2014 ರಲ್ಲೇ ಆಗಿತ್ತಂತೆ ಪ್ರಿಯಾಂಕಾ ಚೋಪ್ರಾಗೆ ಮದುವೆ! ಹಳೆ ಗಂಡನ ಹಳೆ ನೆನಪು!

ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತಿರುವುದೇ. 2018 ರಂದು ವಿವಾಹವಾದ ಈ ಜೋಡಿ ಸಂತೋಶದಿಂದ ದಿನಗಳನ್ನು ಕಳೆಯುತ್ತಿದ್ದಾರೆ.

ಆದರೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಎದ್ದು ಬಂದು ನಾನು ಪ್ರಿಯಾಂಕಾ ಚೋಪ್ರಾಳನ್ನು 2014 ರಲ್ಲಿಯೇ ಮದುವೆಯಾಗಿದ್ದೆ ಎಂದು ಹೇಳಿದ್ದಾನೆ.

ಹೌದು, ತಾನು ನಟಿ ಪ್ರಿಯಾಂಕಾ ಚೋಪ್ರಾಳನ್ನು 2014 ರಲ್ಲಿಯೇ ವಿವಾಹವಾಗಿದ್ದೆ ಎಂದಿರುವ ಆತ ಎಲ್ಲಿ ವಿವಾಹವಾಗಿದ್ದು, ವಿವಾಹ ನಡೆದಿದ್ದು ಹೇಗೆ ಎಂಬುದನ್ನೆಲ್ಲಾ ಹೇಳಿದ್ದಾನೆ.

ಹಾಗಿದ್ದರೆ ಪ್ರಿಯಾಂಕಾ ಚೋಪ್ರಾ-ನಿಖ್ ಜೋನಸ್ ಜೊತೆ ಆಗಿದ್ದು ಎರಡನೇ ವಿವಾಹವೇ ಎಂಬ ಅನುಮಾನ ಈಗ ಪ್ರಾರಂಭವಾಗಿದೆ. ಏನಿದು ಗೊಂದಲ? ಪೂರ್ತಿ ಸುದ್ದಿ ಓದಿ...

ಬ್ರ್ಯಾಂಡನ್ ಶಸ್ಟರ್ ಎಂಬ ವ್ಯಕ್ತಿಯಿಂದ ಪೋಸ್ಟ್

ಬ್ರ್ಯಾಂಡನ್ ಶಸ್ಟರ್ ಎಂಬ ವ್ಯಕ್ತಿಯಿಂದ ಪೋಸ್ಟ್

ಬ್ರ್ಯಾಂಡನ್ ಶಸ್ಟರ್ ಎಂಬ ವ್ಯಕ್ತಿ, 'ತಾನು ಪ್ರಿಯಾಂಕಾ ಚೋಪ್ರಾಳೊಂದಿಗೆ 2014 ರಲ್ಲಿ ವಿವಾಹವಾದೆ. ಟಂಪಾ ಎಂಬಲ್ಲಿ ನಮ್ಮ ವಿವಾಹವಾಯಿತು, ಪ್ರಿಯಾಂಕಾ ಚೋಪ್ರ ಮದುವೆ ವೇದಿಕೆಗೆ ಬರುವ ಹಾದಿಯಲ್ಲಿ ನಾನು ಹೂವು ಹಾಕಿದ್ದೆ. ಭಾರತೀಯ ಮಾಧ್ಯಮಗಳು ಎಡಬಿಡದೆ ನನ್ನ ಸಂದರ್ಶನಗಳನ್ನು ಪ್ರಕಟಿಸುತ್ತಿದ್ದವು ಎಂದೆಲ್ಲಾ ಆತ ಬರೆದಿದ್ದಾನೆ.

ಆತ ಬರೆದಿರುವುದು ನಿಜವಲ್ಲ

ಆತ ಬರೆದಿರುವುದು ನಿಜವಲ್ಲ

ಆದರೆ ಆತ ಬರೆದಿರುವುದು ನಿಜವಲ್ಲ, ಕ್ರಿಸ್ಸಿ ಟೈಗಾನ್ ಎಂಬ ಸೆಲೆಬ್ರಿಟಿ ಟ್ವಿಟ್ಟರ್‌ ನಲ್ಲಿ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಆತ ಇದನ್ನೆಲ್ಲಾ ಬರೆದಿಲ್ಲ. 'ನೀವು ಯಾವಾಗಲಾದರೂ ಕೇವಲ ಒಂದು ನಿಮಿಷಕ್ಕಾದರೂ ಫೇಮಸ್ ಆಗಿದ್ದೀರಾ?' ಎಂಬ ಪ್ರಶ್ನೆಗೆ ಆತ ಮೇಲಿನಂತೆ ಉತ್ತರ ನೀಡಿದ್ದ.

ಕೆಲವೇ ನಿಮಿಷಗಳಲ್ಲಿ ಫೇಮಸ್ ಆಗಿಬಿಟ್ಟ ಬ್ರ್ಯಾಂಡನ್

ಕೆಲವೇ ನಿಮಿಷಗಳಲ್ಲಿ ಫೇಮಸ್ ಆಗಿಬಿಟ್ಟ ಬ್ರ್ಯಾಂಡನ್

ಬ್ರ್ಯಾಂಡನ್ ಶಸ್ಟರ್ ನೀಡಿದ ಉತ್ತರ ನಿಜವಾಗಿಯೂ ಆತನನ್ನು ಕೆಲವೇ ನಿಮಿಷದಲ್ಲಿ ಫೇಮಸ್ ಮಾಡಿಬಿಟ್ಟಿತು. ಸಾವಿರಾರು, ಲೈಕುಗಳು, ಕಮೆಂಟ್‌ಗಳು ಆತನ ಪೋಸ್ಟ್‌ಗೆ ಬೀಳಲಾರಂಭಿಸಿತು. ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳಂತೂ ಆತನ ಪೋಸ್ಟ್‌ ಗೆ ಮುಗಿಬಿದ್ದು ಕಮೆಂಟ್ ಹಾಕಿದರು.

ಸ್ಪಷ್ಟನೆಯ ಟ್ವೀಟ್ ಹಾಕಿದ ಬ್ರ್ಯಾಂಡನ್

ಸ್ಪಷ್ಟನೆಯ ಟ್ವೀಟ್ ಹಾಕಿದ ಬ್ರ್ಯಾಂಡನ್

ತಮ್ಮ ಪೋಸ್ಟ್ ವೈರಲ್ ಆಗಿದ್ದು ನೋಡಿ ಕೊನೆಗೆ ಮತ್ತೊಂದು ಸ್ಪಷ್ಟೀಕರಣ ಪೋಸ್ಟ್ ಹಾಕಿದ ಬ್ರ್ಯಾಂಡನ್ ಶಸ್ಟರ್, 'ಅಯ್ಯೋ ನನ್ನ ಪ್ರತಿಕ್ರಿಯೆ ಇಷ್ಟೋಂದು ವೈರಲ್ ಆಗುತ್ತದೆ ಎಂದುಕೊಂಡಿರಲಿಲ್ಲ. ನನಗಂತೂ ನಂಬಲಾಗುತ್ತಿಲ್ಲ. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ನೀವು ಆರಾಮವಾಗಿದ್ದೀರೆಂದು ನಂಬುತ್ತೇನೆ' ಎಂದು ಬರೆದಿದ್ದಾರೆ.

More from Filmibeat

English summary
A Man said in social media that he and Priyanka Chopra married in year 2014. Post got viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X