70 ವರ್ಷ ಕಲಾಸೇವೆ, ಇಹಲೋಕ ತ್ಯಜಿಸಿದ 98 ವರ್ಷದ ಪ್ರಖ್ಯಾತ ನಟಿ ; ಕಂಬನಿ ಮಿಡಿದ ಚಿತ್ರರಂಗ

ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..

ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ. ಹೀಗಿರುವಾಗ ಇಂದು (ನವೆಂಬರ್ 14) ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಭಾರತೀಯ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಕಾಮಿನಿ ಕೌಶಾಲ್ ತಮ್ಮ 98ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.

A Light Goes Out Veteran Star Kamini Kaushal Icon of Hindi Cinema Dies at 98

1946ರಲ್ಲಿ ''ನೀಚಾ ಸಾಗರ್'' ಚಿತ್ರದ ಮೂಲಕ ಕಾಮಿನಿ ಕೌಶಾಲ್ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು. ವಿಶೇಷ ಅಂದರೆ ಆ ಕಾಲದಲ್ಲಿಯೇ ಜಗದ್ವಿಖ್ಯಾತ ''ಕೇನ್ಸ್ ಚಲನಚಿತ್ರೋತ್ಸವ''ದಲ್ಲಿ ಪಾಮ್ ಡಿ'ಓರ್ ಪ್ರಶಸ್ತಿಯನ್ನು ಈ ಚಿತ್ರ ಪಡೆದಿತ್ತು.

ಆ ನಂತರ ''ದೋ ಭಾಯ್''.. ''ಶಹೀದ್''.. ''ನದಿಯಾ ಕೆ ಪಾರ್''.. ''ಜಿದ್ದಿ''.. ''ಶಬ್ನಮ್''.. ''ನಮೂನಾ''.. ''ರಾಖಿ''.. ''ಪರಾಸ್''.. ''ಜಂಝರ್''.. ''ಆಬ್ರೂ''.. ''ಬಡೇ ಸರ್ಕಾರ್''.. ''ಜೈಲರ್''.. ''ಬಿಕರೇ ಮೋತಿ''.. ''ರಾಜಾ ರತನ್''.. ''ರಾಧಾ ಕೃಷ್ಣ''.. ''ನೈಟ್ ಕ್ಲಬ್''.. ಹೀಗೆ ಹತ್ತು ಹಲವು ಚಿತ್ರಗಳಲ್ಲಿ ಬರೋಬ್ಬರಿ ಎರಡು ದಶಕ ನಾಯಕಿಯಾಗಿ ಮಿಂಚಿದ ಕಾಮಿನಿ ಕೌಶಾಲ್ ತಮ್ಮ ಅಭಿನಯದಿಂದ ಜನ ಮನ ಗೆದ್ದರು. ಅಭಿಮಾನಿ ಬಳಗವನ್ನು ಕೂಡ ಸಂಪಾದಿಸಿದರು.

ಆ ನಂತರ 1963ರಲ್ಲಿ ಪೋಷಕ ಪಾತ್ರಗಳತ್ತ ಹೊರಳಿದ ಕಾಮಿನಿ ಕೌಶಾಲ್, ''ದೋ ರಾಸ್ತೆ''.. ''ಪ್ರೇಮ್‌ನಗರ್''.. ''ಮಹಾ ಚೋರ್''.. ಹೀಗೆ ಮೂರು ಚಿತ್ರಗಳಲ್ಲಿ ಭಾರತದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರ ಜೊತೆ ಮೂರು ಚಿತ್ರಗಳಲ್ಲಿ ಅಭಿನಯಿಸಿದರು. ಸಂಜೀವ್ ಕುಮಾರ್ ಜೊತೆ ಒಂದು ಚಿತ್ರವನ್ನು ಮಾಡಿದ್ದ ಕಾಮಿನಿ ಕೌಶಾಲ್ 1967ರಿಂದ 1989ರವರೆಗೆ ಬಾಲಿವುಡ್‌ನ ಮತ್ತೊಬ್ಬ ದಿಗ್ಗಜ ಮನೋಜ್ ಕುಮಾರ್ ಅವರ ಜೊತೆ 8 ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.

