ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ, ಕಣ್ಣು ಮುಚ್ಚಿಕೊಂಡ ಮುಂಬೈಕರ್ಸ್..!
ಈಗೀಗ ಬಟ್ಟೆ ಬಿಚ್ಚುವುದು ಅದೇ ಅವತಾರದಲ್ಲಿ ಫೋಟೊಗೆ ಪೋಸು ಕೊಡುವುದು ಎಲ್ಲವೂ ಸರ್ವೇ ಸಾಧಾರಣವಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಇಂತಹ ಅಟಾಟೋಪಗಳಿಗೆ ಎಲ್ಲಿಲ್ಲದ ಬೇಡಿಕೆ. ಜನ ಇದನ್ನೇ ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಇದಕ್ಕೆ ತನುಮಿತಾ ಘೋಷ್ ಸದ್ಯದ ಮತ್ತೊಂದು ಉದಾಹರಣೆ.
ಹೌದು, ತನ್ನನ್ನೂ ತಾನು ಸೋಶಿಯಲ್ ಮೀಡಿಯಾ ಸ್ಟಾರ್ ಎಂದು ಕರೆಸಿಕೊಳ್ಳುವ ತನುಮಿತಾ, ಇತ್ತೀಚೆಗೆ ಮೈಗೆ ಟವೆಲ್ ಸುತ್ತಿಕೊಂಡು ಮುಂಬೈನ ಬಸ್ ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್, ರೆಸಿಡೆನ್ಶಿಯಲ್ ವಲಯ ಹೀಗೆ ಇಡೀ ಮುಂಬೈನ ಬೀದಿಗಳಲ್ಲಿ ಸುತ್ತಾಡಿದ್ದಾರೆ. ನಡೆಯುತ್ತಾ ನಡೆಯುತ್ತಾ ಉದ್ದೇಶಪೂರ್ವಕವಾಗಿ ಟವೆಲ್ ಬಿಚ್ಚಿದ್ದಾರೆ. ಇನ್ನೇನು ಟವೆಲ್ ಬಿದ್ದೇ ಹೋಯ್ತು ಎಂಬಂತೆ ಆಕ್ಟ್ ಮಾಡಿ ಚಮಕ್ ಕೊಟ್ಟಿದ್ದಾರೆ. ಆ ನಂತರ ತಾವೂ ಒಳಗೆ ಮಿನಿ ಸ್ಕರ್ಟ್ ಧರಿಸಿರುವ ವಿಚಾರವನ್ನೂ ಬಹಿರಂಗ ಮಾಡಿ, ವಿಶ್ವ ಸುಂದರಿ ಕಿರೀಟವನ್ನೂ ಮುಡಿಗೇರಿಸಿಕೊಂಡವರಂತೆ ಸಂಭ್ರಮಿಸಿದ್ದಾರೆ ತನುಮಿತಾ ಘೋಷ್.

ಅಂದ್ಹಾಗೇ ಟವೆಲ್ ಸುತ್ತಿಕೊಂಡು ಮುಂಬೈ ಪ್ರದಕ್ಷಣೆಯನ್ನು ಹಾಕುವುದರ ಮೂಲಕ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಫೇಮಸ್ ಆದ ಈ ತನುಮಿತಾ, ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಅಂತೆ. ಆದರೂ ಹೇಳಿಕೊಳ್ಳೋಕಾದರೂ ಈ ಚೆಲುವೆಗೆ ಸಾಮಾಜಿಕ ಜಾಲತಾಣದಲ್ಲಿ 50.000 ಫಾಲೋವರ್ಸ್ ಇಲ್ಲ. ಹೀಗಾಗಿಯೇ ತನ್ನ ಹಿಂಬಾಲಕರ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳಲು ಈಕೆ ಮಾಡಿರುವ ತಂತ್ರ ಇದು ಅನ್ನುವ ಅಭಿಪ್ರಾಯ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಹೀಗಾಗಿಯೇ ತನುಮಿತಾ ಅವರ ಈ ಪಬ್ಲಿಸಿಟಿ ಸ್ಟಂಟ್ ಸದ್ಯಕ್ಕೆ ಕೆಲವರ ಕಣ್ಣರಳಿಸಿದರೆ. ಇನ್ನೂ ಬಹುತೇಕರ ಆಕ್ರೋಶಕ್ಕೂ ಈ ವಿಡಿಯೋ ಕಾರಣವಾಗಿದೆ. ಹೆಸರು ಸಂಪಾದಿಸಲು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದಯ ಎಂದು ಕೆಲವರು ತಮ್ಮ ಅಸಮಾಧಾನ ಹೊರ ಹಾಕಿದರೆ, ಭಾರತದ ಮುಂದಿನ ಪೀಳಿಗೆಯ ಕುರಿತು ಅನೇಕರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಸಭ್ಯತೆ ಇರಬೇಕು. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಮಾಡಿದರೆ, ಮಕ್ಕಳು ಹಾಗೂ ಯುವ ಸಮೂಹ ತಪ್ಪು ದಾರಿ ಹಿಡಿಯುವಂತೆ ಪ್ರೇರಪಿಸುವಂತಿದೆ. ಹೀಗಾಗಿ ತನುಮಿತಾ ಘೋಷ್ ವಿರುದ್ದ ಪೊಲೀಸರು ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಮೂಲಕ ಸಮಾಜವನ್ನೂ ತಪ್ಪು ದಾರಿಗೆ ಎಳೆಯುತ್ತಿರುವ ಇಂಥವರಿಗೆ ಸರಿಯಾದ ಪಾಠವನ್ನೂ ಕಲಿಸಬೇಕು ಎನ್ನುವ ಅಭಿಪ್ರಾಯವನ್ನೂ ಅನೇಕುರ ವ್ಯಕ್ತಪಡಿಸುತ್ತಿದ್ಧಾರೆ.
ಉಳಿದಂತೆ ಈ ವಿಡಿಯೋವನ್ನು ತನುಮಿತಾ ಘೋಷ್ ಕಳೆದ ಜುಲೈ 08ರಂದು ಹಂಚಿಕೊಂಡಿದ್ದಾರೆ. ವಿಕ್ಕಿ ಕೌಶಲ್-ತೃಪ್ತಿ ದಿಮ್ರಿ ಅಭಿನಯದ ''ಬ್ಯಾಡ್ ನ್ಯೂಸ್'' ಚಿತ್ರದ 'ತೌಬಾ-ತೌಬಾ' ಹಾಡನ್ನೂ ತಮ್ಮ ಈ ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ಬಳಿಸಿಕೊಂಡಿದ್ಧಾರೆ. ಶೀರ್ಷಿಕೆಯಲ್ಲಿ, ಮುಂಬೈನ ಪ್ರೇಕ್ಷಕರು ತನ್ನ ನೋಟವನ್ನು ನೋಡಿ 'ತೌಬಾ-ತೌಬಾ' ಎಂದು ಉದ್ಗರಿಸುತ್ತಿದ್ದಾರೆ ಎಂದು ಕೂಡ ಬರೆದುಕೊಂಡಿದ್ದಾರೆ. ಜುಲೈ 08ರಂದು ಅಪ್ಲೋಡ್ ಆದ ಈ ವಿಡಿಯೋ ಹೆಚ್ಚು ಕಡಿಮೆ ಒಂದು ತಿಂಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನೂ ಕಂಡಿದೆ.


Click it and Unblock the Notifications











