For Quick Alerts
  ALLOW NOTIFICATIONS  
  For Daily Alerts

  'ಪ್ರಿಯಾಂಕಾ ಚೋಪ್ರಾರಿಂದ ನನಗೆ ಯಾವುದೇ ಸಹಾಯ ಆಗಿಲ್ಲ': ಸಹೋದರಿ ಮೀರಾ

  |

  'ವೃತ್ತಿಜೀವನದಲ್ಲಿ ನನ್ನ ಸಹೋದರಿ ಪ್ರಿಯಾಂಕಾ ಚೋಪ್ರಾ ನನಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಿಲ್ಲ, ಅವಳಿಂದ ನನಗೆ ಯಾವುದೇ ಅವಕಾಶಗಳು ಸಿಕ್ಕಿಲ್ಲ' ಎಂದು ನಟಿ ಮೀರಾ ಚೋಪ್ರಾ ಹೇಳಿಕೊಂಡಿದ್ದಾರೆ.

  2005ರ ತಮಿಳಿನ 'ಅನ್ಬೆ ಆರುಯಿರ್' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಮೀರಾ ಚೋಪ್ರಾ ಬಳಿಕ ಸತೀಶ್ ಕೌಶಿಕ್ ಅವರ 2014 ರ 'ಗ್ಯಾಂಗ್ ಆಫ್ ಘೋಸ್ಟ್ಸ್' ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಅಲ್ಲಿಂದ ದಕ್ಷಿಣ ಮತ್ತು ಹಿಂದಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

  ನನ್ನ ದೇಶ ಸಂಕಷ್ಟದಲ್ಲಿದೆ ಸಹಾಯ ಮಾಡಿ: ಅಮೆರಿಕ ಅಧ್ಯಕ್ಷರಿಗೆ ಪ್ರಿಯಾಂಕಾ ಮನವಿನನ್ನ ದೇಶ ಸಂಕಷ್ಟದಲ್ಲಿದೆ ಸಹಾಯ ಮಾಡಿ: ಅಮೆರಿಕ ಅಧ್ಯಕ್ಷರಿಗೆ ಪ್ರಿಯಾಂಕಾ ಮನವಿ

  ಜೂಮ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಮೀರಾ ಚೋಪ್ರಾ ''ಪ್ರಿಯಾಂಕಾ ಸಹೋದರಿ ಎನ್ನುವ ಕಾರಣಕ್ಕೆ ನನಗೆ ಯಾವುದೇ ಅವಕಾಶ ಸಿಕ್ಕಿಲ್ಲ. ಹಾಗೂ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಕ್ಕಾಗಿ ಆಕೆಯನ್ನು ಜನ ಗಂಭೀರವಾಗಿ ಪರಿಗಣಿಸಿದರು'' ಎಂದು ಹೇಳಿಕೊಂಡಿದ್ದಾರೆ.

  'ನಾನು ಬಾಲಿವುಡ್‌ನಲ್ಲಿ ನಟಿಸಲು ಬಂದಾಗ ಮಾತ್ರ ಪ್ರಿಯಾಂಕಾ ಚೋಪ್ರಾಳ ಸಹೋದರಿ ಕೂಡ ಬರುತ್ತಿದ್ದಾಳೆ ಎನ್ನುವ ಸುದ್ದಿ ಕೇಳ್ಪಟ್ಟೆ. ಆದರೆ ಪ್ರಿಯಾಂಕಾ ತಂಗಿ ಎನ್ನುವ ಕಾರಣಕ್ಕೆ ನಿರ್ಮಾಪಕರು ನನ್ನನ್ನು ಯಾರೂ ಆಯ್ಕೆ ಮಾಡಿಕೊಂಡಿಲ್ಲ' ಎಂದು ನಟಿ ತಿಳಿಸಿದ್ದಾರೆ.

  'ಸಿನಿಮಾ ತಿಳಿದಿರುವ ಕುಟುಂಬದಿಂದ ಬರುತ್ತಿದ್ದೇನೆ ತಿಳಿದಿದ್ದರಿಂದ ಯಾರೂ ನನ್ನನ್ನು ಲಘುವಾಗಿ ಪರಿಗಣಿಸಲಿಲ್ಲ. ಅದು ನನಗೆ ದೊರೆತ ಏಕೈಕ ಸವಲತ್ತು. ಇಲ್ಲದಿದ್ದರೆ, ನಾನು ಕಷ್ಟಪಡಬೇಕಾಗಿತ್ತು' ಎಂದು ಮೀರಾ ಚೋಪ್ರಾ ಜೂಮ್ ಟಿವಿ ಜೊತೆ ಮಾತನಾಡಿದ್ದಾರೆ.

  ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada

  ಬಂಗಾರಂ, ಜಾಂಬವಂ, ಮರುಧಾಮಲೈ, ಕಲೈ, ವನಾ, ಜಗನ್ಮೋಹಿನಿ ಮತ್ತು ಕಿಲಾಡಿ ಅಂತಹ ಚಿತ್ರಗಳಲ್ಲಿ ಮೀರಾ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ 'ಸೆಕ್ಷನ್-375' ವೆಬ್-ಸರಣಿ ನಟಿಸಿದರು. ಇದರಲ್ಲಿ ರಿಚಾ ಚಡ್ಡಾ, ಅಕ್ಷಯ್ ಖನ್ನಾ ಮತ್ತು ರಾಹುಲ್ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

  English summary
  'A Not Got Any Work Because of Priyanka chopra' Said Her Cousin Meera Chopra in recent interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X