ನೂತನ ಸಂಸದೆ ಕಂಗನಾಗೆ ಕಪಾಳಮೋಕ್ಷ; ಚಂಡೀಗಢ ವಿಮಾನ ನಿಲ್ದಾಣದಲ್ಲಿ ಘಟನೆ

ಬಾಲಿವುಡ್ ನಟಿ ಹಾಗೂ ನೂತನ ಸಂಸದೆ ಕಂಗನಾ ರಾಣಾವತ್‌ಗೆ ಸಿಐಎಸ್‌ಎಫ್ ಭದ್ರತಾ ಅಧಿಕಾರಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗ್ತಿದೆ. ಚಂಡಿಗಢ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಕಂಗನಾ ಗಂಭೀರ ಆರೋಪ ಮಾಡಿದ್ದಾರೆ.

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಂಗನಾ ಇತ್ತೀಚೆಗೆ ಬಿಜೆಪಿ ಸೇರಿದ್ದರು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದ್ದರು. ದೆಹಲಿಗೆ ತೆರಳಲು ಚಂಡೀಗಢ ವಿಮಾನ ನಿಲ್ದಾಣವನ್ನು ತಲುಪಿದೆ. ಈ ವೇಳೆ ಭದ್ರತಾ ತಪಾಸಣೆ ಮುಗಿಸಿ ಬೋರ್ಡಿಂಗ್‌ಗೆ ಹೋಗುತ್ತಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

A CISF constable Kulwinder Kaur reportedly slapped Mandi MP actress Kangana Ranaut

LCT ಕುಲ್ವಿಂದರ್ ಕೌರ್ (CISF ಘಟಕ ಚಂಡೀಗಢ ವಿಮಾನ ನಿಲ್ದಾಣ) ತನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ. ರೈತರ ಆಂದೋಲನವನ್ನು ಅವಮಾನಿದ್ದೀರಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಯುಕೆ 707 ವಿಮಾನದಲ್ಲಿ ಪ್ರಯಾಣಿಸಲು ವಿಮಾನ ನಿಲ್ದಾಣವನ್ನು ತಲುಪಿದಾಗ, ಬೋರ್ಡಿಂಗ್ ಪಾಯಿಂಟ್‌ಗೆ ಹೋಗುವಾಗ ಕುಲ್ವಿಂದರ್ ಕೌರ್ ಎಂಬ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ತನ್ನೊಂದಿಗೆ ವಾಗ್ವಾದಕ್ಕಿಳಿದರು ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಆ ಸಮಯದಲ್ಲಿ ಕುಲ್ವಿಂದರ್ ಕೌರ್ ತನ್ನ ಕೆನ್ನೆಗೆ ಬಾರಿಸಿದರು ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ಚಂಡೀಗಢದಿಂದ ದೆಹಲಿಗೆ ಆಗಮಿಸಿದ ಬಳಿಕ ಕಂಗನಾ ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಕಾನ್‌ಸ್ಟೇಬಲ್ ಕುಲ್ವಿಂದರ್‌ ಕೌರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕರಾಳ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಕಂಗನಾ ನೀಡಿದ್ದ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು. ಪ್ರತಿಭಟನಾನಿರತ ರೈತರನ್ನು ಖಲಿಸ್ತಾನಿ ಎಂದು ಕರೆದಿದ್ದಕ್ಕಾಗಿ ಕುಲ್ವಿಂದರ್ ಕೌರ್ ಅವರು ನೂತನ ಸಂಸದರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇನ್ನು ಈ ವಿಚಾರ ರಾಜಕೀಯರಂಗದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನು ಲೋಕಸಭೆ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸಿದ್ದರು. 74,755 ಮತಗಳ ಅಂತರದಿಂದ ವಿಕ್ರಮಾದಿತ್ಯ ಸಿಂಗ್ ಅವರನ್ನು ಕಂಗನಾ ಸೋಲಿಸಿದ್ದಾರೆ. ಹಿಮಾಚಲ ಪ್ರದೇಶದಿಂದ ಲೋಕಸಭೆಗೆ ಚುನಾಯಿತರಾದ 4ನೇ ಮಹಿಳೆ ಹಾಗೂ ರಾಜಮನೆತನ ಬಿಟ್ಟು ಆಯ್ಕೆಯಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಕಂಗನಾ ರಾಣಾವತ್ ಪಾತ್ರರಾಗಿದ್ದಾರೆ. ಇನ್ನು ಆಕೆ ಸಂಸದೆಯಾಗಿ ಗೆದ್ದಿದ್ದು ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಇಲ್ವಾ? ಎನ್ನುವ ಚರ್ಚೆಯೂ ನಡೆಯುತ್ತಿದೆ.

More from Filmibeat

English summary
KanganaRanaut was slapped by a constable-rank CISF female officer at the chandigarh airport,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X