42ರ ಹರೆಯದಲ್ಲಿ ತಾಯ್ತನದ ಸಂಭ್ರಮ ; ಮದುವೆಯಾದ 4 ವರ್ಷದ ನಂತರ ಗುಡ್ ನ್ಯೂಸ್ ನೀಡಿದ ಲವ್ಲಿ ಸ್ಟಾರ್ ಪ್ರೇಮ್ ಹೀರೋಯಿನ್‌

ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ.

ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್‌ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ. ಆ ಪೈಕಿ ಕರೀಷ್ಮಾ ತನ್ನಾ ಕೂಡ ಒಬ್ಬರು.

A Little Miracle Karishma Tanna and Varun Bangera Expecting First Baby in August 2026

ಹೌದು, ಕರೀಷ್ಮಾ ತನ್ನಾ.. ಪ್ರಖ್ಯಾತ ಧಾರಾವಾಹಿ ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿಯ ಮೂಲಕ ಬೆಳಕಿಗೆ ಬಂದ ಚೆಲುವೆ. ಕಿರುತೆರೆಯಲ್ಲಿ ಸದ್ದು ಮಾಡುತ್ತಲೇ ''ದೋಸ್ತಿ -ಫ್ರೆಂಡ್ಸ್ ಫಾರೆವರ್'' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಕರೀಷ್ಮಾ 2011ರಲ್ಲಿ ನೆನಪಿರಲಿ ಪ್ರೇಮ್ ಅಭಿನಯದ ''ಐ ಆಮ್‌ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಇವರ ವೃತ್ತಿ ಬದುಕಿನ ಎರಡನೇ ಚಿತ್ರ ಇದು.

ಇದಾದ ನಂತರ ''ಗ್ಯ್ರಾಂಡ್ ಮಸ್ತಿ''.. ''ಸಂಜು''.. ''ಸೂರಜ್ ಪೇ ಮಂಗಲ್'' ಭಾರೀ ಚಿತ್ರಗಳಲ್ಲಿ ಕರೀಷ್ಮಾ ಕಾಣಿಸಿಕೊಂಡರಾದರೂ ಹೇಳಿಕೊಳ್ಳುವಂತಹ ಹೆಸರು ಇವರಿಗೆ ಯಾವ ಚಿತ್ರದಲ್ಲಿಯೂ ಸಿಗಲಿಲ್ಲ. ಇವರನ್ನು ಗ್ಲ್ಯಾಮರ್ ಗೊಂಬೆಯಂತೆ ಪರಿಗಣಿಸಿತ್ತು ಬಾಲಿವುಡ್. ಇವರಲ್ಲಿನ ಅಭಿನಯ ಸಾಮರ್ಥ್ಯ ಹೊರ ಬಂದಿದ್ದು ''ಸ್ಕೂಪ್'' ಮತ್ತು ''ಹುಶ್ ಹುಶ್'' ಅಂತಹ ವೆಬ್ ಸರಣಿಗಳಲ್ಲಿ ಮಾತ್ರ.

ಹೀಗಾಗಿ ಇದರ ನಡುವೆ ಸಮಯ ಮತ್ತು ಅವಕಾಶ ಸಿಕ್ಕಾಗೆಲ್ಲಾ ಕಿರುತೆರೆಗೆ ಮರಳುತ್ತಿದ್ದ ಕರೀಷ್ಮಾ ತನ್ನಾ ಹಿಂದಿಯ ''ಬಿಗ್ ಬಾಸ್'' ಸೀಸನ್ 8ರಲ್ಲಿ ಸ್ಫರ್ಧಿಯಾಗಿ ಕಣಕ್ಕಿಳಿದರು. ''ಖತ್ರೋನ್ ಕೆ ಖಿಲಾಡಿ'' ಸೀಸನ್ 10ರಲ್ಲಿ ಕೂಡ ಕಾಣಿಸಿಕೊಂಡರು. ''ಕಹಿಂ ತೋ ಮಿಲೇಂಗೆ''.. ''ಕೋಯಿ ದಿಲ್ ಮೇ ಹೈ''..''ಬಾ ಬಹು ಔರ್ ಬೇಬಿ''..''ಕಯಾಮತ್ ಕಿ ರಾತ್''.. ಇವರ ಕೆಲ ಖ್ಯಾತ ಧಾರಾವಾಹಿಗಳು.

