twitter
    For Quick Alerts
    ALLOW NOTIFICATIONS  
    For Daily Alerts

    'ಇಂಥ ಸಿನಿಮಾ ನೋಡಿಲ್ಲ': ಸಿನಿಮಾ ನೋಡಿ ಕಣ್ಣೀರು ಹಾಕಿದ ಅಮೀರ್ ಖಾನ್

    |

    ಅಮೀರ್ ಖಾನ್ ಬಾಲಿವುಡ್‌ನ ಬುದ್ಧಿವಂತ ನಟ, ನಿರ್ದೇಶಕ ಎಂದೇ ಕರೆಯಲ್ಪಡುತ್ತಾರೆ. ಅವರಿಗೆ ಬಾಲಿವುಡ್‌ನ ಬಹುತೇಕ 'ಮಸಾಲೆ' ಸಿನಿಮಾಗಳು ಇಷ್ಟವಾಗುವುದಿಲ್ಲ. ಕರಣ್ ಜೋಹರ್ ಶೋನಲ್ಲಿ ಒಮ್ಮೆ ಈ ಬಗ್ಗೆ ಮಾತನಾಡಿದ್ದ ಅಮೀರ್ ಖಾನ್, ತಮಗೆ ಸೂಪರ್ ಹಿಟ್ ಸಿನಿಮಾ 'ಕಭಿ ಖುಷಿ ಕಭಿ ಗಮ್' ಸಹ ಇಷ್ಟವಾಗಿರಲಿಲ್ಲ ಎಂದಿದ್ದರು. ಆದರೆ ಈಗ ಬಿಡುಗಡೆ ಹೊಸ ಸಿನಿಮಾ ಒಂದನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ ಅಮೀರ್ ಖಾನ್.

    ಮರಾಠಿಯ ಜನಪ್ರಿಯ ನಿರ್ದೇಶಕ ನಾಗರಾಜ್ ಮಂಜುಳೆ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು 'ಝುಂಡ್' ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅಮೀರ್ ಖಾನ್ ಅವರಿಗಾಗಿ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಅಮೀರ್ ಖಾನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    Recommended Video

    KGF ಹಿಸ್ಟರಿ ನೋಡಿ ಭಯ ಪಟ್ರ ಅಮಿರ್ ಖಾನ್

    'ಕೆಜಿಎಫ್ 2' ಎದುರು 'ಲಾಲ್ ಸಿಂಗ್ ಛಡ್ಡಾ': ಯಶ್‌ಗೆ ಕರೆ ಮಾಡಿ ಕ್ಷಮೆ ಕೇಳಿದ ಅಮೀರ್ ಖಾನ್'ಕೆಜಿಎಫ್ 2' ಎದುರು 'ಲಾಲ್ ಸಿಂಗ್ ಛಡ್ಡಾ': ಯಶ್‌ಗೆ ಕರೆ ಮಾಡಿ ಕ್ಷಮೆ ಕೇಳಿದ ಅಮೀರ್ ಖಾನ್

    ಸಿನಿಮಾ ನೋಡಿದ ಬಳಿಕ ಅಮೀರ್ ಖಾನ್‌ ನೀಡಿದ ಪ್ರತಿಕ್ರಿಯೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ಅಮೀರ್ ಖಾನ್, ಸಿನಿಮಾ ಮುಗಿದ ಕೂಡಲೇ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಅಲ್ಲದೆ ಅವರೊಟ್ಟಿಗೆ ಸಿನಿಮಾ ನೋಡಿದ ಇತರರು ಸಹ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. 'ಖಾಸಗಿ ಸ್ಕ್ರೀನಿಂಗ್ ಒಂದರಲ್ಲಿ ಹೀಗೆ ಎದ್ದು ನಿಂತು ಗೌರವ ಸಲ್ಲಿಸಿದ್ದು ಇದೇ ಮೊದಲು ಎನಿಸುತ್ತದೆ' ಎಂದು ಕಣ್ಣೀರು ಒರೆಸಿಕೊಂಡ ಬಳಿಕ ಹೇಳಿದ್ದಾರೆ ಅಮೀರ್.

