ಆಟ, ತಮಾಷೆ, ಪಜೀತಿ; 'ಸೀತಾರೆ ಜಮೀನ್ ಪರ್' ಟ್ರೈಲರ್ ರಿಲೀಸ್

ಬಾಲಿವುಡ್ ನಟ ಆಮೀರ್ ಖಾನ್ ಸೋಲಿನ ಸುಳಿಗೆ ಸಿಲುಕಿದ್ದಾರೆ. 'ಥಗ್ಸ್ ಆಫ್ ಹಿಂದೂಸ್ತಾನ್' ಸೋಲಿನ ಬಳಿಕ ಲಾಲ್‌ ಸಿಂಗ್ ಚಡ್ಡಾ ಕೂಡ ಕೈ ಕೊಟ್ಟಿತ್ತು. ಇನ್ನು ಮಿಸ್ಟ್ ಪರ್ಫೆಕ್ಷನಿಸ್ಟ್ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಸದ್ಯ ಆಮೀರ್ ಖಾನ್ ನಟನೆಯ 'ಸೀತಾರೆ ಜಮೀನ್ ಪರ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಆಮೀರ್ ಖಾನ್ ಕೈಯಲ್ಲಿ ಈಗ ಯಾವುದೇ ದೊಡ್ಡ ಸಿನಿಮಾ ಇಲ್ಲ. ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇನ್ನುಳಿದಂತೆ ಸೂಪರ್ ಹಿಟ್ 'ತಾರೆ ಜಮೀನ್ ಪರ್' ಸೀಕ್ವೆಲ್ ಅವರ ಕೈಯಲ್ಲಿದೆ. ಆರ್‌. ಎಸ್ ಪ್ರಸನ್ನ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಚಾಂಪಿಯನ್ಸ್' ಎಂಬ ಸ್ಪ್ಯಾನಿಷ್ ಚಿತ್ರದಿಂದ ಪ್ರೇರಣೆಗೊಂಡು ಈ ಕಥೆ ಕಟ್ಟಿಕೊಡಲಾಗಿದೆ.

Aamir Khan and Genelia Deshmukh s Sitaare Zameen Par first Trailer released

'ಸೀತಾರೆ ಜಮೀನ್ ಪರ್' ಸ್ಪೋರ್ಟ್ಸ್ ಕಾಮಿಡಿ ಸಿನಿಮಾ. ಜೂನ್ 20ಕ್ಕೆ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಸದ್ಯ ಮೊದಲ ಟ್ರೈಲರ್ ಬಿಟ್ಟು ಕುತೂಹಲ ಮೂಡುವಂತೆ ಮಾಡಿದ್ದಾರೆ. ಅಪರ್ಣಾ ಪುರೋಹಿತ್ ಜೊತೆ ಸೇರಿ ಸ್ವತಃ ಆಮೀರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಂಕರ್ ಇಶಾಲ್ ಲಾಯ್ ಹಾಗೂ ರಾಮ್ ಸಂಪತ್ ಸಂಗೀತ ಚಿತ್ರಕ್ಕಿದೆ.

ಅಮೇರಿಕನ್ ಬ್ಯಾಸ್ಕೆಟ್‌ಬಾಲ್ ತರಬೇತುದಾರ ರಾನ್ ಜೋನ್ಸ್ ಅವರ ಜೀವನದ ಕಥೆಯಿಂದ ಪ್ರೇರಣೆಗೊಂಡು ಕಥೆ ಸಿದ್ಧಪಡಿಸಲಾಗಿದೆ. ಜೋನ್ಸ್ ಒಮ್ಮೆ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದರು. ಬೌದ್ಧಿಕವಾಗಿ ಅಂಗವಿಕಲ ಬ್ಯಾಸ್ಕೆಟ್‌ಬಾಲ್ ತಂಡದ ಮುಖ್ಯ ತರಬೇತುದಾರರಾಗಿ ಸಮುದಾಯ ಸೇವೆ ಮಾಡಬೇಕಾದ ಶಿಕ್ಷೆಗೆ ಗುರಿಯಾಗಿದ್ದರು. ಮುಂದೆ ಹೇಗೆ ತಂಡ ಕಟ್ಟಿ ಅವರು ಗೆದ್ದಿದ್ದರು ಎನ್ನುವುದಕ್ಕೆ ಸಿನಿಮೀಯ ರೂಪ ಕೊಡಲಾಗಿದೆ. ಅದೇ ಪಾತ್ರದಲ್ಲಿ ಆಮೀರ್ ಖಾನ್ ನಟಿಸಿದ್ದಾರೆ.

