For Quick Alerts
  ALLOW NOTIFICATIONS  
  For Daily Alerts

  ರಾಹುಲ್ ದ್ರಾವಿಡ್ ಅನ್ನು ಈ ಅವತಾರದಲ್ಲಿ ನೋಡಿರಲು ಸಾಧ್ಯವೇ ಇಲ್ಲ

  |

  ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ರಾಹುಲ್ ದ್ರಾವಿಡ್. ಅವರು ಎಷ್ಟೊಳ್ಳೆ ಬ್ಯಾಟ್ಸ್‌ಮನ್ನೊ ಅದಕ್ಕಿಂತಲೂ ಉತ್ತಮ ವ್ಯಕ್ತಿ. ಸಜ್ಜನ, ಸಂಭಾವಿತ ಕ್ರಿಕೆಟಿಗ ರಾಹುಲ್ ದ್ರಾವಿಡ್.

  ಕ್ರಿಕೆಟ್ ಆಡುವಾಗಲೇ ಆಗಲಿ ಕ್ರೀಡಾಂಗಣದ ಹೊರಗೇ ಆಗಲಿ ಅವರು ಸಮಚಿತ್ತರು. ಸಿಟ್ಟು-ಸೆಡವುಗಳಂತೂ ಅವರಿಂದ ಬಹಳ ದೂರ. ಆದರೆ ದ್ರಾವಿಡ್ ಈಗ ಬದಲಾಗಿದ್ದಾರೆ!

  ಹೌದು, ರಾಹುಲ್ ದ್ರಾವಿಡ್ ಅವರು 'ಹೊಡೆದಾಕಿಬಿಡ್ತೀನಿ, 'ನಾನು ಇಂದಿರಾನಗರ ರೌಡಿ' ಎಂದೆಲ್ಲಾ ಕಿರುಚಾಡುತ್ತಾ, ಬ್ಯಾಟಿನಿಂದ ಕಾರಿನ ಗಾಜುಗಳನ್ನು ಒಡೆದು ಪುಡಿ-ಪುಡಿ ಮಾಡುತ್ತಿದ್ದಾರೆ!

  'ಅಯ್ಯೋ, ಸಂಭಾವ್ಯ ವ್ಯಕ್ತಿ ದ್ರಾವಿಡ್ ಹೀಗಾಗಿಬಿಟ್ಟರಾ?' ಎಂದು ಆಶ್ಚರ್ಯ ಪಡಬೇಡಿ, ದ್ರಾವಿಡ್ ಅವರು ಹೀಗೆ ಸಿಟ್ಟು ಪ್ರದರ್ಶನ ಮಾಡಿರುವುದು ಜಾಹೀರಾತಿಗಾಗಿ.

  ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಜಾಹೀರಾತೊಂದರಲ್ಲಿ ರಾಹುಲ್ ದ್ರಾವಿಡ್ ನಟಿಸಿದ್ದಾರೆ. ಆ ಜಾಹಿರಾತಿನಲ್ಲಿ ರಾಹುಲ್ ದ್ರಾವಿಡ್ ಅತ್ಯಂತ ಕೋಪದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಕುಳಿರುವ ದ್ರಾವಿಡ್ ಪದೇ-ಪದೇ ಹಾರ್ನ್ ಮಾಡುತ್ತಾರೆ. ಪಕ್ಕದ ಕಾರಿನವರ ಮೇಲೆ ಟೀ ಎಸೆಯುತ್ತಾರೆ. ಪಕ್ಕದ ಕಾರಿನವರ ಮಿರರ್ ಅನ್ನು ಬ್ಯಾಟಿನಿಂದ ಹೊಡೆದು ಪುಡಿ ಮಾಡುತ್ತಾರೆ. ತನ್ನತ್ತ ನೋಡಿದ ಹುಡುಗನಿಗೆ, 'ಹೊಡೆದಾಕ್ಬಿಡ್ತೀನಿ' ಎನ್ನುತ್ತಾರೆ. ಬ್ಯಾಟು ಕೈಲಿ ಹಿಡಿದು ಜೋರಾಗಿ, 'ನಾನು ಇಂದಿರಾನಗರ ರೌಡಿ' ಎಂದು ಕಿರುಚುತ್ತಾರೆ. ಆದರೆ ಇದೆಲ್ಲವೂ ಜಾಹೀರಾತಿಗಾಗಿ ಮಾತ್ರ.

  ಕ್ರಿಕೆಟ್ ಆಡಬೇಕಾದರೆ ಎಷ್ಟು ಶ್ರದ್ಧೆಯಿಂದ ಆಡುತ್ತಿದ್ದರೊ ನಟನೆಯಲ್ಲೂ ಹಾಗೆಯೇ ಶ್ರದ್ಧೆಯಿಂದ ಚೆನ್ನಾಗಿಯೇ ನಟಿಸಿದ್ದಾರೆ ದ್ರಾವಿಡ್. ಅವರ ಈ ಹೊಸ ಅವತಾರವನ್ನು ನೋಡಲು ಒಂದು ರೀತಿ ಮಜಾ ಎನಿಸುತ್ತದೆ.

  Roberrt ಚಿತ್ರದ ಅವಧಿಯಿಂದ ಥಿಯೇಟರ್ ಮಾಲೀಕರಿಗೆ ಶುರುವಾಯ್ತು ತಲೆನೋವು | Filmibeat Kannada

  ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಯಾವ ಮಟ್ಟಿಗೆಂದರೆ ನಟ ವಿರಾಟ್ ಕೊಹ್ಲಿ ಸಹ ಈ ಜಾಹೀರಾತನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  English summary
  A funny advertisement featuring Rahul Dravid going viral on social media. Dravid's anger side shown in the ad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X