ಸಲ್ಮಾನ್ ಖಾನ್ ನೋಡಲು 600KM ಸೈಕಲ್ ತುಳಿದ 52 ವರ್ಷದ ವ್ಯಕ್ತಿ

ಸಲ್ಮಾನ್ ಖಾನ್ ರನ್ನು ನೋಡಲು ಅಭಿಮಾನಿಯೊಬ್ಬ ಬರೋಬ್ಬರಿ 600 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದಿದ್ದಾರೆ. ಭೂಪೇನ್ ಲಿಕ್ಸನ್ ಅಸ್ಸಾಂನವರಾಗಿದ್ದು, ಸಲ್ಮಾನ್ ಮೇಲೆ ದೊಡ್ಡ ಅಭಿಮಾನ ಇಟ್ಟುಕೊಂಡಿದ್ದಾರೆ. 52 ವರ್ಷದ ಅವರು 600 ಕಿಲೋ ಮೀಟರ್ ದೂರದಿಂದ ಅವರನ್ನು ನೋಡಲು ಸೈಕಲ್ ನಲ್ಲಿ ಬಂದಿದ್ದಾರೆ.

ಗುವಾಹಟಿಯಲ್ಲಿ ಫಿಲ್ಮ್ ಫೇರ್ 2020 ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿಗೆ ಸಲ್ಮಾನ್ ಖಾನ್ ಬರುವ ಸುದ್ದಿ ಇದೆ. ಹಾಗಾಗಿ ಭೂಪೇನ್ ಲಿಕ್ಸನ್ ಅವರನ್ನು ಹುಡುಕಿಕೊಂಡು ಬಂದಿದ್ದಾರೆ. ಫೆಬ್ರವರಿ 8 ರಂದು ಟಿನ್ ಸುಕೀಯಾದ ಜಾಗುನ್ ಎಂದ ಪ್ರದೇಶದಿಂದ ಅವರ ಸೈಕಲ್ ಪ್ರಯಾಣ ಶುರು ಆಗಿತ್ತು.

A Fan Came From 600km To Meet Salman By Riding Cycle

ಭೂಪೇನ್ ಲಿಕ್ಸನ್ ಸೈಕಲ್ ನಲ್ಲಿಯೇ ಸಲ್ಮಾನ್ ರನ್ನು ನೋಡಲು ಬರಲು ಒಂದು ಕಾರಣ ಇದೆ. ಅವರು ತಮ್ಮ ಸೈಕಲ್ ಸವಾರಿ ಮೂಲಕ ದಾಖಲೆ ಮಾಡಿದ್ದಾರೆ. ಭೂಪೇನ್ 48 ಕಿಲೋ ಮೀಟರ್ ಸೈಕಲ್ ಸವಾರಿಯನ್ನು ಹ್ಯಾಂಡಲ್ ಬಳಸದೆ ಕ್ರಮಿಸಿ ದಾಖಲೆ ಬರೆದಿದ್ದಾರೆ.

ಇಂದು (ಫೆಬ್ರವರಿ 15) ಗುವಾಹಟಿಯಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ 2020 ಕಾರ್ಯಕ್ರಮ ನಡೆಯಲಿದೆ. ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು, ಪ್ರಶಸ್ತಿ ಘೋಷಣೆಯ ಮೇಲೆ ಕುತೂಹಲ ಇದೆ.

More from Filmibeat

English summary
A fan came from 600km to meet Salman Khan by riding cycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X