Viral Video - ಪ್ಲೀಸ್ ಕೊಡ್ತೀರಾ ಎಂದ ಬಾಲಕ, ನಿನ್ನ ಅಮ್ಮ ಹೊಡೆಯುತ್ತಾರೆ ಎಂದ ಪೂನಂ ಪಾಂಡೆ...!
ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ. ಇಂಥ ಪೂನಂ ಪಾಂಡೆಗೆ ಚಿಕ್ಕ ಬಾಲಕ ಇನ್ಸ್ಟಾಗ್ರಾಂ ಐಡಿಯನ್ನ ಕೇಳಿದ್ದಾನೆ. ಕೊಡ್ಲೇಬೇಕು ಎಂದು ಸತಾಯಿಸಿದ್ದಾನೆ.
ಹೌದು, ಪಬ್ಲಿಕ್ ಪ್ಲೇಸ್‌ಗಳಿಗೆ ಬಂದು ಪಬ್ಲಿಸಿಟಿಯನ್ನ ಪಡೆಯುವುದು ಹೇಗೆ ಎಂಬ ಪಾಠವನ್ನ ಬಾಲಿವುಡ್‌ಗೆ ಮೊದಲಿಂದ ಮಾಡ್ತಾ ಬಂದ ಪಿ.ಆರ್ ಏಜೆನ್ಸಿಗಳು, ಮೊನ್ನೆ.. ಪೂನಂ ಪಾಂಡೆಗೆ ಚಿಣ್ಣರು ಕ್ರಿಕೆಟ್ ಆಡುವ ಮೈದಾನಕ್ಕೆ ತೆರಳುವ ಸಲಹೆಯನ್ನ ನೀಡಿದ್ದವು. ಕ್ಯಾಮರಾಗಳನ್ನ ಕೂಡ ನಿಯೋಜಿಸಿದ್ದವು. ಈ ಸಲಹೆಯನ್ನ ಗಂಭೀರವಾಗಿ ಪರಿಗಣಿಸಿ, ಕ್ರಿಕೆಟ್ ಆಡುವ ಮಕ್ಕಳನ್ನ ಭೇಟಿಯಾಗಲು ಪೂನಂ ಪಾಂಡೆ ಹೋಗಿದ್ದರು.
ಸಹಜವಾಗಿ ಪೂನಂ ಪಾಂಡೆ ಬಂದ ನಂತರ ಅಲ್ಲಿದ್ದ ಪೋರರು, ಕ್ರಿಕೆಟ್ ಮರೆತು.. ಪೂನಂ ಪಾಂಡೆ ಬಳಿ ಬಂದು ಸುತ್ತುವರೆದರು. ಮಾತನಾಡಲು ಶುರು ಮಾಡಿದರು. ಇದೇ ಸಮಯದಲ್ಲಿ ಅಲ್ಲಿ ಬಂದ ಬಾಲಕನೊಬ್ಬ ಪೂನಂ ಪಾಂಡೆಗೆ ನಿಮ್ಮ ಇನ್‌ಸ್ಟಾಗ್ರಾಂ ಐಡಿ ಕೊಡಿ ಎಂದು ಕೇಳಿದ್ದಾನೆ.
ಇದಕ್ಕೆ..ನಗುಮೊಗದೊಂದಿಗೆ ನನ್ನ ಇನ್‌ಸ್ಟಾಗ್ರಾಂ ಐಡಿ ನಿನಗೆ ಯಾಕೆ ಬೇಕು, ಅದನ್ನ ತಗೊಂಡು ನೀನೇನು ಮಾಡ್ತೀಯಾ ಎಂದು ಮರು ಪ್ರಶ್ನೆಯನ್ನ ಹಾಕಿದ್ದಾರೆ. ನಿನಗೆ ನಿಮ್ಮ ಅಮ್ಮನನ್ನ ಕಂಡರೆ ಭಯ ಇಲ್ಲವಾ..? ನಿಮ್ಮ ತಾಯಿಗೆ ಈ ವಿಚಾರ ಗೊತ್ತಾದರೆ ಹೊಡೆಯುತ್ತಾರೆ ಎಂದಿದ್ದಾರೆ.

ಆ ನಂತರ ನೆರೆದ ಸಭಿಕರನ್ನ ಉದ್ದೇಶಿಸಿ ಕಾಲ ಕೆಟ್ಟೋಯ್ತು, ಚಿಕ್ಕ ಹುಡುಗ ನನ್ನ ಇನ್‌ಸ್ಟಾಗ್ರಾಂ ಐಡಿ ಕೇಳ್ತಿದ್ದಾನೆ, ನಾನು ನಿನಗೆ ಇನ್‌ಸ್ಟಾಗ್ರಾಂ ನಲ್ಲಿ ಸಂದೇಶವನ್ನ ಕಳಿಸುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಅಂದುಕೊಂತೆ ಪೂನಂ ಪಾಂಡೆಯ ಈ ಪಬ್ಲಿಸಿಟಿ ಸ್ಟಂಟ್ ಎಲ್ಲರ ಚಿತ್ತವನ್ನ ಕದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕೆಲವರು ಆ ಬಾಲಕನಿಗೆ ನೀವು ಯಾರು ಅನ್ನುವುದೇ ಗೊತ್ತಿಲ್ಲ ನೀವೇ ನಿಮ್ಮ ಹೆಸರನ್ನ ಹೇಳಿ ಅಲ್ಲಿ ಪ್ರಚಾರ ಪಡೆದಿದ್ದೀರಾ ಎಂದರೆ, ಇನ್ನೂ ಕೆಲವರು ಸಮಾಜದ ಪಾಲಿಗೆ ಸತ್ತು ಹೋದ ಪೂನಂ ಪಾಂಡೆ ಮೈದಾನದಲ್ಲಿ ಏನ್ಮಾಡ್ತಿದ್ದಾಳೆ ಅನ್ನುವ ಪ್ರಶ್ನೆಯನ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಾಮಾಜಿಕ ಜಾಲತಾಣ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಅನ್ನುವುದಕ್ಕೆ ಈ ವಿಡಿಯೋ ಜ್ವಲಂತ ಸಾಕ್ಷಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ


Click it and Unblock the Notifications