1990ರ ನಂತರ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದ ಕಾಮಿನಿ, ಆ ನಂತರ 2000ನೇ ಇಸ್ವಿಯಲ್ಲಿ '' ಹರ್ ದಿಲ್‌ ಜೋ ಪ್ಯಾರ್ ಕರೇಗಾ'' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು. ಆ ನಂತರ ''ಚೋರಿ ಚೋರಿ''.. ''ಲಾಗಾ ಚುನರಿ ಮೇ ದಾಗ್''.. ''ಚೆನ್ನೈ ಎಕ್ಸ್‌ಪ್ರೆಸ್'' ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ''ಕಬೀರ್ ಸಿಂಗ್'' ಚಿತ್ರದಲ್ಲಿ ಕೂಡ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದರು. 2022ರಲ್ಲಿ ತೆರೆಗೆ ಬಂದಿದ್ದ ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ''ಲಾಲ್ ಸಿಂಗ್ ಛಡ್ಡಾ'' ಇವರು ಅಭಿನಯಿಸಿದ ಕೊನೆಯ ಚಿತ್ರ. 2015 ರಲ್ಲಿ ಕಾಮಿನಿ ಕೌಶಾಲ್ ಅವರಿಗೆ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

A Light Goes Out Veteran Star Kamini Kaushal Icon of Hindi Cinema Dies at 98

ಕಾಮಿನಿ ಕೌಶಾಲ್ ಅವರ ನಿಧನಕ್ಕೆ ಬಾಲಿವುಡ್ ಕಂಬನಿಯನ್ನು ಮಿಡಿದಿದ್ದು, ಕರೀನಾ ಕಪೂರ್ ಖಾನ್, ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ, ಗುಲ್ಷನ್ ದೇವಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಕಾಮಿನಿ ಅವರ ಕುಟುಂಬಕ್ಕೆ ಈ ದುಖವನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

ತಮ್ಮ ಪುತ್ರರಾದ ಶ್ರವಣ್, ವಿದುರ್ ಮತ್ತು ರಾಹುಲ್ ಸೂದ್ ಅವರನ್ನು ಕಾಮಿನಿ ಅಗಲಿದ್ದಾರೆ.
ಬಾಂಬೆ ಪೋರ್ಟ್ ಟ್ರಸ್ಟ್‌ನಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದ ಬ್ರಹ್ಮ ಎಸ್. ಸೂದ್ ಅವರನ್ನು 1948ರಲ್ಲಿ ಕಾಮಿನಿ ಮದುವೆಯಾಗಿದ್ದರು. ಕಾಮಿನಿ ಅವರಿಗಿಂತ ಮೊದಲು ಬ್ರಹ್ಮ ಸೂದ್ ಇವರ ಸಹೋದರಿಯನ್ನು ಮದುವೆಯಾಗಿದ್ದರು. ಆದರೆ ಇವರ ಸಹೋದರಿ ಅಕಾಲಿಕ ನಿಧನಕ್ಕೀಡಾದರು. ಈ ಹಿನ್ನೆಲೆ ತಮ್ಮ ಸಹೋದರಿಯ ಇಬ್ಬರು ಮಕ್ಕಳ ಹಿತದೃಷ್ಟಿ, ಅವರ ಭವಿಷ್ಯದ ಹಿತದೃಷ್ಟಿಯಿಂದ ಸಹೋದರಿಯ ಪತಿಯಾದ ಬ್ರಹ್ಮ ಎಸ್. ಸೂದ್ ಅವರನ್ನು ಕಾಮಿನಿ ಮದುವೆಯಾಗಿದ್ದರು.

More from Filmibeat

English summary
An icon of Hindi cinema, legendary actress Kamini Kaushal, has died at 98. Read about her immense contribution to film history, see the heartfelt messages from Bollywood stars, and honor the life of a true cinematic pioneer.
Read more about: death filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X