ಹೊಸ ಪ್ರೇಯಸಿ ಪಕ್ಕದಲ್ಲಿದ್ದರೂ ಮಾಜಿ ಪತ್ನಿಯರನ್ನು ಮರೆಯದ ಆಮಿರ್ ಖಾನ್, ಮೂವರ ಜೊತೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಜಾಲಿ..!

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.

ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ.

Aamir Khan and Gauri s Unseen Video with His Ex-Wives Goes Viral a Day After Confirming Relationship

ವಿಶೇಷ ಅಂದರೆ ವಿಚ್ಛೇದನ ಪಡೆದ ಮೇಲೆ ಕೂಡ ಇಲ್ಲಿ ಅನೇಕರು ದಿಕ್ಕು ಬದಲಿಸುವುದಿಲ್ಲ. ಬದಲಿಗೆ ನಾವು ಈಗ ಗಂಡ-ಹೆಂಡ್ತಿಯಲ್ಲ ಬದಲಿಗೆ ಸ್ನೇಹಿತರು ಮಾತ್ರ ಎಂದು ಹೇಳುತ್ತಲೇ ಜೊತೆ ಜೊತೆಯಾಗಿ ಓಡಾಡುತ್ತಾರೆ. ಮಾಜಿ ಗಂಡ ಅಥವಾ ಹೆಂಡ್ತಿಯ ಎದುರೇ ಮತ್ತೊಬ್ಬರನ್ನು ಪ್ರೀತಿಸಲು ಶುರು ಮಾಡುತ್ತಾರೆ. ಹಳೆಯ ಸಂಗಾತಿಗೆ ತಮ್ಮ ಹೊಸ ಗೆಳೆಯ ಅಥವಾ ಗೆಳತಿಯ ಪರಿಚಯವನ್ನು ಮಾಡಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಉದಾಹರಣೆಗೆ ಆಮಿರ್ ಖಾನ್.

ಹೌದು, ಮೊನ್ನೆಯಿಂದ ಆಮಿರ್ ಖಾನ್ ಭಾರತದೆಲ್ಲೆಡೆ ಚರ್ಚಿತ ವ್ಯಕ್ತಿಯಾಗಿದ್ದಾರೆ. 60ರ ಪ್ರಾಯದಲ್ಲಿ ತಮ್ಮ ಮೂರನೇ ಪ್ರೇಯಸಿಯನ್ನು ಎಲ್ಲರಿಗೆ ಪರಿಚಯ ಮಾಡಿಸಿದ್ದಾರೆ. ಅನೇಕರನ್ನು ಈ ಮೂಲಕ ಅಚ್ಚರಿಗೆ ದೂಡಿದ್ದಾರೆ. ಹೀಗಿರುವಾಗ ತಮ್ಮ ಮೊದಲ ಇಬ್ಬರು ಪತ್ನಿಯರಾದ ರೀನಾ ದತ್ತ, ಕಿರಣ್ ರಾವ್ ಅವರ ಜೊತೆ ಆಮಿರ್ ಖಾನ್ ತಮ್ಮ ಹೊಸ ಪ್ರೇಯಸಿ ಗೌರಿ ಅವರ ಜೊತೆ ಕಾಲ ಕಳೆದಿದ್ದಾರೆ. ಭಾರತದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಅವರ ಮನೆಯಲ್ಲಿ ಎಲ್ಲರು ಜೊತೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ.

ಹೌದು, ಅಸಲಿಗೆ ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಅವರ ವಿವಾಹ ವಾರ್ಷಿಕೋತ್ಸವ ಫೆಬ್ರವರಿ 3ರಂದು ಇತ್ತು. ಈ ಸಮಯದಲ್ಲಿ ಇರ್ಫಾನ್ ಪಠಾಣ್ ಮನೆಗೆ ಆಮಿರ್ ಖಾನ್ ತಮ್ಮ ಇಬ್ಬರು ಪತ್ನಿಯರಾದ ಕಿರಣ್ ರಾವ್ ಮತ್ತು ರೀನಾ ದತ್ತಾ ಜೊತೆ ತೆರಳಿದ್ದರು. ಇರ್ಫಾನ್ ಪಠಾಣ್ ಮತ್ತು ಸಫಾಗೆ ಶುಭಾಶಯವನ್ನು ಕೋರಿದ್ದರು. ಆದರೆ, ಅವತ್ತು ಈ ಮೂವರ ಜೊತೆಯಲ್ಲಿ ಗೌರಿ ಕೂಡ ಇದ್ದರು. ತಮ್ಮ ಹೊಸ ಪ್ರೇಮ ಪುರಾಣವನ್ನು ಮಾಧ್ಯಮದವರಿಂದ ಮುಚ್ಚಿಡುವಲ್ಲಿ ಆಮಿರ್ ಖಾನ್ ಯಶಸ್ವಿಯಾಗಿದ್ದ ಹಿನ್ನೆಲೆ ಅವತ್ತು ಗೌರಿಯ ಕುರಿತು ಯಾರು ಆಲೋಚನೆ ಮಾಡಿರಲಿಲ್ಲ. ಗೌರಿಯ ಮೇಲೆ ಯಾರ ಕಣ್ಣು ಕೂಡ ಬಿದ್ದಿರಲಿಲ್ಲ.

ಆದರೆ, ಮೊನ್ನೆ.. ಆಮಿರ್ ಖಾನ್ ತಮ್ಮ ಲವ್ ಸ್ಟೋರಿ ಬಹಿರಂಗಗೊಳಿಸದ ಬೆನ್ನಲ್ಲೇ ಗೌರಿ ಅವರ ಫೋಟೊ ವೈರಲ್ ಆದವು. ಗೌರಿಯ ಜಾತಕವನ್ನು ಕೂಡ ಅನೇಕರು ಹೆಕ್ಕಿ ತೆಗೆದರು. ಇದೀಗ ಇರ್ಫಾನ್ ಪಠಾಣ್ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೌರಿ ಭಾಗಿಯಾಗಿದ್ದನ್ನು ಕೂಡ ಪತ್ತೆ ಹಚ್ಚಿದ್ದಾರೆ.ಆಮಿರ್ ಖಾನ್ ಅವರ ವ್ಯೆಯಕ್ತಿಕ ಬದುಕಿನ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅನೇಕರು ಕಿರಣ್ ರಾವ್ ಮತ್ತು ರೀನಾ ದತ್ತಾ ಅವರ ಹೃದಯ ವೈಶಾಲ್ಯತೆಯನ್ನು ಕೊಂಡಾಡುತ್ತಿದ್ದಾರೆ. ಮೂವರು ಪತ್ನಿಯರ ಮುದ್ದಿನ ಗಂಡ ಎಂದು ಆಮಿರ್ ಖಾನ್ ಅವರನ್ನು ಕರೆಯುತ್ತಿದ್ದಾರೆ. ತಮ್ಮ ಮಾಜಿ ಪತಿಯ ಮೂರನೇ ಮದುವೆಯಲ್ಲಿ ಕೂಡ ಕಿರಣ್ ರಾವ್ ಮತ್ತು ರೀನಾ ದತ್ತ ಸಂಭ್ರಮದಿಂದ ಭಾಗಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ.

Amir and gauri in Irfan pathan's wedding anniversary .
byu/Alternative-Union-55 inBollyBlindsNGossip

More from Filmibeat

Read more about: aamir khan love filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X