ಅಕ್ಷಯ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ: ನಟ ಮಾಡಿದ್ದೇನು?
ನಟ ಅಕ್ಷಯ್ ಕುಮಾರ್ ವಿಶ್ವದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ವರ್ಷಕ್ಕೆ ಆರೇಳು ಸಿನಿಮಾ ಮಾಡುವ ಅಕ್ಷಯ್ ಯಾವ ಪಾತ್ರವಾದರೂ ತಮ್ಮದೇ ಶೈಲಿಯಲ್ಲಿ ಲೀಲಾಜಾಲವಾಗಿ ಅಭಿನಯಿಸುತ್ತಾರೆ.
ಯಾವುದೇ ಒಂದು ಥೆರನಾದ ಪಾತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿರುವ ಅಕ್ಷಯ್, ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್ ಎಲ್ಲ ಮಾದರಿಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಟಿಸುತ್ತಿದ್ದಾರೆ.
ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಈ 'ಖಿಲಾಡಿ'ಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್ ಒಬ್ಬ ಮಹಿಳಾ ಅಭಿಮಾನಿಯಿಂದ ತಾವು ಎದುರಿಸಿದ್ದ ತೊಂದರೆಯನ್ನು ನೆನಪಿಸಿಕೊಂಡಿದ್ದಾರೆ.

ಯುವತಿ ಕೈ ಕೊಯ್ದುಕೊಂಡಿದ್ದಳು: ಅಕ್ಷಯ್
'2014 ರ ಸಮಯದಲ್ಲಿ ನನ್ನನ್ನು ಕಾಣಲೆಂದು ಯುವತಿಯೊಬ್ಬಾಕೆ ಲಖನೌನಿಂದ ಲಗೇಜ್ ಸಮೇತ ಬಂದುಬಿಟ್ಟಿದ್ದಳು. ನನ್ನ ಮನೆಯ ಮುಂದೆ ನಿಂತು ತನ್ನ ಮುಂಗೈನ ನರವನ್ನು ಬ್ಲೇಡ್‌ನಿಂದ ಕತ್ತರಿಸಿಕೊಂಡು ಬಿಟ್ಟಳುಜ. ಆಕೆ ನನ್ನನ್ನು ಪ್ರೀತಿಸುತ್ತಿದ್ದಳಂತೆ' ಎಂದಿದ್ದಾರೆ ಅಕ್ಷಯ್ ಕುಮಾರ್.

ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋದೆ: ಅಕ್ಷಯ್
'ಆ ಯುವತಿಯ ವರ್ತನೆ ಕಂಡು ನಾವೆಲ್ಲ ಗಾಬರಿಯಾಗಿಬಿಟ್ಟಿದ್ದೆವು. ಕೂಡಲೇ ನಾನು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆ. ನಂತರ ಆಕೆಯ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ ಅವರಿಗೆ ಬರಲು ಹೇಳಿದೆ. ಪುಣ್ಯಕ್ಕೆ ಆ ಹುಡುಗಿ ಜೀವಕ್ಕೆ ಏನೂ ಸಮಸ್ಯೆ ಆಗಲಿಲ್ಲ' ಎಂದು ನೆನಪು ಮಾಡಿಕೊಂಡಿದ್ದಾರೆ ಅಕ್ಷಯ್.

ನನ್ನನ್ನು ಭೇಟಿ ಮಾಡಲು ಬರುತ್ತಾಳೆ: ಅಕ್ಷಯ್
'ಆ ಹುಡುಗಿಗೆ ನನ್ನ ಮ್ಯಾನೇಜರ್‌ನ ಮೊಬೈಲ್ ನಂಬರ್ ನೀಡಿ ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ನನ್ನನ್ನು ಭೇಟಿಯಾಗಲು ಬರಬಹುದು ಎಂದು ಹೇಳಿದೆ. ಆಗಿನಿಂದಲೂ ಆ ಯುವತಿ ಆಗಾಗ್ಗೆ ಮನೆಗೆ ಬಂದು ಭೇಟಿ ಮಾಡಿ ಹೋಗುತ್ತಾಳೆ. ಇಂಥಹಾ ಅಭಿಮಾನಿಗಳನ್ನು ಪ್ರೀತಿಯಿಂದ ಮಾತ್ರವೇ ಹ್ಯಾಂಡಲ್ ಮಾಡಲು ಸಾಧ್ಯ' ಎಂದಿದ್ದಾರೆ ಅಕ್ಷಯ್ ಕುಮಾರ್.

ಕಾಮಿಡಿ ಪಾತ್ರ ಎಂದರೆ ಹೆದರುತ್ತಿದ್ದೆ: ಅಕ್ಷಯ್
ಅದೇ ಸಂದರ್ಶನದಲ್ಲಿ, ನನ್ನ ಆಕ್ಷನ್ ಸಿನಿಮಾಗಳಿಗಿಂತಲೂ ಕಾಮಿಡಿ ಸಿನಿಮಾಗಳಲ್ಲಿಯೇ ಜನರು ಹೆಚ್ಚು ಇಷ್ಟಪಡುತ್ತಾರೆ. ನಿಜವೆಂದರೆ ನನಗೆ ಕಾಮಿಡಿ ಪಾತ್ರಗಳನ್ನು ಮಾಡಲು ಬಹಳ ಭಯವಿತ್ತು. ಆದರೆ ಪ್ರಿಯದರ್ಶನ್ ಹಾಗೂ ರಾಜ್‌ಕುಮಾರ್ ಸಂತೋಶಿ ಅವರುಗಳು ನನ್ನಲ್ಲಿದ್ದ ಕಾಮಿಕ್ ಶಕ್ತಿಯನ್ನು ನನಗೆ ಪರಿಚಯಿಸಿದರು ಎಂದಿದ್ದಾರೆ ಅಕ್ಷಯ್.
Recommended Video

ಹಲವು ಸಿನಿಮಾಗಳು ಅಕ್ಷಯ್ ಕೈಯಲ್ಲಿವೆ
ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಂ', 'ಸೂರ್ಯವಂಶಿ 3' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈಗ 'ರಾಮ್ ಸೇತು' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಂತರ 'ಹೇರಾ ಪೇರಿ 3', 'ಅತರಂಗಿ ರೇ', 'ಬಚ್ಚನ್ ಪಾಂಡೆ', 'ರೌಡಿ ರಾಥೋಡ್ 2', 'ಮಹಿಳಾ ಮಂಡಲಿ', 'ರಕ್ಷಾ ಬಂಧನ್', 'ಪೃಥ್ವಿರಾಜ್' ಸಿನಿಮಾಗಳು ಅಕ್ಷಯ್ ಕೈಯಲ್ಲಿವೆ.


Click it and Unblock the Notifications