ವಿಕ್ಕಿ ಕೌಶಲ್ - ಕತ್ರಿನಾ ಕೈಫ್ ಮನೆಗೆ ಬಂದ ಹೊಸ ಅತಿಥಿ ; ಬೆಲೆ ಎಷ್ಟು ?
ಬಾಲಿವುಡ್‌ನ ಸ್ಟಾರ್ ಕಪಲ್ ವಿಕ್ಕಿ ಕೌಶಲ್ ಮತ್ತು ಬ್ಯೂಟಿ ಕ್ವೀನ್ ಕತ್ರಿನಾ ಕೈಫ್‌ಗೆ ಈಗ ಪ್ರತಿಕ್ಷಣವೂ ಹಬ್ಬದ ವಾತಾವರಣ. ಈ ಮುದ್ದಾದ ಜೋಡಿಯ ಮನೆಯಲ್ಲಿ ಖುಷಿಯ ಡಬಲ್ ಧಮಾಕವೇ ಆಗಿದೆ.ಕೇವಲ ಒಂದು ತಿಂಗಳ ಹಿಂದೆ ಈ ಸ್ಟಾರ್ ದಂಪತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಪ್ಪ-ಅಮ್ಮನಾದ ಈ ಸಿಹಿ ಸುದ್ದಿಯಿಂದ ಅವರ ಫ್ಯಾನ್ಸ್ ಮತ್ತು ಇಡೀ ಬಾಲಿವುಡ್ ಸಂತೋಷದಲ್ಲಿ ತೇಲುತ್ತಿತ್ತು.
ಈಗ ತಮ್ಮ ಮನೆಗೆ ಹೊಸ ಸದಸ್ಯ ಬಂದ ಖುಷಿಯಲ್ಲಿ ವಿಕ್ಕಿ ಮತ್ತು ಕತ್ರಿನಾ ಒಂದು ದೊಡ್ಡ ಗಿಫ್ಟ್‌ನ ಮುದ್ದು ಕಂದಮ್ಮಗೆ ನೀಡಿದ್ದಾರೆ. ಅವರ ಕುಟುಂಬಕ್ಕೆ ಐಷಾರಾಮಿ ಮತ್ತು ದುಬಾರಿ ಬೆಲೆಯ ಮತ್ತೊಂದು ಹೊಸ ಸದಸ್ಯ ಸೇರಿದ್ದಾನೆ. ಇದರ ಬೆಲೆ ಕೇಳಿದ್ರೆ ನೀವು ಅಬ್ಬಾ ಎನ್ನುವುದು ಗ್ಯಾರಂಟಿ.

ಲೆಕ್ಸಸ್ ಖರೀದಿಸಿದ ಜೋಡಿ; ಬೆಲೆ ಕೇಳಿದ್ರೆ ದಂಗಾಗ್ತೀರಾ.
ವಿಕ್ಕಿ ಮತ್ತು ಕತ್ರಿನಾ ಕೈಫ್ ಅವರು ಹೊಸದಾಗಿ 'ಲೆಕ್ಸಸ್ ಎಲ್ಎಂ350ಎಚ್ 4ಎಸ್' (Lexus LM350h 4S) ಎಂಬ ಸೂಪರ್ ಲಕ್ಸುರಿ ಕಾರನ್ನು ಖರೀದಿಸಿದ್ದಾರೆ. ಈ ಸುದ್ದಿ ಇಡೀ ಸಿನಿದುನಿಯಾದಲ್ಲಿ ವೈರಲ್ ಆಗಿದೆ.
ಈ ಕಾರು ಸಾಮಾನ್ಯದ್ದಲ್ಲ. ಇದರ ಬೆಲೆ ಕೇಳಿದ್ರೆ ಕಣ್ಣು ಮುಂದೆ ಕತ್ತಲು ಕವಿದಂತೆ ಆಗುವುದು ಗ್ಯಾರಂಟಿ. ಯಾಕೆಂದರೆ ಈ ರಾಯಲ್ ಸವಾರಿಯ ಮೌಲ್ಯ ಬರೋಬ್ಬರಿ 3.20 ಕೋಟಿ ರೂಪಾಯಿಗಳು. ಇದು ಸೆಲೆಬ್ರಿಟಿಗಳ ಮಟ್ಟಿಗೆ ಇರುವ ಅತ್ಯಂತ ದುಬಾರಿ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.
ತಮ್ಮ ಪುಟ್ಟ ಮಗುವಿನ ಮತ್ತು ಕುಟುಂಬದ ಪ್ರಯಾಣದ ಕಂಫರ್ಟ್ಗಾಗಿ ವಿಕ್ಕಿ-ಕತ್ರಿನಾ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದಾರೆ. ತಂದೆ-ತಾಯಿಯಾದ ನಂತರ ಹೊಸ ವಾಹನ ಖರೀದಿಸುವುದು ಬಾಲಿವುಡ್ನಲ್ಲಿ ಒಂದು ಸೆಂಟಿಮೆಂಟ್ ಆಗಿಬಿಟ್ಟಿದೆ.
