For Quick Alerts
  ALLOW NOTIFICATIONS  
  For Daily Alerts

  ಅಜಯ್ ಸಿಗದೆ ಇದಿದ್ದರೆ, ಶಾರೂಖ್ ರನ್ನು ಮದುವೆ ಆಗುತ್ತಿದ್ದೀರಾ?: ಫ್ಯಾನ್ಸ್ ಗೆ ಕಾಜಲ್ ಉತ್ತರ

  |
  ಅಭಿಮಾನಿ ಕೇಳಿದ ಪ್ರಶ್ನೆಗೆ ಬಾಲಿವುಡ್ ನಟಿ ಕಾಜೋಲ್ ಕೊಟ್ಟ ಉತ್ತರ ಏನು?

  ಬಾಲಿವುಡ್ ನಟಿ ಕಾಜಲ್ ಸೋಷಿಯಲ್ ಮೀಡಿಯಾ ಸಕ್ರೀಯವಾಗಿರುವ ನಟಿ. ಕೆಲ ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಜಲ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಇದರಲ್ಲಿ ಒಂದು ಪ್ರಶ್ನೆ ಈಗ ಎಲ್ಲರ ಗಮನ ಸೆಳೆದಿದೆ.

  ಅಭಿಮಾನಿಯೊಬ್ಬರು ಕಾಜಲ್ ಗೆ ಶಾರೂಖ್ ಖಾನ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ನೀವು ಅಜಯ್ ದೇವಗನ್ ರನ್ನು ಭೇಟಿ ಮಾಡದೆ ಇದ್ದಿದ್ದರೆ, ಶಾರೂಖ್ ಖಾನ್ ರನ್ನು ಮದುವೆ ಆಗುತ್ತಿದ್ದೀರಾ? ಎಂದು ಕೇಳಿದ್ದಾರೆ. ನೀವು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದೀರಿ ಎನ್ನುವ ಡಿಮ್ಯಾಂಡ್ ಇಟ್ಟಿದ್ದಾರೆ.

  ನಟಿ ಕಾಜಲ್ ಹೊಸ ಪ್ರಯತ್ನಕ್ಕೆ ಬಲ ತುಂಬಿದ ಪತಿನಟಿ ಕಾಜಲ್ ಹೊಸ ಪ್ರಯತ್ನಕ್ಕೆ ಬಲ ತುಂಬಿದ ಪತಿ

  ಅಭಿಮಾನಿಯ ಪ್ರಶ್ನೆಗೆ "Isn't the man supposed to be proposing." ಎಂದು ಕಾಜಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪದದ ಕನ್ನಡ ಅನುವಾದ ಅವರಲ್ಲವೇ ಪ್ರಪೋಸ್ ಮಾಡಬೇಕಾಗಿರುವುದು ಎಂದಾಗಿದೆ. ಆದರೆ, ಕಾಜಲ್ ಈ ಮಾತನ್ನು ಯಾವ ಹಿನ್ನಲೆಯಲ್ಲಿ ಹೇಳಿದ್ದಾರೆ ಎನ್ನುವುದು ತಿಳಿದಿಲ್ಲ.

  ಚಿತ್ರರಂಗದ ಬೆಸ್ಟ್ ರೋಮ್ಯಾಂಟಿಕ್ ಜೋಡಿಗಳಲ್ಲಿ ಶಾರೂಖ್ ಖಾನ್ ಹಾಗೂ ಕಾಜಲ್ ಪ್ರಮುಖರು. ಈ ಇಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡುವುದು ಅಭಿಮಾನಿಗಳಿಗೆ ಬಹಳ ಖುಷಿ ನೀಡುತ್ತದೆ. ಈ ಹಿಂದೆ ಈ ಜೋಡಿ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

  A Fan Asked Kajol Would You Marry SRK If You Didnt Meet Ajay?

  ಆದರೆ, ಕಾಜಲ್ ಮಾತಿನ ಪ್ರಕಾರ ಶಾರೂಖ್ ಖಾನ್ ಹಾಗೂ ತಮ್ಮ ಜೋಡಿ ಆನ್ ಸ್ಕ್ರೀನ್ ನಲ್ಲಿ ಚೆನ್ನಾಗಿದೆ ಇರುತ್ತದೆ ಎಂಬುದಾಗಿದೆ. ದಿಲ್ ವಾಲೇ ದುನಿಯಾ ಲೇ ಜಾಯೆಂಗೆ, ಬಾಜಿಗರ್, ಕುಚ್ ಕುಚ್ ಹೋತಾ ಹೈ, ಮೈ ನೇಮ್ ಇಸ್ ಖಾನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.

  English summary
  A fan asked Kajol 'Would you marry SRK if you didn't meet Ajay?'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X