twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹುಟ್ಟುಹಬ್ಬಕ್ಕೆ ವಿಶೇಷ ಸಿನಿಮೋತ್ಸವ

    |

    ಬಾಲಿವುಡ್‌ನ ಬಿಗ್ ಬಿ, ಭಾರತೀಯ ಚಿತ್ರರಂಗದ ದಂತ ಕತೆ ಅಮಿತಾಭ್‌ ಬಚ್ಚನ್‌, ತಮ್ಮ ಅದ್ಭುತ ನಟನೆಯ ಮೂಲಕ ಭಾರತೀಯ ಸಿನಿಮಾ ಪ್ರಿಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೇವಲ ಬಾಲಿವುಡ್‌ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಲ್ಲೂ ಅಮಿತಾಭ್‌ ಬಚ್ಚನ್‌ ಅಭಿಮಾನಿಗಳಿದ್ದಾರೆ. ಅವರ ಮಾತು, ಎಲ್ಲರ ಗಮನ ಒಮ್ಮೆಲೆ ಸೆಳೆಯುವ ಧ್ವನಿ, ಸ್ಟೈಲ್‌ ಪ್ರತಿಯೊಂದನ್ನು ಕೂಡ ಜನ ಮೆಚ್ಚಿಕೊಂಡಿದ್ದಾರೆ.

    ಬಾಲಿವುಡ್‌ನ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಇದೇ ಅಕ್ಟೋಬರ್ 11ರಂದು 80ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಅಮಿತಾಭ್‌ ಬಚ್ಚನ್‌ ಅವರ 80ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 80ನೇ ವಸಂತಕ್ಕೆ ಕಾಲಿಡುತ್ತಿದರುವ ಅಮಿತಾಭ್‌ ಬಚ್ಚನ್‌ ಅವರಿಗೆ ವಿಶೇಷ ಗೌರವ ನೀಡಲು ಫಿಲ್ಮ್ ಹೆರಿಟೇಜ್‌ ಫೌಂಡೇಶನ್‌ ಎಂಬ ಸಂಸ್ಥೆ ದೇಶದಾದ್ಯಂತ ಅಮಿತಾಭ್‌ ಬಚ್ಚನ್‌ ವಿಶೇಷ ಸಿನಿಮೋತ್ಸವ ನಡೆಸುವುದಾಗಿ ಘೋಷಿಸಿದ್ದಾರೆ.

    ಕೇವಲ ಸಿನಿಮಾಗಾಗಿ ದುಬಾರಿ ಸಂಭಾವನೆ ಬಿಟ್ಟು ನಟಿಸಿದ ಬಾಲಿವುಡ್ ತಾರೆಯರು ಯಾರು?ಕೇವಲ ಸಿನಿಮಾಗಾಗಿ ದುಬಾರಿ ಸಂಭಾವನೆ ಬಿಟ್ಟು ನಟಿಸಿದ ಬಾಲಿವುಡ್ ತಾರೆಯರು ಯಾರು?

    ಈ ವಿಶೇಷ ಸಿನಿಮಾತ್ಸೋವಕ್ಕೆ 'ಬಚ್ಚನ್‌ ಬ್ಯಾಕ್ ಟು ದಿ ಬಿಗಿನಿಂಗ್‌' ಅಂದರೆ ಪ್ರಾರಂಭಕ್ಕೆ ಮರಳಿದ ಬಚ್ಚನ್‌ ಎಂದು ಹೆಸರಿಡಲಾಗಿದೆ. ಅಕ್ಟೋಬರ್‌ 8ರಿಂದ ಪ್ರಾರಂಭಗೊಳ್ಳಲಿರುವ ಬಚ್ಚನ್‌ ಸಿನಿಮೋತ್ಸವ ಅಕ್ಟೋಬರ್‌ 11ರಂದು ಮುಕ್ತಾಯಗೊಳ್ಳಲಿದೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ದೇಶ್ ಪ್ರಮುಖ 17 ನಗರಗಳಲ್ಲಿ ಅಮಿತಾಭ್‌ ಬಚ್ಚನ್‌ ಅವರ ವೃತ್ತಿ ಜೀವನದ ಪ್ರಾರಂಭದಿಂದ ಈವರೆಗೆ ಹಿಟ್‌ ಆದ ಕೆಲವು ಆಯ್ದ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