ಲೆಕ್ಸಸ್ ಕಾರಿನಲ್ಲಿರುವ ಸೌಲಭ್ಯಗಳು 'ಫಸ್ಟ್ ಕ್ಲಾಸ್' ಲೆವೆಲ್
ಈ ಕಾರು ಕೇವಲ ಬೆಲೆಯಿಂದ ಮಾತ್ರವಲ್ಲ ಇದರೊಳಗಿರುವ ಸೌಲಭ್ಯಗಳಿಂದಲೂ ಗಮನ ಸೆಳೆದಿದೆ. ವಿಕ್ಕಿ ಕೌಶಲ್ ಈ ಹೊಸ ಕಾರಿನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಈ ಕಾರಿನಲ್ಲಿರುವುದು ಕೇವಲ ನಾಲ್ಕು ಸೀಟ್‌ಗಳು. ಆದರೆ ಅವುಗಳು ಲಾಂಜ್-ಶೈಲಿಯ ಐಷಾರಾಮಿ ರಿಕ್ಲೈನರ್ ಸೀಟ್‌ಗಳು ಆಗಿವೆ. ಇದರ ಒಳಾಂಗಣ ವಿನ್ಯಾಸ ಮತ್ತು ಆರಾಮದಾಯಕ ಅನುಭವ ಅತ್ಯುತ್ತಮವಾಗಿದೆ.
ಕಾರಿನ ಹಿಂಭಾಗದಲ್ಲಿ ಒಂದು ದೊಡ್ಡ 48-ಇಂಚಿನ ಎಚ್ಡಿ ಡಿಸ್ಪ್ಲೇ (HD Display) ಇರಿಸಲಾಗಿದೆ. ಇದರೊಂದಿಗೆ ಪ್ರೀಮಿಯಂ ಸೌಂಡ್ ಸಿಸ್ಟಮ್ ಮತ್ತು ಸಂಪೂರ್ಣ ಶಾಂತಿಯುತ ಪ್ರಯಾಣಕ್ಕಾಗಿ ಸೌಂಡ್ ಇನ್ಸುಲೇಶನ್ ಸೌಲಭ್ಯ ಕೂಡ ಇದರಲ್ಲಿದೆ. ಈ ಕಾರನ್ನು 'ಚಲಿಸುತ್ತಿರುವ ವಿಮಾನದ ಫಸ್ಟ್-ಕ್ಲಾಸ್ ಅನುಭವ' ಎಂದು ಬಣ್ಣಿಸಲಾಗಿದೆ.
ತಂದೆಯಾದ ಖುಷಿಯ ಬಗ್ಗೆ ವಿಕಿ ಹೇಳಿದ್ದೇನು?
ನಟ ವಿಕ್ಕಿ ಕೌಶಲ್ ಮೊದಲ ಬಾರಿಗೆ ತಂದೆಯಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು "ತಂದೆಯಾಗಿರುವುದು ನನ್ನ ಜೀವನದ ಅತಿ ದೊಡ್ಡ ಮ್ಯಾಜಿಕಲ್ ಮೊಮೆಂಟ್" ಎಂದಿದ್ದಾರೆ.
"ನಾನು ಬಹಳ ಭಾವನಾತ್ಮಕವಾಗಿ ಇರುತ್ತೇನೆ ಎಂದು ಅಂದುಕೊಂಡಿದ್ದೆ. ಆದರೆ ಇದು ನನ್ನ ಜೀವನದಲ್ಲಿ ಅತ್ಯಂತ ನೆಲೆಯೂರಿದ ಮತ್ತು ಮನಸ್ಸಿಗೆ ಶಾಂತಿ ನೀಡಿದ ಕ್ಷಣವಾಗಿದೆ" ಎಂದು ಅವರು ಹೇಳಿಕೊಂಡಿದ್ದಾರೆ.
ಪುತ್ರನ ಆಗಮನದ ಜೊತೆಗೆ ಹೊಸ ಕಾರು ಖರೀದಿಸಿರುವ ಈ ಜೋಡಿ ಸದ್ಯಕ್ಕೆ ಬಾಲಿವುಡ್ನ ಟಾಕ್ ಆಫ್ ದಿ ಟೌನ್ ಆಗಿದೆ. ಹೊಸ ರಾಯಲ್ ಸವಾರಿ ಆನಂದದಾಯಕವಾಗಿರಲಿ ಮತ್ತು ಕಂದಮ್ಮನೊಂದಿಗೆ ಅವರ ಜೀವನ ಸುಖವಾಗಿರಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.


Click it and Unblock the Notifications











