For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದಲ್ಲಿ ಸಿಕ್ಕಿದ್ದಾರೊಬ್ಬ ಐಶ್ವರ್ಯಾ ರೈ!

  |

  ಬಾಲಿವುಡ್‌ನ ಖ್ಯಾತ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಸೌಂದರ್ಯಕ್ಕೆ ಮನಸೋಲದವರು ಕಡಿಮೆ. ಈಗಲೂ ಐಶ್ವರ್ಯಾ ರೈ ಭಾರತದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು.

  ಆರಂಭದಲ್ಲಿ ಐಶ್ವರ್ಯಾ ರೈ ಅವರು ಯಾವ ಪರಿ ಹಿಟ್ ಆಗಿದ್ದರೆಂದರೆ, ತುಸುವೇ ಐಶ್ವರ್ಯಾ ರೈ ಅನ್ನು ಹೋಲುತ್ತಿದ್ದರೂ ಸಾಕು ಅವರಿಗೆ ಸಿನಿಮಾಗಳಲ್ಲಿ ಅವಕಾಶ ದೊರೆಯುತ್ತಿತ್ತು. ಸ್ವತಃ ಸಲ್ಮಾನ್ ಖಾನ್ ಐಶ್ವರ್ಯಾ ರೈ ಅನ್ನು ಹೋಲುವ ನಟಿಯೊಬ್ಬರನ್ನು ಉದ್ಯಮಕ್ಕೆ ಪರಿಚಯಿಸಿದರು ಆದರೆ ಆಕೆ ಸಿನಿಮಾರಂಗದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.

  ಆದರೆ ಈಗ ಪಾಕಿಸ್ತಾನದಲ್ಲಿ ಐಶ್ವರ್ಯಾ ರೈ ಅವರನ್ನೇ ಹೋಲುವ ಯುವತಿ ಪತ್ತೆ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ ಪಾಕಿಸ್ತಾನಿ ಯುವತಿಯ ಚಿತ್ರಗಳು ಸಖತ್ ಹರಿದಾಡುತ್ತಿದ್ದು, ಚಿತ್ರ ನೋಡಿದ ಹಲವರು ಅವಾಕ್ಕಾಗಿದ್ದಾರೆ.

  ಪಾಕಿಸ್ತಾನಿ ಯುವತಿ ಅಮ್ನಾ ಇಮ್ರಾನ್ ಎಂಬ ಯುವತಿ ನೋಡಲು ಥೇಟ್ ಐಶ್ವರ್ಯಾ ರೈ ರೀತಿಯೇ ಕಾಣುತ್ತಿದ್ದಾರೆ. ಆಕೆಯು ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು, ಆಕೆಯ ಮುಖ ಬಹುತೇಕ ಐಶ್ವರ್ಯ ರೈ ಮುಖವನ್ನೇ ಹೋಲುತ್ತದೆ. ಆಕೆಯ ಕಣ್ಣುಗಳು ಸಹ ಐಶ್ವರ್ಯಾ ರೈ ಅವರಂತೆಯೇ ಇವೆ.

  'ಐಶ್ವರ್ಯಾ ರೈ ಅವರಂತೆಯೇ ಕಾಣಬೇಕೆಂದು ಈ ಯುವತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಬೇಕು' ಎಂದು ಸಹ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟರ ಮಟ್ಟಿಗೆ ಯುವತಿಯ ಮುಖ ಐಶ್ವರ್ಯಾ ರೈ ಅವರನ್ನು ಹೋಲುತ್ತಿದೆ.

  English summary
  A Young girl of Pakistan name Amna Imran look alike Bollywood actress Aishwarya Rai. Her photos getting viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X