    ಹೊಗಳಲು ಪದಗಳೇ ಸಿಗುತ್ತಿಲ್ಲ ಎಂದ ಅಮೀರ್ ಖಾನ್

    ಹೊಗಳಲು ಪದಗಳೇ ಸಿಗುತ್ತಿಲ್ಲ ಎಂದ ಅಮೀರ್ ಖಾನ್

    ''ನನಗೆ ಏನು ಹೇಳಬೇಕೆಂಬುದು ಗೊತ್ತಾಗುತ್ತಿಲ್ಲ. ನೀವು ಭಾರತದ ಯುವಕ-ಯುವತಿಯರ ಭಾವನೆಗಳನ್ನು ಹಿಡಿದು ತೋರಿಸುವ ರೀತಿ ಅತ್ಯದ್ಭುತ. ಸಿನಿಮಾದಲ್ಲಿ ನಟಿಸಿರುವ ಆ ಮಕ್ಕಳಂತೂ ಅದ್ಭುತ. ಬಹಳ ಚೆನ್ನಾಗಿ ಅವರು ನಟಿಸಿದ್ದಾರೆ. ಎಂಥ ಅದ್ಭುತವಾದ ಸಿನಿಮಾ ಮಾಡಿಬಿಟ್ಟಿದ್ದೀಯ. ಇದೊಂದು ಅತ್ಯದ್ಭುತವಾದ ಸಿನಿಮಾ. ಅದು ಹೇಗೆ ಈ ಸಿನಿಮಾ ಆಗಿದೆಯೋ ಗೊತ್ತಿಲ್ಲ ಸಿನಿಮಾದಲ್ಲಿ ಹಿಡಿದಿರುವ ಸ್ಪೂರ್ತಿಯಂತೂ ಅತ್ಯದ್ಭುತ. ಸಿನಿಮಾ ನೋಡುವ ನಾನು ಅದೇ ಸ್ಪೂರ್ತಿಯೊಂದಿಗೆ ಏಳುತ್ತೇನೆ'' ಎಂದು ನಿರ್ದೇಶಕ ನಾಗರಾಜ್ ಮಂಜುಳೆಯನ್ನು ಹೊಗಳಿದ್ದಾರೆ ಅಮೀರ್ ಖಾನ್.

    ನಾವು ಕಲಿತ ಸಿನಿಮಾ ಭಾಷೆಯನ್ನು ಮುರಿದುಬಿಟ್ಟಿದ್ದೀರಿ: ಅಮೀರ್

    ನಾವು ಕಲಿತ ಸಿನಿಮಾ ಭಾಷೆಯನ್ನು ಮುರಿದುಬಿಟ್ಟಿದ್ದೀರಿ: ಅಮೀರ್

    ''ಈ ಸಿನಿಮಾ ಮೂಲಕ ನೀವು ಎಲ್ಲವನ್ನು ಮುರಿದು ಬಿಟ್ಟಿದ್ದೀರಿ. ನಾವು ಕಳೆದ ಮುವತ್ತು, ನಲವತ್ತು ವರ್ಷದಲ್ಲಿ ಸಿನಿಮಾ ಭಾಷೆ ಕಲಿತಿದ್ದೀವೆಯೋ ಅದನ್ನೆಲ್ಲ ಮುರಿದು ಹೊಸ ಭಾಷೆಯನ್ನು ಕಟ್ಟುಬಿಟ್ಟಿದ್ದೀರಿ. ನಾವು ಕಲಿತ ಸಿನಿಮಾ ವಿದ್ಯೆಯನ್ನು ನೀವು ಫುಟ್‌ಬಾಲ್ ಮಾಡಿಬಿಟ್ಟಿದ್ದೀರಿ. ಆ ಸಿನಿಮಾ ಭಾಷೆಯನ್ನು ಒದ್ದು ಹೊಸ ಭಾಷೆ ಬರೆದಿದ್ದೀರಿ'' ಎಂದಿದ್ದಾರೆ ಅಮೀರ್ ಖಾನ್.

    ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋದ ಅಮೀರ್ ಖಾನ್

    ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋದ ಅಮೀರ್ ಖಾನ್

    ''ಬಚ್ಚನ್ ಸರ್ ಅದೆಷ್ಟು ಅದ್ಭುತವಾದ ನಟನೆಯನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ. ಬಚ್ಚನ್ ಅವರು ತಮ್ಮ ವೃತ್ತಿ ಜಿವನದಲ್ಲಿ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಇದು ಅವರ ಅತ್ಯುತ್ತಮ ಸಿನಿಮಾ. ಅತ್ಯದ್ಭುತವಾಗಿ ಅಮಿತಾಬ್ ಬಚ್ಚನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ'' ಎಂದ ಅಮೀರ್ ಖಾನ್ ಆ ನಂತರ ಸಿನಿಮಾದಲ್ಲಿ ನಟಿಸಿದ ಮಕ್ಕಳನ್ನು ಭೇಟಿ ಮಾಡಿದರು. ಎಲ್ಲರನ್ನೂ ಅಪ್ಪಿಕೊಂಡು ಎಲ್ಲರ ನಟನೆಯನ್ನೂ ಅಮೀರ್ ಖಾನ್ ಹೊಗಳಿದರು. ಅಲ್ಲದೆ ಎಲ್ಲ ನಟರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆತಿಥ್ಯ ನೀಡಿದರು.

    ಸ್ಲಂ ಹುಡುಗರು ಫುಟ್‌ಬಾಲ್ ಆಟಗಾರರಾಗುವ ಕತೆ 'ಝುಂಡ್'

    ಸ್ಲಂ ಹುಡುಗರು ಫುಟ್‌ಬಾಲ್ ಆಟಗಾರರಾಗುವ ಕತೆ 'ಝುಂಡ್'

    'ಝುಂಡ್' ಸಿನಿಮಾ ಸ್ಲಂ ಹುಡುಗರು ಭಾರತದ ಫುಟ್‌ಬಾಲ್ ಟೀಂ ಆಗುವ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಫುಟ್‌ಬಾಲ್ ಕೋಚ್ ವಿಜಯ್ ಪಾತ್ರವನ್ನು ಅಮಿತಾಬ್ ಬಚ್ಚನ್ ನಿರ್ವಹಿಸಿದ್ದಾರೆ. ನೈಜ ಘಟನೆಯಿಂದ ಪ್ರೇರಣೆಗೊಂಡ ಸಿನಿಮಾ ಇದಾಗಿದೆ. ಸಿನಿಮಾವನ್ನು ನಾಗರಾಜ್ ಮಂಜುಳೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು 'ಸೈರಾಟ್', 'ಫೆಂಡ್ರಿ' ಹೆಸರಿನ ಅತ್ಯದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ವ್ಯಕ್ತಿಗಳ ಕತೆ ಹೇಳುವುದು ನಾಗರಾಜ್ ಮಂಜುಳೆಯ ನಿರ್ದೇಶನದ ಮಾದರಿ. ಅವರು ಮತ್ತೊಮ್ಮೆ ಜಯ ಸಾಧಿಸಿದ್ದಾರೆ ಎಂಬುದು ಅಮೀರ್ ಖಾನ್ ಮಾತುಗಳಿಂದ ಗೊತ್ತಾಗುತ್ತಿದೆ.

    English summary
    Aamir Khan praises Amitabh Bachchan starer, Nagaraj Manjule directed Jhund movie. He cried after watching the movie and said this is a new kind of movie.
    Thursday, March 3, 2022, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X