    A Special Film Festival Announced For Amitabh Bachchans 80th Birthday

    ಫಿಲ್ಮ್ ಹೆರಿಟೇಜ್‌ ಫೌಂಡೇಶನ್‌ ಸಂಸ್ಥೆ ಪಿವಿಆರ್‌ ಸಹ ಭಾಗಿತ್ವದಲ್ಲಿ ಅಮಿತಾ ಬಚ್ಚನ್ ಅವರ ವೃತ್ತಿ ಜೀವನದಲ್ಲಿ ಎಂದೂ ಮರೆಯಲಾಗದಂತಹ ಕಭಿ..ಕಭಿ, ಅಮರ್‌ ಅಕ್ಬರ್‌ ಅಂಥೋನಿ, ಅಭಿಮಾನ್‌, ದೀವಾರ್, ಮಿಲಿ, ಚುಪ್ಕೆ ಚುಪ್ಕೆ ಸೇರಿದಂತೆ ಒಟ್ಟು 11 ಸಿನಿಮಾಗಳ ಪ್ರದರ್ಶನ ನಡೆಯಲಿದೆ.

    ಫಿಲ್ಮ್ ಹೆರಿಟೇಜ್‌ ಫೌಂಡೇಶನ್‌ ಸಂಸ್ಥೆ ಈಗಾಗಲೇ ನೀಡಿರುವ ಮಾಹಿತಿ ಪ್ರಕಾರ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಸೂರತ್, ಬರೋಡಾ, ರಾಯ್‌ಪುರ, ಕಾನ್ಪುರ, ಕೊಲ್ಲಾಪುರ, ಇಂದೋರ್ ಹಾಗೂ ಅಮಿತಾಭ್‌ ಬಚ್ಚನ್‌ ಅವರ ಹುಟ್ಟೂರು ಪ್ರಯಾಗ್‌ರಾಜ್‌ ಸೇರಿ ಒಟ್ಟು 17 ನಗರಗಳಲ್ಲಿ ವಿಶೇಷ ಸಿನಿಮಾತ್ಸೋವ ನಡೆಯಲಿದೆ. ನಾಲ್ಕು ದಿನಗಳ ಕಾಲ 22 ಚಿತ್ರಮಂದಿರಗಳಲ್ಲಿ 30 ಸ್ಕ್ರೀನ್‌ಗಳಲ್ಲಿ, ಅಮಿತಾಭ್‌ ಬಚ್ಚನ್‌ ಅವರ ಚಿತ್ರಗಳ ಒಟ್ಟು 172 ಪ್ರದರ್ಶನ ನಡೆಯಲಿದೆ.

    ಬಾಲಿವುಡ್‌ನಲ್ಲಿ ಪುರುಷರೇ ಪ್ರಾಬಲ್ಯ ಸಾಧಿಸುತ್ತಿದ್ದರು: 90ರ ದಶಕ ನೆನೆದ ಜೂಹಿ ಚಾವ್ಲಾಬಾಲಿವುಡ್‌ನಲ್ಲಿ ಪುರುಷರೇ ಪ್ರಾಬಲ್ಯ ಸಾಧಿಸುತ್ತಿದ್ದರು: 90ರ ದಶಕ ನೆನೆದ ಜೂಹಿ ಚಾವ್ಲಾ

