೆ ಅರ್ಹಾನ್ ಎಂಬ ಮಗ ಇದ್ದಾನೆ. ಅರ್ಹಾನ್‌ಗೆ ಈಗ 22 ವರ್ಷ. ವಿಶೇಷ ಅಂದರೆ ಅರ್ಬಾನ್ ಖಾನ್ ಮತ್ತು ಶುರಾ ಖಾನ್‌ ನಡುವೆ ಕೂಡ 22 ವರ್ಷಗಳ ಅಂತರ ಇದೆ.

a-baby-girl-arbaaz-khan-sshura-welcome-first-child-salman-khan-joins-family-celebration

ಮಾಜಿ ಗಂಡನ ಮದುವೆಯಲ್ಲಿ ಭಾಗವಹಿಸಿದ್ದ ಮಲೈಕಾ

ಡಿಸೆಂಬರ್‌ 2023ರಲ್ಲಿ ನಡೆದ ಅರ್ಬಾಜ್ ಖಾನ್ ಮತ್ತು ಶುರಾ ಮದುವೆಯಲ್ಲಿ ಅರ್ಬಾಜ್ ಖಾನ್ ಮೊದಲ ಪತ್ನಿ ಮಲೈಕಾ ಅರೋರಾ ಕೂಡ ಭಾಗವಹಿಸಿದ್ದರು. ರವೀನಾ ಟಂಡನ್ ಮತ್ತು ಮಗಳು ರಾಶಾ ಥಡಾನಿ, ರಿದ್ಧಿಮಾ ಪಂಡಿತ್, ರಿತೇಶ್ ದೇಶ್‌ಮುಖ್ ಮತ್ತು ಪತ್ನಿ ಜೆನಿಲಿಯಾ ದೇಶಮುಖ್ ಕೂಡ ನಿಖಾದಲ್ಲಿ ಭಾಗಯಾಗಿದ್ದರು. ಸಲ್ಮಾನ್ ಖಾನ್ ಸೇರಿ ಕುಟುಂಬ ವರ್ಗದವರೆಲ್ಲ ಹಾಜರಿದ್ದರು. ತಂದೆಯ ಎರಡನೇ ಮದುವೆಯಲ್ಲಿಎದೆಯೆತ್ತರಕ್ಕೆ ಮಗ ಅರ್ಹಾನ್ ಅವತ್ತು ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದ.

ಸದ್ಯ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಬಾಲಿವುಡ್‌ನ ಹಲವು ಸ್ಟಾರ್‌ಗಳು ಅರ್ಬಾಜ್ ಮತ್ತು ಶುರಾಗೆ ಶುಭಾಶಯ ಕೋರುತ್ತಿದ್ದಾರೆ. ಇನ್ನೂ ತನ್ನ ಸಹೋದರ ಮತ್ತೊಮ್ಮೆ ತಂದೆಯಾದ ವಿಚಾರ ಕೇಳಿ ''ಬಿಗ್ ಬಾಸ್'' ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಸಲ್ಮಾನ್ ಖಾನ್ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಕೂಡ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

More from Filmibeat

English summary
Arbaaz Khan becomes a father for the second time after 22 years! He and Sshura Khan welcome a baby girl. Find out all about the joyous family event and Salman Khan's presence.
Read more about: arbaaz khan pregnant baby girl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X