ಅತ್ತ ಗೌರಿ, ಇತ್ತ ಕಿರಣ್ ಮತ್ತು ರೀನಾ ; ಆಮಿರ್ ಖಾನ್ ಬರ್ತ್‌ಡೇ ಸಂಭ್ರಮ - ತಂದೆಗೆ ಲೈಟರ್ ನೀಡಿದ ಮಗಳು
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ವಿಶೇಷ ಅಂದರೆ ವಿಚ್ಛೇದನ ಪಡೆದ ಮೇಲೆ ಕೂಡ ಇಲ್ಲಿ ಅನೇಕರು ದಿಕ್ಕು ಬದಲಿಸುವುದಿಲ್ಲ.

ಬದಲಿಗೆ ನಾವು ಈಗ ಗಂಡ-ಹೆಂಡ್ತಿಯಲ್ಲ ಬದಲಿಗೆ ಸ್ನೇಹಿತರು ಮಾತ್ರ ಎಂದು ಹೇಳುತ್ತಲೇ ಜೊತೆ ಜೊತೆಯಾಗಿ ಓಡಾಡುತ್ತಾರೆ. ಮಾಜಿ ಗಂಡ ಅಥವಾ ಹೆಂಡ್ತಿಯ ಎದುರೇ ಮತ್ತೊಬ್ಬರನ್ನು ಪ್ರೀತಿಸಲು ಶುರು ಮಾಡುತ್ತಾರೆ. ಹಳೆಯ ಸಂಗಾತಿಗೆ ತಮ್ಮ ಹೊಸ ಗೆಳೆಯ ಅಥವಾ ಗೆಳತಿಯ ಪರಿಚಯವನ್ನು ಮಾಡಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಉದಾಹರಣೆಗೆ ಆಮಿರ್ ಖಾನ್.
ಹೌದು, ಎಲ್ಲರಿಗೆ ಗೊತ್ತಿರುವಂತೆ ಆಮಿರ್ ಖಾನ್ ಸದ್ಯ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ಪ್ರೇಮ ಗೀತೆ ಹಾಡುತ್ತಾ ನೆಮ್ಮದಿಯಾಗಿದ್ದಾರೆ. ಹಾಗಂಥ ಆಮಿರ್ ಖಾನ್ ಹಳೆಯ ಹೆಂಡ್ತಿಯರ ಸಾಂಗತ್ಯವನ್ನು ಬಿಟ್ಟಿಲ್ಲ. ತಮ್ಮ ಇಬ್ಬರು ಪತ್ನಿಯರಾದ ರೀನಾ ದತ್ತ, ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ್ದರೂ ಕೂಡ ಆತ್ಮೀಯತೆ ಹಾಗೇ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಹೊಸ ಪ್ರೇಯಸಿ ಗೌರಿ ಮತ್ತು ತಮ್ಮ ಹಳೆಯ ಹೆಂಡ್ತಿಯರಾದ ರೀನಾ ದತ್ತ ಮತ್ತು ಕಿರಣ್ ರಾವ್ ಅವರ ಜೊತೆ ಹಬ್ಬ ಹರಿದಿನಗಳನ್ನು ಆಮಿರ್ ಖಾನ್ ಆಚರಿಸುತ್ತಾರೆ. ಮೂರು ಜನರ ಜೊತೆ ಸುತ್ತಾಡಲು ತೆರಳುತ್ತಾರೆ.
ಇನ್ನೂ ವಿಶೇಷ ಅಂದರೆ ಹಬ್ಬದಲ್ಲಿ ಇಬ್ಬರು ಮಾಜಿ ಪತ್ನಿಯರ ಜೊತೆ ಅವರ ಇಬ್ಬರು ಮಕ್ಕಳಾದ ಜುನೈದ್ ಖಾನ್ ಮತ್ತು ಆಜಾದ್ ರಾವ್ ಖಾನ್ ಕೂಡ ಭಾಗಿಯಾಗುತ್ತಾರೆ. ಒಂದಾಗಿದ್ದರೆ ಎಲ್ಲ ಚಿಂತೆಗೆ ಜಾಗ ಇಲ್ಲ ಎಂದು ಎಲ್ಲರೂ ಜೊತೆಯಾಗಿಯೇ ಓಡಾಡುತ್ತಾರೆ.

ಇಂಥಾ ಆಮಿರ್ ಖಾನ್ ಮೊನ್ನೆ (ಮಾರ್ಚ್ 14) ತಮ್ಮ 61ನೇ ಹುಟ್ಟುಹಬ್ಬವನ್ನೂ ಆಚರಿಸಿದ್ದಾರೆ. ವಿಶೇಷ ಅಂದರೆ ಇವರ ಈ ಬರ್ತ್ ಡೇ ಸಂಭ್ರಮದಲ್ಲಿ ಕೇವಲ ಗೌರಿ ಮಾತ್ರ ಭಾಗವಹಿಸಿರಲಿಲ್ಲ. ಬದಲಿಗೆ ಎಂದಿನಂತೆ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಕೂಡ ಈ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ.
ಇಷ್ಟೇ ಅಲ್ಲ ಇವರ ಮಕ್ಕಳಾದ ಆಜಾದ್.. ಜುನೈದ್ ಮತ್ತು ಇರಾ ಕೂಡಾ ತಮ್ಮ ತಂದೆಯ ಬರ್ತ್ ಡೇಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ .ಇರಾ ಖಾನ್ ಅವರಂತೂ ಕ್ಯಾಂಡಲ್ ಲೈಟ್ ಮಾಡಲು ತಮ್ಮ ಕಿಸೆಯಿಂದ ಲೈಟರ್ ಬೇರೆ ತೆಗೆದು ಕೊಟ್ಟಿದ್ದಾರೆ.
ಆಮಿರ್ ಖಾನ್ ಅವರ ಕುಟುಂಬದ ಪ್ರಮುಖ ಭಾಗವೇ ಆದಂತೆ ಇರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸದ್ಯ ಆಮಿರ್ ಖಾನ್ ಅವರ ಈ ಬರ್ತ್ ಡೇ ಸಂಭ್ರಮಾಚರಣೆಯ ವಿಡಿಯೋ ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ಚರ್ಚೆ ಈಗ ಶುರುವಾಗಿದೆ.
ಕೆಲವರು ಆಮಿರ್ ಖಾನ್ ಅವರ ಆಮಿರ್ ಅವರ ಪ್ರಬುದ್ಧತೆಯನ್ನು ಮೆಚ್ಚುತ್ತಿದ್ದಾರೆ. ಇನ್ನೂ ಕೆಲವರು ಕಿಡಿ ಕಾರುತ್ತಿದ್ದಾರೆ. ಗೌರಿ, ರೀನಾ, ಕಿರಣ್ ಮತ್ತು ಆಮಿರ್ ಖಾನ್ ಅವರ ಈ ರೀ ಯೂನಿಯನ್ ಕೆಲವರಿಗೆ ಇಷ್ಟವಾದರೆ ಇನ್ನೂ ಹಲವರ ಕಣ್ಣು ಕೆಂಪಾಗಿಸಿದೆ. 61 ವರ್ಷದ ಅಮಿರ್ ಖಾನ್‌ಗೆ ಇದೆಲ್ಲ ಬೇಕಾ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆ ಮತ್ತೊಂದು ವರ್ಗ ಇರಾ ಖಾನ್ ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದೆ.


Click it and Unblock the Notifications











