ಆಕೆಗೆ ತಾಳ್ಮೆ ಜಾಸ್ತಿ, ತಮ್ಮ ಸೊಸೆ ಐಶ್ವರ್ಯ ರೈಯನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ ಜಯಾ ಬಚ್ಚನ್...!

ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಇಬ್ಬರು ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ.

A viral video features Shweta Bachchan and Jaya Bachchan giving marriage advice to Aishwarya Rai

ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರಿಗೆ ಗೊತ್ತಾದರೂ, ಸದ್ಯಕ್ಕೆ ಐಶ್ವರ್ಯ ರೈ ಅವರ ಬಗ್ಗೆ ಜಯಾ ಬಚ್ಚನ್ ಮತ್ತು ಅವರ ಮಗಳು ಶ್ವೇತಾ ಮಾತನಾಡಿರುವ ಅಭಿಮಾನದ ಮಾತು ಸಾಮಾಜಿಕ ಜಾಲತಾಣದಲ್ಲಿ ಮಾರ್ದನಿಸುತ್ತಿದೆ. ಹೌದು, ಅಸಲಿಗೆ.. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಬಿರುಕು ಮೂಡಲು ಜಯಾ ಬಚ್ಚನ್ ಮತ್ತು ಅವರ ಮಗಳು ಶ್ವೇತಾ ಪ್ರಮುಖ ಕಾರಣವೆನ್ನುವುದು ಅನೇಕರ ಅಭಿಪ್ರಾಯ. ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಶ್ವೇತಾ ಬಚ್ಚನ್ ವಿರುದ್ಧ ಅನೇಕರು ಆಗಾಗ ಕೆಂಡ ಕಾರುತ್ತಿರುತ್ತಾರೆ. ಆದರೆ ಈಗ ಪುರಾತನ ಕಾಲದಲ್ಲಿ ಐಶ್ವರ್ಯ ರೈ ಅವರನ್ನು ಶ್ವೇತಾ ಬಚ್ಚನ್ ಹೊಗಳಿ ಅಟ್ಟಕ್ಕೇರಿಸಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ಹಿನ್ನೆಲೆ ಗಂಡ-ಹೆಂಡತಿಯ ಜಗಳದಲ್ಲಿ ಶ್ವೇತಾ ಬಚ್ಚನ್ ಅವರನ್ನು ಸುಖಾ ಸುಮ್ಮನೆ ಎಳೆದು ತರಲಾಗುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ.

ಹೌದು, ಕರಣ್ ಜೋಹರ್ ತಮ್ಮ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಕುರಿತು ಶ್ವೇತಾ ಮತ್ತು ಜಯಾ ಬಚ್ಚನ್‌ಗೆ ಪ್ರಶ್ನೆಯನ್ನು ಕೇಳಿದ್ದಾರೆ. ನಿಮ್ಮ ಮನೆಗೆ ಸೊಸೆಯಾಗಿ ಬಂದ ಐಶ್ವರ್ಯ ರೈಗೆ ಸಲಹೆಯನ್ನು ನೀಡುವುದಾದರೆ ಏನು ಸಲಹೆ ನೀಡುತ್ತೀರಾ ಎಂದಿದ್ದಾರೆ. ಇದಕ್ಕೆ ಉತ್ತರವನ್ನು ನೀಡಿರುವ ಜಯಾ ಬಚ್ಚನ್ ಮತ್ತು ಶ್ವೇತಾ, ಐಶ್ವರ್ಯಗೆ ಯಾವ ಸಲಹೆ ನೀಡುವ ಅವಶ್ಯಕತೆ ಇಲ್ಲ ಯಾಕೆಂದರೆ ಆಕೆ ಪರಿಪೂರ್ಣ ಹೆಣ್ಣು ಎಂದು ಹೇಳಿದ್ದಾರೆ.ನಾವು ಅವಳಿಗೆ ಏನೂ ಹೇಳಬೇಕಾಗಿಲ್ಲ ಎಂದು ಭಾವಿಸುತ್ತೇವೆ ಎಂದಿದ್ದಾರೆ. ಆಕೆಗೆ ಅಪಾರವಾದ ತಾಳ್ಮೆ ಇದೆ ಎಂದು ಹೇಳಿದ್ದಾರೆ. ಐಶ್ವರ್ಯ ಅವರನ್ನು ಬಾಯ್ತುಂಬ ಇಬ್ಬರು ಹೊಗಳಿದ್ದಾರೆ.

Jaya Bachchan’s marriage advice to Abhishek and Aishwarya (from 2007)
byu/ewwdavid__ inBollyBlindsNGossip

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಐಶ್ವರ್ಯ ರೈ ಅವರನ್ನು ಹೊಗಳಿದ್ದಕ್ಕಾಗಿ ತಾಯಿ ಮಗಳನ್ನು ಶ್ಲಾಘಿಸಿದ್ದರೆ, ಇನ್ನೂ ಕೆಲವರು ಕಾಲ ಬದಲಾದಂತೆ ಜನ ಬದಲಾಗುತ್ತಾರೆ. ಪರಿಸ್ಥಿತಿಯ ಜೊತೆ ಮನಸ್ಥಿತಿ ಕೂಡ ಬದಲಾಗುತ್ತೆ ಎಂದಿದ್ದಾರೆ. ಈ ಕಾರಣಕ್ಕೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ವಿಚಾರದಲ್ಲಿ ಶ್ವೇತಾ ಅವರನ್ನು ಖಳನಾಯಕಿಯಂತೆ ಬಿಂಬಿಸುವುದು ತಪ್ಪಾಗುತ್ತೆ ಎಂದಿದ್ದಾರೆ. ಆದರೆ, ಜಯಾ ಬಚ್ಚನ್ ವಿಚಾರದಲ್ಲಿ ಈ ಮಾತು ಹೇಳಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಇನ್ನೂ ಒಬ್ಬರು ಮುಚ್ಚಿದ ಬಾಗಿಲಿನ ಹಿಂದೆ ಮನೆಯಲ್ಲಿ ಅವರ ಅವರ ನಡುವೆ ಏನೆಲ್ಲ ನಡೆದಿದೆ ಎನ್ನುವುದು ಅವರಿಗಷ್ಟೇ ಗೊತ್ತಿರುತ್ತೆ ಎಂದು ಹೇಳಿದರೆ, ಐಶ್ವರ್ಯ ಬಗ್ಗೆ ಶ್ವೇತಾ ಹೇಳಿದ ಈ ಒಳ್ಳೆಯ ಮಾತುಗಳನ್ನೂ ನಿರ್ಲಕ್ಷಿಸಿ ಆಕೆಯನ್ನೇ ಹೊಣೆ ಮಾಡಲಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X