ಕೊರೊನಾ ನಡುವೆಯೂ ಆಮೀರ್ ಖಾನ್ ಜೊತೆ ಲಡಾಖ್ ಗೆ ಹೊರಟ ನಟ ನಾಗ ಚೈತನ್ಯ

ಬಾಲಿವುಡ್ ನಟ ಆಮೀರ್ ಖಾನ್ ನಟನೆಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.

ಸದ್ಯ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದ್ದು, ಲಡಾಖ್ ಕಡೆ ಪಯಣ ಬೆಳೆಸುತ್ತಿದೆ. ಲಡಾಖ್ ಮತ್ತು ಕಾರ್ಗಿಲ್ ಪ್ರದೇಶದಲ್ಲಿ ಯುದ್ಧ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲು ಸಿನಿಮಾತಂಡ ಸಿದ್ಧವಾಗಿದೆ. ವಿಶೇಷ ಎಂದರೆ ಆಮೀರ್ ಖಾನ್ ಗೆ ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಸಾಥ್ ನೀಡಿದ್ದಾರೆ.

ಚಿತ್ರದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಾಲ್ ಸಿಂಗ್ ಚಡ್ಡ ಮೂಲಕ ನಾಗ ಚೈತನ್ಯ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಲಡಾಖ್ ನಲ್ಲಿ ಒಟ್ಟು 45 ದಿನಗಳ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ.

 Aamir Khan and Naga Chaitanya to shoot action Sequences in Ladakh

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಕಳೆದ ವರ್ಷ ಕ್ರಿಸ್ಮಸ್ ನಲ್ಲೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿದೆ. ಚಿತ್ರದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕರೀನಾ ಕಪೂರ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.ಕಳೆದ ವರ್ಷ ಲಾಕ್ ಡೌನ್ ಸಡಿಲಿಕೆ ಆದ ಬಳಿಕ ತನ್ನ ಭಾಗದ ಚಿತ್ರೀಕಕಣ ಪೂರ್ಣಮಾಡಿದ್ದಾರೆ ಕರೀನಾ.

ಲಾಲ್ ಸಿಂಗ್ ಚಡ್ಡ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್. ಆಸ್ಕರ್ ವಿನ್ನರ್ ಸಿನಿಮಾ ಇದಾಗಿದ್ದು, ಬಾಲಿವುಡ್ ನಲ್ಲಿ ಹೇಗೆ ಮೂಡಿಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Actor Aamir Khan and Naga Chaitanya to take action Sequences in Ladakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X