    ಈ ಬಗ್ಗೆ ಸ್ವತಃ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಮಾತನಾಡಿದ್ದು, ಈ ವಿಶೇಷ ಸಿನಿಮೋತ್ಸವ ಭಾರತೀಯ ಚಿತ್ರರಂಗದಲ್ಲಿ ಕಳೆದು ಹೋದ ಹಾಗೂ ಮರೆಯಲಾಗದ ಸಿನಿಮಾ ಯುಗವನ್ನು ಮರುಕಳಿಸುವಂತೆ ಮಾಡುತ್ತಿದೆ. ಪ್ರಸ್ತುತ ದಿನಗಳಲ್ಲಿ ಭಾರತೀಯ ಚಲನಚಿತ್ರದ ಪರಂಪರೆಯನ್ನು ಉಳಿಸುವುದು ಬಹಳ ಮುಖ್ಯವಾಗಿದೆ. ಈ ವಿಶೇಷ ಸಿನಿಮೋತ್ಸವ ಭಾರತೀಯ ಚಿತ್ರರಂಗದಲ್ಲಿ ಹೆಗ್ಗುರುತು ಮೂಡಿಸಿರುವ ಅನೇಕ ಚಿತ್ರಗಳ ಉತ್ಸವಕ್ಕೆ ಪ್ರಾರಂಭ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಇನ್ನು ವಿಶೇಷ ಸಿನಿಮೋತ್ಸವವನ್ನು ಆಯೋಜಿಸಿರುವ ಫಿಲ್ಮ್ ಹೆರಿಟೇಜ್‌ ಫೌಂಡೇಶನ್‌ ಸಂಸ್ಥೆಯ ಮುಖ್ಯಸ್ಥ ನಿರ್ದೇಶಕ ದುಂಗಾರ್‌ಪುರ್ ಈ ಬಗ್ಗೆ ಮಾತನಾಡಿದ್ದು, ನಾನು ಅಮಿತಾಭ್‌ ಬಚ್ಚನ್‌ ಅವರ ದೊಡ್ಡ ಅಭಿಮಾನಿ. ಅವರ ಜನ್ಮದಿನದ ಪ್ರಯುಕ್ತ ಮೊದಲ ಬಾರಿಗೆ ವಿಶೇಷ ಸಿನಿಮೋತ್ಸವ ನಡೆಸಿ ಗೌರವ ಸೂಚಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಅಮಿತಾಬ್‌ ಬಚ್ಚನ್‌ ಅವರ ವೃತ್ತಿ ಜೀವನದ ಆರಂಭದಲ್ಲಿ ಹಿಟ್‌ ಆದ ಪ್ರಮುಖ ಚಿತ್ರಗಳ ಪ್ರದರ್ಶನ ನಡೆಯಲಿದೆ. ಈ ಮೂಲಕ ಅಮಿತಾಭ್‌ ಬಚ್ಚನ್‌ ಅಭಿಮಾನಿಗಳು ಮತ್ತೆ ದೊಡ್ಡ ಪರದೆ ಮೇಲೆ ಅವರ ಚಿತ್ರವನ್ನು ನೋಡಿ ಸಂಭ್ರಮಿಸಬಹುದು ಎಂದರು.

    ಸಲ್ಮಾನ್ ಖಾನ್ ಬದಲು ಕಷ್ಟದ ಸ್ಟಂಟ್ ಮಾಡ್ತಿದ್ದ ಸಲ್ಲು ಡೂಪ್ಲಿಕೇಟ್ ಸಾಗರ್ ಪಾಂಡೆ ನಿಧನಸಲ್ಮಾನ್ ಖಾನ್ ಬದಲು ಕಷ್ಟದ ಸ್ಟಂಟ್ ಮಾಡ್ತಿದ್ದ ಸಲ್ಲು ಡೂಪ್ಲಿಕೇಟ್ ಸಾಗರ್ ಪಾಂಡೆ ನಿಧನ

    English summary
    Film Heritage Foundation announced a film festival to celebrate Amitabh Bachchan's 80th birthday.
    Saturday, October 1, 2022, 11:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X