ಲೋಕೇಶ್ ಕನಕರಾಜ್ ಜೊತೆ ನನ್ನ ಸಿನಿಮಾ ನಿಂತಿಲ್ಲ, ಬಂದೇ ಬರುತ್ತೆ ; ಆದರೆ - ಆಮಿರ್ ಖಾನ್
ಬಾಲಿವುಡ್‌ನ ಖ್ಯಾತ ನಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಗುರುತಿಸಿಕೊಂಡಿರುವ ಆಮಿರ್ ಖಾನ್ ಹೊಸ ಪ್ರಾಜೆಕ್ಟ್ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಸದ್ಯಕ್ಕೆ ಅವರು ಯಾವುದೇ ಹೊಸ ಚಿತ್ರಕ್ಕೆ ಸಹಿ ಮಾಡಿಲ್ಲ. ಆದರೆ ಅವರು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಮಾತುಕತೆಗಳು ಈಗಲೂ ನಡೆಯುತ್ತಿವೆ...
ಎಂದು ಆಮೀರ್ ಖಾನ್ ಅವರೇ ಖಚಿತಪಡಿಸಿದ್ದಾರೆ. ಈ ಸುದ್ದಿ ಇಡೀ ಸೌತ್ ಮತ್ತು ಬಾಲಿವುಡ್ ವಲಯದಲ್ಲಿ ಸಂಚಲನ ಮೂಡಿಸಿದೆ.ಯಾಕೆಂದರೆ ಲೋಕೇಶ್ ಕನಕರಾಜ್ ಸೌತ್ ಸಿನಿಮಾ ರಂಗದ ಸ್ಟಾರ್ ಡೈರೆಕ್ಟರ್. ಕೇವಲ ಕೆಲವೇ ಚಿತ್ರಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅವರ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ.

ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾದ ನಂತರ ಲೋಕೇಶ್ ಹೆಸರು ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. 'ವಿಕ್ರಮ್', 'ಕೈಥಿ' ಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಆಮೀರ್ ಖಾನ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಷನ್ ಬಗ್ಗೆ ಭಾರೀ ನಿರೀಕ್ಷೆ ಇದೆ.
ಆಮೀರ್ ಖಾನ್ ಹೇಳಿದ್ದೇನು ?
ಇತ್ತೀಚೆಗೆ ಆಮೀರ್ ಖಾನ್ ''ಹಿಂದೂಸ್ತಾನ್ ಟೈಮ್ಸ್''ಗೆ ಸಂದರ್ಶನ ನೀಡಿದರು. ಈ ಸಮಯದಲ್ಲಿ ಲೋಕೇಶ್ ಜೊತೆಗಿನ ಮಾತುಕತೆಯನ್ನು ಬಹಿರಂಗಪಡಿಸಿದರು. "ಹೌದು, ನಾನು ಲೋಕೇಶ್ ಅವರೊಂದಿಗೆ ಒಂದು ಸಿನಿಮಾ ಮಾಡುವ ಬಗ್ಗೆ ಮಾತನಾಡುತ್ತಿದ್ದೇನೆ. ಆದರೆ ಈ ಪ್ರಾಜೆಕ್ಟ್ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ. ನಮ್ಮ ಚರ್ಚೆಗಳು ಈಗಲೂ ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಬಹುದು" ಎಂದು ಅವರು ಹೇಳಿದ್ದಾರೆ.
ಲೋಕೇಶ್ ಕನಕರಾಜ್ ಸೌತ್ ಸ್ಟಾರ್ ನಟರ ಜೊತೆ ಕೆಲಸ ಮಾಡುವ ಮೂಲಕ ದೊಡ್ಡ ಮಟ್ಟಿಗೆ ಸೌಂಡ್ ಮಾಡಿದ್ದಾರೆ. ಈಗ ಆಮೀರ್ ಖಾನ್ ಅವರಂತಹ ದೊಡ್ಡ ನಟನೊಂದಿಗೆ ಸಿನಿಮಾ ಮಾಡಿದರೆ ಅದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಸಬಹುದು.
ಸೌತ್ ಟಚ್‌ನೊಂದಿಗೆ ಹೊಸ ಪ್ರಯೋಗಕ್ಕೆ ಆಮೀರ್ ಸಿದ್ಧ?
ಕಳೆದ ಕೆಲವು ವರ್ಷಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕೆಜಿಎಫ್, ಆರ್.ಆರ್.ಆರ್, ಪುಷ್ಪ, ಲಿಯೋ ಯಂತಹ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿವೆ. ಹೀಗಾಗಿ ಬಾಲಿವುಡ್ನ ದೊಡ್ಡ ನಟರು ಸಹ ಸೌತ್ ನಿರ್ದೇಶಕರ ಜೊತೆ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಆಮೀರ್ ಖಾನ್ ಕೂಡ ಈ ಸಾಲಿನಲ್ಲಿ ನಿಲ್ಲುವ ಸೂಚನೆ ನೀಡಿದ್ದಾರೆ.

