ನಿರ್ಮಾಪಕಿಯಿಂದ ನಟ ಅಲೋಕ್ ನಾಥ್ ಮೇಲೆ ಅತ್ಯಾಚಾರ ಆರೋಪ!
ಬಾಲಿವುಡ್ ನಲ್ಲಿ ಶುರುವಾಗಿರುವ #Metoo ಅಭಿಯಾನ ಈಗ ಅನೇಕರ ಮುಖವಾಡವನ್ನು ಬಯಲು ಮಾಡುತ್ತಿದೆ. ಅನೇಕ ನಟಿಯರು ಮುಕ್ತವಾಗಿ ಈ ಬಗ್ಗೆ ಮಾತಾಡುತ್ತಿದ್ದಾರೆ. ಇದೀಗ ಕಿರುತೆರೆಯ ನಿರ್ಮಾಪಕಿಯೊಬ್ಬರು ತನ್ನ ಮೇಲೆ ಆದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಖ್ಯಾತ ಬರಹಗಾರ್ತಿ ಹಾಗೂ ನಿರ್ಮಾಪಕಿ ಕೂಡ ಆಗಿರುವ ಒಬ್ಬರು ಈಗ ನಟ ಅಲೋಕ್ ನಾಥ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬರೆದುಕೊಂಡಿದ್ದಾರೆ. ತೆರೆ ಮೇಲೆ ಸಂಸ್ಕಾರವಂತ ('sanskaari') ಎಂಬ ಇಮೇಜ್ ಹೊಂದಿರುವ ನಟ ಅಲೋಕ್ ನಾಥ್ ವಿರುದ್ಧ ಬಾಂಬ್ ಸಿಡಿಸಿದ್ದಾರೆ.
ಅಂದಹಾಗೆ, 19 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಅವರ ಪೂರ್ಣ ವಿವರವನ್ನು ಆ ನಿರ್ಮಾಪಕಿ ಬಿಚ್ಚಿಟ್ಟಿದ್ದಾರೆ. ಆ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅನೇಕರು ಅವರ ಧೈರ್ಯವನ್ನ ಮೆಚ್ಚಿಕೊಂಡಿದ್ದಾರೆ. ಮುಂದೆ ಓದಿ...

ನಟಿಯ ಹಿಂದೆ ಬಿದ್ದಿದ್ದ
''ನಾನು ಮತ್ತು ಆತನ ಹೆಂಡತಿ ಸ್ನೇಹಿತೆಯರು. ಅವರ ಮನೆಗೆ ನಾನು, ನಮ್ಮ ಮನೆಗೆ ಅವರು ಹೋಗಿ ಬರುವುದು ನಡೆಯುತ್ತಿತ್ತು. ನಾನು 'ತಾರ' ಎಂಬ ಒಂದು ಟಿವಿ ಶೋ ನಲ್ಲಿ ಬರಹಗಾರ್ತಿಯಾಗಿದ್ದಾಗ ಅದರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯ ಹಿಂದೆ ಅವನು ಬಿದ್ದಿದ್ದ. ಆದರೆ, ಆಕೆ ಈತನ ಬಗ್ಗೆ ಆಸಕ್ತಿ ತೋರಿಸುತ್ತಿರಲಿಲ್ಲ.''

ಕುಡಿದು ಚಿತ್ರೀಕರಣದ ಸೆಟ್ ಗೆ ಬಂದಿದ್ದ
''ಆತನಿಂದ ನಮ್ಮ ಕಾರ್ಯಕ್ರಮದ ನಟಿಗೆ ಲೈಂಗಿಕ ದೌರ್ಜನ್ಯವಾಗಿತ್ತು. ಒಬ್ಬ ದೊಡ್ಡ ನಟ ಎನ್ನುವ ಕಾರಣಕ್ಕೆ ಅವನು ಮಾಡಿದ ಕೆಟ್ಟ ಕೆಲಸಗಳು ಅನೇಕ ಬಾರಿ ಮರೆಯಾಗುತ್ತಿದ್ದವು. ಒಮ್ಮೆ ಕುಡಿದು ಚಿತ್ರೀಕರಣದ ಸೆಟ್ ಗೆ ಬಂದು, ನಟಿಯ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಆಗ ಆಕೆ ಕಪಾಳಕ್ಕೆ ಹೊಡೆದಿದ್ದಳು.''

