ವಿಚ್ಛೇಧನದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಅಮೀರ್ ಖಾನ್, ಕಿರಣ್ ರಾವ್
ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ತಮ್ಮ 15 ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಗೌರವಪೂರ್ವಕವಾಗಿ ಇಬ್ಬರೂ ಬೇರ್ಪಟ್ಟಿದ್ದಾರೆಂಬುದು ಅವರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಿಂದ ಗೊತ್ತಾಗುತ್ತಿದೆ.
ಆದರೂ ಸಹ 'ಮಸಾಲೆ ಸುದ್ದಿಹುಡುಕುವ' ಕೆಲವು ವಾಹಿನಿಗಳು, ಅಮೀರ್-ಕಿರಣ್ ವಿಚ್ಛೇಧನಕ್ಕೆ ನಟಿ ಕಾರಣ, ಇನ್ನೊಂದು ಮತ್ತೊಂದು ಹೀಗೆ ಹಲವು ವಿಧದಲ್ಲಿ ಸುದ್ದಿಗಳನ್ನು ಬಿತ್ತರಿಸಿವೆ.
ವಿಚ್ಛೇಧನದ ಬಳಿಕ ಮೊದಲ ಬಾರಿಗೆ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದೂ ಪಕ್ಕ-ಪಕ್ಕ ಕೂತು ಕೈ-ಕೈ ಹಿಡಿದುಕೊಂಡು ಅವರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮದೇ ಫೌಂಡೇಶನ್‌ಗೆ ಸಂಬಂಧಿಸಿದ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಪಕ್ಕ-ಪಕ್ಕ ಕೂತು ಕೈ-ಕೈ ಹಿಡಿದುಕೊಂಡು ತಮ್ಮ ವಿಚ್ಛೇಧನದ ಬಗ್ಗೆ ನಗುತ್ತಲೆ ಮಾತನಾಡಿದ್ದಾರೆ.
''ನಮ್ಮ ನಿರ್ಣಯದಿಂದ ಕೆಲವರಿಗೆ ಶಾಕ್ ಆಗಿರಬಹುದು, ಕೆಲವರಿಗೆ ಬೇಸರ ಆಗಿರಬಹುದು. ಆದರೆ ನಾವು ನಿಮಗೆ ಹೇಳಲಿಚ್ಛಿಸುವುದು ಇಷ್ಟೆ ನಾವಿಬ್ಬರೂ ಆರಾಮವಾಗಿದ್ದೇವೆ. ಖುಷಿಯಾಗಿದ್ದೇವೆ. ನಾವು ಈಗಲೂ ಒಂದೇ ಕುಟುಂಬ ಆದರೆ ನಮ್ಮ ಸಂಬಂಧ ತುಸು ಬದಲಾಗಿದೆ ಅಷ್ಟೆ'' ಎಂದಿದ್ದಾರೆ ಅಮೀರ್ ಖಾನ್.

ಅಮೀರ್, ಕಿರಣ್ ಜಂಟಿಯಾಗಿ ನಡೆಸುತ್ತಿರುವ ಪಾನಿ ಫೌಂಡೇಶನ್ ಬಗ್ಗೆ ಮಾತನಾಡಿದ ಅಮೀರ್, ''ಪಾನಿ ಫೌಂಡೇಶನ್ ಮುಂದೆಯೂ ಚೆನ್ನಾಗಿ ನಡೆದುಕೊಂಡು ಹೋಗಲಿದೆ. ನಮ್ಮ ಮಗ ಆಜಾದ್‌ನಂತೆಯೇ ಪಾನಿ ಫೌಂಡೇಶನ್ ಸಹ ನಮಗೆ. ಹಾಗಾಗಿ ಅದು ನಿಲ್ಲುವುದಿಲ್ಲ'' ಎಂದಿದ್ದಾರೆ ಅಮೀರ್.
Recommended Video
ಅಮೀರ್ ಖಾನ್ ಹಾಗೂ ಕಿರಣ್ ರಾವ್ 15 ವರ್ಷದ ಹಿಂದೆ ವಿವಾಹವಾಗಿದ್ದರು. ಅಮೀರ್ ಖಾನ್‌ಗೆ ಕಿರಣ್ ರಾವ್ ಎರಡನೇ ಪತ್ನಿ. ಈ ಹಿಂದೆ ರೀನಾ ದತ್ ಅನ್ನು ವಿವಾಹವಾಗಿದ್ದ ಅಮೀರ್ ಖಾನ್ 16 ವರ್ಷದ ಬಳಿಕ ವಿಚ್ಛೇಧನ ನೀಡಿದರು.


Click it and Unblock the Notifications