ಲೋಕೇಶ್ ನಿರ್ದೇಶನದ ಶೈಲಿ ಬಹಳ ಭಿನ್ನವಾಗಿದೆ. ಅವರ ಸಿನಿಮಾಗಳಲ್ಲಿ ಆಕ್ಷನ್ ಮತ್ತು ಕಥೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಆಮೀರ್ ಅವರಂತಹ ನಟ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಕಾಣಿಸಿಕೊಂಡರೆ ಅದು ಸಿನಿಪ್ರೇಮಿಗಳಿಗೆ ಒಂದು ಹೊಸ ರಸದೌತಣ ನೀಡಲಿದೆ.
'ಸಿತಾರೆ ಜಮೀನ್ ಪರ್' ಚಿತ್ರವು ನಟ ಆಮೀರ್ ಖಾನ್ ಮುಂದಿನ ಪ್ರಾಜೆಕ್ಟ್ ಆಗಿದ್ದು, ಇದು ಈಗಾಗಲೇ ಜೂನ್ 20, 2025 ರಂದು ಬಿಡುಗಡೆಯಾಗಿದೆ. ಇದು 2007 ರ 'ತಾರೆ ಜಮೀನ್ ಪರ್' ಚಿತ್ರದ ಯಶಸ್ವಿ ಮುಂದುವರಿದ ಭಾಗವಾಗಿದೆ. ಈ ಚಿತ್ರಕ್ಕೆ ಆರ್. ಎಸ್. ಪ್ರಸನ್ನ ಅವರು ನಿರ್ದೇಶನ ಮಾಡಿದ್ದಾರೆ.
ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ
ಆಮಿರ್ ಖಾನ್ ಬಹಳ ಆಯ್ದು ಸಿನಿಮಾಗಳನ್ನು ಮಾಡುತ್ತಾರೆ. ಅವರ ಒಂದು ಸಿನಿಮಾ ಹೊರಬರಲು ವರ್ಷಗಳೇ ಬೇಕಾಗಬಹುದು. ಆದರೆ ಅದು ಅತ್ಯುತ್ತಮ ಗುಣಮಟ್ಟದಲ್ಲಿರುತ್ತದೆ ಎನ್ನುವುದು ಅಭಿಮಾನಿಗಳ ನಂಬಿಕೆ. ಈ ಬಾರಿ ಲೋಕೇಶ್ ಕನಕರಾಜ್ ಅವರಂತಹ ಡೈರೆಕ್ಟರ್ ಜೊತೆ ಸೇರಿ ಸಿನಿಮಾ ಮಾಡಿದರೆ ಅದರ ಮಟ್ಟ ಮತ್ತಷ್ಟು ಎತ್ತರಕ್ಕೆ ಏರುವುದು ಖಚಿತ. ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಪರಿಪೂರ್ಣತೆಯನ್ನೇ ಬಯಸುವವರು.
ಹೀಗಾಗಿ ಈ ಸಿನಿಮಾ ಕೇವಲ ಒಂದು ಸಿನಿಮಾ ಆಗಿರದೆ ಒಂದು ಅದ್ಭುತ ಮ್ಯಾಜಿಕ್ ಆಗುವ ಸಾಧ್ಯತೆ ಇದೆ. ಆಮೀರ್ ಮತ್ತು ಲೋಕೇಶ್ ನಡುವಿನ ಮಾತುಕತೆ ಬೇಗನೆ ಫಲಪ್ರದವಾಗಲಿ ಎಂದು ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.


Click it and Unblock the Notifications











