ಸುಹೇಲ್ ಸೇತ್ ಮೇಲೆ ನಾಲ್ಕು ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಆರೋಪ
Metoo ಅಭಿಮಾನ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳ ಮುಖವಾಡವನ್ನು ಬಯಲು ಮಾಡುತ್ತಿದೆ. ಇದೀಗ ಲೇಖಕ, ಸಮಾಜವಾದಿ, ಸೆಲೆಬ್ರಿಟಿ ಸಲಹೆಗಾರ ಎಂದು ಖ್ಯಾತರಾಗಿರುವ ಸುಹೇಲ್ ಸೇತ್ ಮೇಲೆ ದೊಡ್ಡ ಆರೋಪ ಕೇಳಿ ಬಂದಿದೆ.
ಸುಶೀಲ್ ಸೇತ್ ಮೇಲೆ ನಾಲ್ಕು ಮಹಿಳೆಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಚಿತ್ರ ನಿರ್ದೇಶಕಿ ನತಾಶಾ ರಾಥೋಡ್ ತನ್ನ ತನ್ನ ದುಃಖದ ಘಟನೆಯನ್ನು ಹೇಳಿಕೊಂಡಿದ್ದಾರೆ.
''ಒಮ್ಮೆ ದೆಹಲಿಯ ಜನ್ ಪತ್ ಗೆ ಐಸ್‌ಕ್ರೀಮ್ ತಿನ್ನಲು ಹೋಗೋಣ ಎಂದು ಸೇತ್ ನನ್ನನ್ನು ಕರೆದರು, ಆದರೆ, ಅವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಅವರು ನನ್ನ ಮೇಲೆ ಎರಗಿ ಬಂದರು'' ಎಂದು ನತಾಶಾ ಟ್ವಿಟ್ಟರ್ ನಲ್ಲಿ ಘಟನೆಯನ್ನು ವಿವರಿಸಿದ್ದಾರೆ.

''ನನ್ನನ್ನು ಬಲವಂತವಾಗಿ ಚುಂಬಿಸಿ, ನನ್ನ ಕುರ್ತಾದ ಒಳಗೆ ಕೈ ಹಾಕಿ, ಸ್ತನಗಳನ್ನು ಮುಟ್ಟಿದ'' ಎಂದು ಆ ದಿನ ನಡೆದ ಘಟನೆಯ ಬಗ್ಗೆ ನತಾಶಾ ಬರೆದುಕೊಂಡಿದ್ದಾರೆ.
ಇವರ ಜೊತೆಗೆ ಮತ್ತೊಬ್ಬ ಪತ್ರಕರ್ತೆ ಕೂಡ ''ಒಮ್ಮೆ ಗೋವಾಗೆ ಭೇಟಿ ನೀಡಿದಾಗ ಸೇತ್ ನನ್ನ ತುಟಿಗೆ ಮುತ್ತು ಕೊಟ್ಟು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ'' ಎಂದು ಆರೋಪ ಮಾಡಿದ್ದಾರೆ.
31 ವರ್ಷದ ಒಬ್ಬ ಮಹಿಳೆ ಸಹ ಸೇತ್ ನಿಂದ ಆದ ಅನ್ಯಾಯ ಬಗ್ಗೆ ಹೇಳಿಕೊಂಡಿದ್ದಾರೆ. ''ನನ್ನ ಅಪ್ಪನ ಮೂಲಕ ಸೇತ್ ಒಂದು ಪಾರ್ಟಿಯಲ್ಲಿ ಪರಿಚಯ ಆದ. ಮೆಸೇಜ್ ಮಾಡಲು ಶುರು ಮಾಡಿ ಅದು ನಂತರ ಸೆಕ್ಸ್ ವಿಚಾರಕ್ಕೆ ಬಂದಿತು. ಕೊನೆಗೆ ತನ್ನ ರೂಮ್ ಗೆ ಬಾ ಎಂದು ಹೇಳಿದ ನಾನು ಆತನನ್ನು ನಿರಾಕರಿಸಿದೆ ಎಂದು ಸೇತ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications