ಪೂಜಾ ಹೆಗ್ಡೆ ನೋಡಲು 5 ದಿನ ರಸ್ತೆಯಲ್ಲಿ ಮಲಗಿ ಕಾಲಕಳೆದ ಅಭಿಮಾನಿಗೆ ನಟಿ ಮಾಡಿದ್ದೇನು?
Recommended Video
ಸೆಲೆಬ್ರಿಟಿಗಳನ್ನು ನೋಡಬೇಕು, ಮಾತನಾಡಿಸ ಬೇಕು, ಅವರ ಜೊತೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತೆ. ಅದರಲ್ಲೂ ನೆಚ್ಚಿನ ನಟ ನಟಿಯರನ್ನು ಆರಾಧಿಸುವ ಅಭಿಮಾನಿಗಳಿಗಂತು ಕೇಳಬೇಕಾ. ಆರಾಧ್ಯದೈವನ ದರ್ಶನಕ್ಕಾಗಿ ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ.
ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು, ಫೋಟೋ ಹಾಕಿ ಪೂಜೆ ಮಾಡುವುದು ಹೀಗೆ ತರಹೇವಾರಿ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಎಷ್ಟು ಕ್ರೇಜಿ ಅಭಿಮಾನಿಗಳು ಇರ್ತಾರೆ ಅಂದರೆ, ಇತ್ತೀಚಿಗೆ ಬಾಲಿವುಡ್ ನ ಖ್ಯಾತ ನಟಿ ಪೂಜಾ ಹೆಗ್ಡೆ ಅಪ್ಪಟ ಅಭಿಮಾನಿಯೊಬ್ಬ ಭಾಸ್ಕರ್ ರಾವ್, ಪೂಜಾ ನೋಡಲು 5 ದಿನಗಳ ಕಾಲ ರಸ್ತೆಯಲ್ಲಿ ಮಲಗಿ ಕಾಲಕಳೆದಿದ್ದಾರೆ.
ಹೌದು, ಅಭಿಮಾನಿಯೊಬ್ಬ ಪೂಜಾ ಹೆಗ್ಡೆ ನೋಡಲು ಮತ್ತು ಮಾತನಾಡಿಸಲು ಮುಂಬೈನಲ್ಲಿ ಪೂಜಾ ಹೆಗ್ಡೆ ಮನೆ ಮುಂದೆ 5 ದಿನಗಳ ಕಾಲ ಕಾದಿದ್ದಾರೆ. ರಾತ್ರಿ ಅಲ್ಲೆ ಮನೆ ಮುಂದೆ ರಸ್ತೆ ಪಕ್ಕದಲ್ಲಿಯೆ ಮಲಗಿ ದಿನಗಳೆದಿದ್ದಾರೆ. ಕೊನೆಗೂ 5 ದಿನಗಳ ನಂತರ ಪೂಜಾ ಹೆಗ್ಡೆ ಭೇಟಿಯಾಗಿ ಮಾತನಾಡಿದ್ದಾರೆ.

ಪೂಜಾ ಹೆಗ್ಡೆ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಪೂಜಾ ಇತ್ತೀಚಿಗೆ ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಚಿತ್ರರಂಗದಲ್ಲಿ ಮಿಂಚುತ್ತಿರುವ ಪೂಜಾಗೆ ಅಭಿಮಾನಿಗಳ ಬಳಗ ಕೂಡ ಹೆಚ್ಚಾಗಿದೆ.
ಪೂಜಾ ನೋಡಿ ಅಭಿಮಾನಿಗೆ ಮಾತೆ ಬರುತ್ತಿಲ್ಲ. ಅಷ್ಟು ಖುಷಿಯಾಗಿದ್ದಾರೆ. 5 ದಿನಗಳು ಮನೆ ಮುಂದೆ ಕಾದು ಇಲ್ಲೆ ಮಲಗಿದ್ದೆ ಎಂದು ಅಭಿಮಾನಿ ವಿವರಿಸಿದ್ದಾರೆ. ಅಭಿಮಾನಿಯ ಅಭಿಮಾನ ಕಂಡು ಬೆರಗಾದ ಪೂಜಾ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಮೊದಲು ಮನೆಗೆ ಹೋಗಿ. ಹೀಗೆಲ್ಲ ಬಂದು ರಸ್ತೆಯಲ್ಲಿ ಮಲಗಬೇಡಿ. ನಿಮ್ಮನ್ನು ನೋಡಿ ತುಂಬ ಸಂತೋಷವಾಯಿತು ಎಮದು ಹೇಳಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಭಾಸ್ಕರ್ ರಾವ್ ತುಂಬ ಧನ್ಯವಾದಗಳು. ತುಂಬ ದೂರದಿಂದ ನನ್ನನ್ನು ನೋಡಲು ಬಂದು 5 ದಿನಗಳು ಕಾದಿದ್ದೀರಿ. ನನನ್ನ ಅಭಿಮಾನಿಗಳು ಹೀಗೆ ತುಂಬಾ ತೊಂದರೆಗಳನ್ನು ಅನುಭವಿಸುರುವುದನ್ನು ನೋಡಲು ನನಗೆ ತುಂಬ ಬೇಸರವಾಗುತ್ತಿದೆ. ನೀವು ಹೀಗೆ ರಸ್ತೆಯಲ್ಲಿ ಮಲಗುವುದನ್ನು ನೋಡಲು ನನಗೆ ಸಾಧ್ಯವಾಗುವುದಿಲ್ಲ. ನಾನು ನಿಮಗೆ ಭರವಸೆ ನೀಡುತ್ತೇನೆ, ನೀವು ಎಲ್ಲಿದ್ದರೂ ನಿಮ್ಮ ಪ್ರೀತಿಯನ್ನು ನಾನು ಅನುಭವಿಸುತ್ತೇನೆ, ನೀವು ನನ್ನ ಶಕ್ತಿ. ಲವ್ ಯು ಆಲ್" ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳಿಗೆ ಪೂಜಾ ಹೆಗ್ಡೆ ತೋರುವ ಪ್ರೀತಿಗೆ ನೆಟ್ಟಗರು ಫಿದಾ ಆಗಿದ್ದಾರೆ. ನಿಮ್ಮ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ, ಎಲ್ಲರಿಗೂ ನಿಮ್ಮನ್ನು ಭೇಟಿಯಾಗಬೇಕು, ಮಾತನಾಡಿಸಬೇಕು ಎನ್ನುವ ಆಸೆ ಇದೆ ಎಂದು ಹೇಳುತ್ತಿದ್ದಾರೆ.


Click it and Unblock the Notifications