ಆ ದಿನ ಪಾರ್ಟಿ ಮುಗಿಸಿಕೊಂಡು ಬರುವಾಗ
'' ಒಂದು ದಿನ ಆತನ ಮನೆಗೆ ಪಾರ್ಟಿಗಾಗಿ ಆಹ್ವಾನ ಬಂದಿತ್ತು. ಆ ವೇಳೆಗೆ ನಾನು ಕೆಲಸ ಮಾಡುತ್ತಿದ್ದ ಪ್ರೊಡಕ್ಷನ್ ಕಂಪನಿ ಮುಚ್ಚಿ ಹೋಯಿತು. ಅವನ ಮತ್ತು ನನಗೆ ಒಂದೇ ಸ್ನೇಹಿತರ ಬಹಳ ಇತ್ತು. ಆ ದಿನ ಪಾರ್ಟಿ ಮುಗಿಸಿಕೊಂಡು ರಾತ್ರಿ 2 ಗಂಟೆಗೆ ಮನೆಗೆ ಹೋಗುತ್ತಿದೆ. ನನ್ನ ಡ್ರಿಕ್ಸ್ ನಲ್ಲಿ ಏನೋ ಮಿಕ್ಸ್ ಆಗಿತ್ತು ಅನಿಸುತ್ತದೆ. ಕುಡಿದ ಮತ್ತಿನಲ್ಲಿ ಅಲ್ಲಿ ಇರುವುದು ಬೇಡ ಎಂದು ನಡೆದುಕೊಂಡೆ ನನ್ನ ಮನೆಗೆ ಹೋಗುತ್ತಿದೆ.''

ಹಾಸಿಗೆಯಿಂದ ಮೇಲೆ ಬರಲು ಸಾಧ್ಯ ಆಗಲಿಲ್ಲ
''ದಾರಿಯ ಮಧ್ಯೆ ಕಾರಿನಲ್ಲಿ ಬಂದ ಆತ ಮನೆಗೆ ಬಿಡುವುದಾಗಿ ಹೇಳಿದ. ನಾನು ಅವನನ್ನು ನಂಬಿ ಕುಳಿತೆ. ಆ ನಂತರ ನನಗೆ ಏನಾಯಿತು ಎನ್ನುವುದು ನೆನಪಿಗೆ ಬರಲಿಲ್ಲ. ಮರು ದಿನ ಮಧ್ಯಾಹ್ನ ಏಳುವಾಗ ನೋವಾಗುತ್ತಿತ್ತು. ಹಾಸಿಗೆಯಿಂದ ಮೇಲೆ ಬರಲು ಸಾಧ್ಯ ಆಗಲಿಲ್ಲ. ನಂತರ ಘಟನೆಯ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಂಡಾಗ ಎಲ್ಲರೂ ಇದನ್ನು ಇಲ್ಲಿಗೆ ಮರೆತುಬಿಡು ಎಂದಿದ್ದರು.''

ವಿಪರ್ಯಸ ಎಂದರೆ ಆತನನ್ನು 'ಸಂಸ್ಕಾರಿ' ಎನ್ನುತ್ತಾರೆ
''ಬಳಿಕ ನಾನು ನನ್ನ ಕೆಲಸದಲ್ಲಿ ಮುಂದುವರೆಯುತ್ತಿದೆ. ಆ ಘಟನೆಯಾಗಿ 20 ವರ್ಷ ಕಳೆದಿದೆ. ಆತ ಈ ವಿಷಯವನ್ನು ಹೇಳಲು ಸಾಧ್ಯವಿರದ ಪರಿಸ್ಥಿತಿಯಲ್ಲಿ ಇದ್ದೇ. ನಾನು ಈಗ ಚೆನ್ನಾಗಿ ಇದ್ದೇನೆ. ಈ ರೀತಿಯ ಘಟನೆ ನಿಮಗೂ ಆಗಿದ್ದರೆ ಧೈರ್ಯವಾಗಿ ಹೇಳಿ. ಆ ಘಟನೆ ಆದ ಬಳಿಕ ನಾನು ಹಿಂದೆ ತಿರುಗಿ ನೋಡಿಲ್ಲ. ವಿಪರ್ಯಸ ಎಂದರೆ ಆತನನ್ನು ಇಂದು ಸಂಸ್ಕಾರಿ ಎಂದು ಕರೆಯುತ್ತಾರೆ.


Click it and Unblock the Notifications











