Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಪ್ ವಿಡಿಯೋ ಕರೆ ಮಾಡಿ ಲೈಂಗಿಕ ಕಿರುಕುಳ: ದೂರು ನೀಡಿದ ನಟಿ
ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮುಂಬೈ ಮೂಲದ ನಟಿಯೊಬ್ಬರು ದೂರು ನೀಡಿದ್ದಾರೆ. ಕಿರುಕುಳ ನೀಡಿದ ಅಪರಿಚಿತ ವ್ಯಕ್ತಿ 20ರ ಹರೆಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಇತ್ತೀಚಿಗೆ ನಟಿಗೆ ಅಪರಿಚಿತ ನಂಬರ್ ನಿಂದ ಅನೇಕ ಬಾರಿ ವಾಟ್ಸಪ್ ವಿಡಿಯೋ ಕಾಲ್ ಬಂದಿದೆ. ಅದನ್ನು ರಿಜೆಕ್ಟ್ ಮಾಡುತ್ತಲೇ ಬಂದಿದ್ದ ನಟಿ, ಬಳಿಕ ವಿಡಿಯೋ ಕಾಲ್ ಆಕಸ್ಮಿಕವಾಗಿ ರಿಸೀವ್ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿದ್ದ ಆ ಯುವಕ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್; ಕಾರಣವೆನು?
ಆ ನಟಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ವಾಟ್ಸಪ್ ನಲ್ಲಿ ಅನೌನ್ ನಂಬರ್ ನಿಂದ ವಿಡಿಯೋ ಕರೆ ಬರುತ್ತವೆ. ನಾನು ರಿಸೀವ್ ಮಾಡುವುದಿಲ್ಲ. ಈ ಬಾರಿ ಆಕಸ್ಮಿಕವಾಗಿ ರಿಸೀವ್ ಮಾಡಿದಾಗ ಯುವಕ ಅಸಭ್ಯವಾಗಿ ನಡೆದುಕೊಂಡ' ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ನಟಿ ದೂರು ನೀಡುವ ಸಲುವಾಗಿ ಪೊಲೀಸ್ ಸ್ಟೇಷನ್ ಗೆ ಹೋದಾಗ ಯುವಕ ಮತ್ತೊಮ್ಮೆ ಅಶ್ಲೀಲ ವಿಡಿಯೋ ಕಳುಹಿಸಿದ್ದಾನೆ. ಆ ವಿಡಿಯೋದಲ್ಲಿ ಮತ್ತೋರ್ವ ಯುವತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ದೃಶ್ಯವಿದೆ ಎನ್ನಲಾಗಿದೆ.
ಈ ಘಟನೆ ಬಳಿಕ ನಟಿ ಆತನ ಮೆಸೇಜ್ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಬಳಿಕ 20 ವರ್ಷದ ಯುವಕ, ವಿದ್ಯಾರ್ಥಿ ಕ್ಷಮೆ ಯಾಚಿಸಿದ್ದು, 'ತೊಂದರೆಯಲ್ಲಿದ್ದೀನಿ, ತಪ್ಪು ಮಾಡಿದೆ, ಮಿಸ್ ಆಗಿ ನಿಮಗೆ ಕಾಲ್ ಮಾಡಿದೆ ಅಂತ ಕೇಳಿಕೊಂಡಿದ್ದಾನೆ ಆ ಯುವಕ' ಎಂದು ನಟಿ ಬಹಿರಂಗ ಪಡಿಸಿದ್ದಾರೆ.