'ರಿಯಲ್ ಹೀರೋ' ಸೋನು ಸೂದ್ ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ ಈಜುಗಾರ

ರಿಯಲ್ ಹೀರೋ ಸೋನು ಸೂದ್ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಸೋನು ಸೂದ್ ನೋಡಿ ಅನೇಕರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಹೈದರಾಬಾದ್ ನ ಸೋನು ಸೂದ್ ಅಭಿಮಾನಿಯೊಬ್ಬರು ಸೋನು ಸೂದ್ ಹೆಸರಿನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ್ದಾರೆ.

ಹೈದರಾಬಾದ್ ನ ಹುಸೇನ್ ನಗರ್ ಲೇಕ್ ನಿವಾಸಿ ಈಜುಗಾರ ಶಿವ ಎನ್ನುವವರು ಸೋನು ಸೂದ್ ಹೆಸರಿನಲ್ಲಿ ಸೇವೆಯನ್ನು ಪ್ರಾರಂಭಿಸುವ ಮೂಲಕ ಪುಣ್ಯದ ಕೆಲಸಕ್ಕೆ ಮುಂದಾಗಿದ್ದಾರೆ. ಶಿವ ಎನ್ನುವ ಈಜುಪಟು ಈಗಾಗಲೇ ಮಾನವೀಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂದೆ ಓದಿ..

ಅನೇಕರ ಜೀವ ಉಳಿಸಿರುವ ಶಿವ

ಅನೇಕರ ಜೀವ ಉಳಿಸಿರುವ ಶಿವ

ಹುಸೆನ್ ನಗರ್ ದ ಲೇಕ್ ಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಸಿದ ಅನೇಕರನ್ನು ಶಿವ ಕಾಪಾಡಿದ್ದಾರೆ. ಅವರು ಹೇಳುವ ಪ್ರಕಾರ ಈಗಾಗಲೇ 100 ಜನರನ್ನು ಕಾಪಾಡಿದ್ದಾರಂತೆ. ಅವರ ಧೈರ್ಯಶಾಲಿ ಕೆಲಸಕ್ಕೆ ಜನರು ಅವರನ್ನು ಟ್ಯಾಂಕ್ ಬಾಂಡ್ ಶಿವ ಎಂದು ಕರೆಯುತ್ತಿದ್ದಾರೆ.

ಆಂಬ್ಯುಲೆನ್ಸ್ ಸೇವೆಗೆ ಸೋನು ಸೂದ್ ಸ್ಫೂರ್ತಿ

ಆಂಬ್ಯುಲೆನ್ಸ್ ಸೇವೆಗೆ ಸೋನು ಸೂದ್ ಸ್ಫೂರ್ತಿ

ಶಿವ ಅವರ ನಿಸ್ವಾರ್ಥ ಕೆಲಸ ಗಮನಿಸಿ ನಂತರ ಜನರು ಅವರಿಗೆ ದೇಣಿಗೆ ನೀಡಲು ಪ್ರಾರಂಭಿಸಿದ್ದರು. ಆದರೆ ಆ ಹಣವನ್ನು ಸಂಗ್ರಹಿಸಿ ಆಂಬ್ಯುಲೆನ್ಸ್ ಖರೀದಿಸಿ ಅದಕ್ಕೆ ಸೋನು ಸೂದ್ ಹೆಸರಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವ, ಜನರು ನನ್ನ ಕುಟುಂಬಕ್ಕಾಗಿ ಹಣವನ್ನು ನೀಡಿದರು. ಆದರೆ ನಾನು ಆ ಹಣವನ್ನು ಆಂಬ್ಯುಲೆನ್ಸ್ ಖರೀದಿ ಮಾಡಿದೆ. ಆಂಬ್ಯುಲೆನ್ಸ್ ಗೆ ಸೋನು ಸೂದ್ ಹೆಸರಿಟ್ಟಿದ್ದೇನೆ. ಏಕೆಂದರೆ ಅವರ ಕೆಲಸದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ಶಿವ ಅವರ ಉತ್ತಮ ಕೆಲಸಕ್ಕೆ ಸೋನು ಸೂದ್ ಮೆಚ್ಚುಗೆ

ಶಿವ ಅವರ ಉತ್ತಮ ಕೆಲಸಕ್ಕೆ ಸೋನು ಸೂದ್ ಮೆಚ್ಚುಗೆ

ಇಂದು ಸೋನು ಸೂದ್ ಶಿವ ಅವರ ಉಚಿತ ಅಂಬ್ಯೂಲೆನ್ಸ್ ಸೇವಿಗೆ ಚಾಲನೆ ನೀಡಿದರು. ಶಿವ ಅವರ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಕ್ಕೆ ಇಂಥ ವೀರರ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಆಂಬ್ಯುಲೆನ್ಸ್ ಸಹ ಸಾಕಷ್ಟು ಜೀವವನ್ನು ಉಳಿಸಲಿದೆ. ಈ ಸಾಂಕ್ರಾಮಿಕ ರೋಗವು ಸಾಕಷ್ಟು ಕಲಿಸಿದೆ. ಕಷ್ಟದ ಸಮಯದಲ್ಲಿ ಪ್ರತಿಯೊಬ್ಬರು ಮುಂದೆ ಬಂದು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

Recommended Video

ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada
ಸೋನು ಸೂದ್ ಟೈಲರಿಂಗ್ ಶಾಪ್ ವಿಡಿಯೋ ವೈರಲ್

ಸೋನು ಸೂದ್ ಟೈಲರಿಂಗ್ ಶಾಪ್ ವಿಡಿಯೋ ವೈರಲ್

ಸೋನು ಸೂದ್ ಇತ್ತೀಚಿಗಷ್ಟೆ ಬಟ್ಟೆ ಹೊಲಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ರಸ್ತೆ ಬದಿಯಲ್ಲಿ ಕುಳಿತು ಬರಿಗಾಲಿನಲ್ಲಿ ಬಟ್ಟೆ ಹೊಲಿಯುತ್ತಿದ್ದ ವಿಡಿಯೋಗೆ ಅಭಿಮಾನಿಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ವಿಡಿಯೋ ಶೇರ್ ಮಾಡಿ, ಸೋನು ಸೂದ್ ಟೈಲರಿಂಗ್ ಶಾಪ್. ಇಲ್ಲಿ ಉಚಿತ ಬಟ್ಟೆ ಹೊಲಿದುಕೊಡಲಾಗಿತ್ತೆ ಎಂದು ಬರೆದುಕೊಂಡಿದ್ದರು.

More from Filmibeat

English summary
A swimmer starts sonu sood ambulance service in hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X