ಸದ್ಯ ಬಿಡುಗಡೆ ಆಗಿರುವ 'ಸೀತಾರೆ ಜಮೀನ್ ಪರ್' ಟ್ರೈಲರ್ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿಗೆ ಇಷ್ಟವಾದರೂ ಸಾಮಾನ್ಯ ಪ್ರೇಕ್ಷಕರಿಗೆ ರಚಿಸುತ್ತಿಲ್ಲ. ಕೆಲವರು ಒರಿಜಿನಲ್ ಸಿನಿಮಾ ಜೊತೆಗೆ ಹೋಲಿಕೆ ಮಾಡು ನೋಡುತ್ತಿದ್ದಾರೆ. ಫ್ರೇಮ್ ಟು ಫ್ರೇಮ್ ಕಾಪಿ ಮಾಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ 4 ವರ್ಷಗಳಿಂದ ಒಂದು ಸಿನಿಮಾವನ್ನು ಕಾಪಿ ಮಾಡುತ್ತಾ ಕೂತಿದ್ರಾ? ಅದು ಕೂಡ ಮಕ್ಕಿಕಾ ಮಕ್ಕಿ ಎಂದು ವ್ಯಂಗ್ಯವಾಡುತ್ತಿದ್ದಾರೆ.

ಆಮೀರ್ ಖಾನ್ ದರ್ಬಾರ್ ಮುಗೀತು. ಇಷ್ಟರಮಟ್ಟಿಗೆ ಸಿನಿಮಾ ಕಾಪಿ ಪೇಸ್ಟ್ ಮಾಡುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ರೀಮೆಕ್ ಸಿನಿಮಾ ಎಂದಮೇಲೆ ಸನ್ನಿವೇಶಗಳ ನಡುವೆ ಸಾಮ್ಯತೆ ಇರುವುದು ಸಹಜ ಅಲ್ಲವೇ? ಸಿನಿಮಾ ಬಂದಾಗ ನೋಡಿ ಮಾತನಾಡಿ. ಬರೀ ಟ್ರೈಲರ್ ನೋಡಿ ಏನೇನೋ ಕಾಮೆಂಟ್ ಮಾಡಬೇಡಿ ಎಂದು ಕೆಲವರು ಕಿವಿ ಮಾತು ಹೇಳುತ್ತಿದ್ದಾರೆ.

ಆಮೀರ್ ಖಾನ್ ಹಾಗೂ ಜೆನಿಲಿಯಾ ದೇಶ್‌ಮುಖ್ ಜೊತೆಗೆ ಅರೋಶ್ ದತ್ತಾ, ಗೋಪಿ ಕೃಷ್ಣನ್ ವರ್ಮಾ, ವೇದಾಂತ್ ಶರ್ಮಾ, ನಮನ್ ಮಿಶ್ರಾ, ರಿಷಭ್ ಜೈನ್, ಆಶಿಶ್ ಪೆಂಡ್ಸೆ, ಸಂವಿತ್ ದೇಸಾಯಿ, ಸಿಮ್ರಾನ್ ಮಂಗೇಶ್ಕರ್, ಆಯುಷ್ ಬನ್ಸಾಲಿ ಚಿತ್ರದಲ್ಲಿ ನಟಿಸಿದ್ದಾರೆ. ಆಮೀರ್ ಖಾನ್ ನಟನೆಯ 'ತಾರೆ ಜಮೀನ್ ಪರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರ ಮುಂದುವರೆದ ಭಾಗ ಎನ್ನುವಂತೆ ಈ ಸಿನಿಮಾ ತೆರೆಗೆ ಬರ್ತಿದೆ.

'ಲಾಹೋರ್ 1947' ಎಂಬ ಚಿತ್ರದಲ್ಲಿ ಕೂಡ ಆಮೀರ್ ಖಾನ್ ಬಣ್ಣ ಹಚ್ಚಿದ್ದಾರೆ. ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

More from Filmibeat

English summary
Bollywood sports comedy drama film Sitaare Zameen Par trailer out now
Read more about: aamir khan genelia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X