ಇಂಥಾ ಕರೀಷ್ಮಾ ತನ್ನಾ ಈಗ ಮದುವೆಯಾದ ನಾಲ್ಕು ವರ್ಷಗಳ ನಂತರ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ಧಾರೆ. ತಮ್ಮ ಪತಿ ವರುಣ್ ಬಂಗೇರಾ ಅವರೊಂದಿಗೆ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಪುಟ್ಟ ಪವಾಡ, ನಮ್ಮ ಜೀವನದ ಶ್ರೇಷ್ಠ ಉಡುಗೊರೆ - ಆಗಸ್ಟ್ 2026. ಎಂದು ಬರೆದುಕೊಂಡಿದ್ಧಾರೆ.

A Little Miracle Karishma Tanna and Varun Bangera Expecting First Baby in August 2026

ಸದ್ಯ ಕರೀಷ್ಮಾ ತನ್ನಾ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ಧಾರೆ. ಖುಷಿ ಕಪೂರ್, ಭೂಮಿ ಪೆಡ್ನೇಕರ್, ದಿಯಾ ಮಿರ್ಜಾ, ಜಾಸ್ಮಿನ್ ಭಾಸಿನ್, ವಿನೀತ್ ಕುಮಾರ್, ಅನಿತಾ ಹಸ್ಸನಂದನಿ, ಕೃತಿಕಾ ಕಮ್ರಾ, ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಕರೀಷ್ಮಾ ತನ್ನಾ ಅವರನ್ನು ಪರಿಚಯಿಸಿದ ನಿರ್ಮಾಪಕಿ ಏಕ್ತಾ ಕಪೂರ್ ಈ ರಹಸ್ಯವನ್ನು ನಾನು ಬಹಳ ದಿನಗಳಿಂದ ಕಾಪಾಡಿಕೊಂಡು ಬಂದಿದ್ದೆ ಎಂದು ಕಾಮೆಂಟ್ ಮಾಡಿದ್ಧಾರೆ.

ಅಂದ್ಹಾಗೇ ಕರೀಷ್ಮಾ ತನ್ನಾ ಅವರಿಗೆ ಈಗ 42ರ ಹರೆಯ. ಇನ್ನು ಇವರ ಪತಿ ವರುಣ್ ಬಂಗೇರಾ ಗ್ಲ್ಯಾಮರ್ ಪ್ರಪಂಚದಿಂದ ತುಂಬಾ ದೂರ ಇರುವ ವ್ಯಕ್ತಿ. ಮುಂಬೈ ಮೂಲದ ಯಶಸ್ವಿ ಉದ್ಯಮಿ. 'VB Corp' ಎಂಬ ರಿಯಲ್ ಎಸ್ಟೇಟ್ ಕಂಪನಿಯ ಡೈರೆಕ್ಟರ್. 2021ರಲ್ಲಿ ಕಾಮನ್ ಫ್ರೆಂಡ್ ಮೂಲಕ ಇಬ್ಬರು ಪರಿಚಯವಾಗಿದ್ದರು. ಆ ನಂತರ ಪ್ರೀತಿಯಲ್ಲಿ ಬಿದ್ದರು. ಅದೇ ವರ್ಷ ಅಂದರೆ 2021ರ ನವೆಂಬರ್ ನಲ್ಲಿಯೇ ಸದ್ದಿಲ್ಲದೇ ವರುಣ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕರೀಷ್ಮಾ ತನ್ನಾ ಫೆಬ್ರವರಿ 5, 2022 ರಂದು ಅದ್ಧೂರಿಯಾಗಿ ಮುಂಬೈನಲ್ಲಿ ಮದುವೆಯಾದರು. ಈಗ ಇಬ್ಬರು ಮದುವೆಯಾದ ನಾಲ್ಕು ವರ್ಷದ ನಂತರ ಪೋಷಕರಾಗಿ ಬಡ್ತಿ ಪಡೆಯುತ್ತಿದ್ಧಾರೆ.

More from Filmibeat

English summary
"Our little miracle is on the way!" Karishma Tanna shares a heartwarming pregnancy announcement with husband Varun Bangera. Get all the details on their new journey.
Read more about: pregnancy pregnant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X